🌸🌸🌸🌸🌸🌸🌸🌸
*ದಿನಕ್ಕೊಂದು ಗುಂಪು ತಟ್ಟೆ*
*ದಿನಾಂಕ* :
1️⃣0️⃣➖0️⃣1️⃣➖2️⃣1️⃣
*ವಿಷಯ : ಭಾಷೆ*
*ಗುಂಪು ತಟ್ಟೆ : ಸಾಮೂಹಿಕ*
*_ಪರಿಚಯ_*
ಭಾಷೆಯ ಸಾಮೂಹಿಕ ತಟ್ಟೆಯಲ್ಲಿ ಬರುವ ಲೋಗೋಗಳು
1.ಹುಡುಗ ಹುಡುಗಿ- ಹಾಡು
2.ಬಾಯಿ-ಕಥೆ
3.ಇಲಿಗಳ ಮಧ್ಯೆ ಗಂಟೆ -ಸರಳ ಸಂಭಾಷಣೆ
4.ಡಬ್ಬದ ಮೇಲೆ ಮಂಗ- ಆಟ
5.ನಾಯಿ- ಚಿತ್ರ ಹೆಸರಿಸು
6.ಪುಟ್ಟ ಮಗು-ಆಡಿಕಲಿ
7.ಡಬ್ಬಿಯಲ್ಲಿ ಬ್ರಶ್-ಕ್ರಾಫ್ಟ್
ಈ 7 ಲೋಗೋ ಗಳು ಸಾಮೂಹಿಕ ತಟ್ಟೆಯಲ್ಲಿ ಬರುತ್ತವೆ.
ಸಾಮೂಹಿಕ ತಟ್ಟೆಯಲ್ಲಿ ಹುಡುಗ ಹುಡುಗಿ, ಬಾಯಿ,ಇಲಿಗಳ ಮಧ್ಯೆ ಗಂಟೆ, ಡಬ್ಬದ ಮೇಲೆ ಮಂಗ ಲೋಗೋಗಳು ಕಲಿಕಾ ಗೋಪುರದ *ಪೂರ್ವ ಸಿದ್ಧತಾ ಹಂತದ* ಚಟುವಟಿಕೆಗಳಾಗಿವೆ
ಮುಂದುವರೆದು ನಾಯಿ, ಪುಟ್ಟ ಮಗು,ಡಬ್ಬಿಯಲ್ಲಿ ಬ್ರಶ್ ಲೋಗೋಗಳು *ಕಲಿಕಾ ಪೂರಕ ಹಂತದ* ಚಟುವಟಿಕೆಗಳಾಗಿವೆ ಕಲಿಕಾ ಪೂರಕ ಚಟುವಟಿಕೆಗಳು ಕಲಿಕಾಂಶ ಗುಂಪಿನ ಕಲಿಕೆಗೆ ತುಂಬಾ ಮುಖ್ಯವಾದ ಚಟುವಟಿಕೆಗಳಾಗಿವೆ.
*ನಿರ್ವಹಣೆ ಹೇಗೆ :*
ನಲಿಕಲಿ ಯಾವುದೇ ವಿಷಯದ ತರಗತಿ ತೆಗೆದುಕೊಳ್ಳುವ ಮುನ್ನ ಈ ಸಾಮೂಹಿಕ ಗುಂಪಿನ ಚಟುವಟಿಕೆ ಮಾಡಬೇಕು. ಸಾಮೂಹಿಕ ಚಟುವಟಿಕೆ ನಿರ್ವಹಿಸಿದ ನಂತರ ಉಳಿದ 5 ತಟ್ಟೆಗಳನ್ನು ನೆಲದ ಮೇಲೆ ಹಾಕಬೇಕು ಮತ್ತು ಸಾಮೂಹಿಕ ತಟ್ಟೆಗೆ ಬಂದಿರುವ ಮಕ್ಕಳ ಮಾಹಿತಿಯನ್ನು ಶಿಕ್ಷಕರು ಹಿಂದಿನ ದಿನವೇ ಅರಿತಿರಬೇಕು ಅದರನ್ವಯ ಎಷ್ಟು ಮಕ್ಕಳು ಯಾವ ತರಗತಿ ಮಕ್ಕಳು ನಾಳೆಯ ತರಗತಿಗೆ ಸಾಮೂಹಿಕ ತಟ್ಟೆಗೆ ಬಂದಿರುವರು ಎಂಬುದ ಗಮನಿಸಿ ಆ ದಿನ ಮಾಡಬಹುದಾದ ಚಟುವಟಿಕೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಹೆಚ್ಚು ಮಕ್ಕಳು ಸಾಮೂಹಿಕ ಚಟುವಟಿಕೆ ಒಮ್ಮೆಲೇ ಬಂದಾಗ ಹಿಂದೆ ಎಷ್ಟು ಮಕ್ಕಳು ಯಾವ ಮಕ್ಕಳು ಈ ಚಟುವಟಿಕೆ ನಿರ್ವಹಿಸಿದ್ದಾರೆ ಎಂಬುದನ್ನು ಸುಗಮಕಾರರು ಗಮನಿಸಬೇಕು.
ಉದಾ: 2ನೇ ತರಗತಿ ಒಂದು ಮಗು 3ನೇ ಮೈಲಿಗಲ್ಲು ಚಟುವಟಿಕೆಯನ್ನು ಮಾಡಿದ್ದರೆ ಅದೇ ತರಗತಿ ಇನ್ನೊಂದು ಮಗು 2ನೇ ಮೈಲಿಗಲ್ಲಿನಲ್ಲಿ ಇರುತ್ತದೆ ಆದರೆ ಆ ಮಗು 3ನೇ ಮೈಲಿಗಲ್ಲು ಚಟುವಟಿಕೆಯನ್ನು ಗೆಳೆಯರೊಂದಿಗೆ ಮಾಡಿರುತ್ತದೆ. ಮುಂದಿನ ದಿನಗಳಲ್ಲಿ 2ನೇ ಮೈಲಿಗಲ್ಲು ಇದ್ದ ಮಗು 3ನೇ ಮೈಲಿಗಲ್ಲಿಗೆ ಬಂದಾಗ ಸುಗಮಕಾರರು ನೇರವಾಗಿ ಮಗುವಿಗೆ ಆ ಚಟುವಟಿಕೆ ಈ ಹಿಂದೆ ಮಾಡಿದ್ದನ್ನು ನೆನಪಿಸಿ ಕೆಲವು ಸಾಮಾನ್ಯ ಪ್ರಶ್ನೆ ಕೇಳಿ ಮುಂದುವರೆಯಬಹುದು. ಸುಗಮಕಾರರು ಒಮ್ಮೆಲೇ ಸಾಮೂಹಿಕ ಚಟುವಟಿಕೆಗೆ ಎಲ್ಲಾ ಮಕ್ಕಳು ಬರದಂತೆ ಸ್ವ ಕಲಿಕೆಯಲ್ಲಿ ಹೆಚ್ಚು ತೊಡಗಿಸಿ ಮುಂದಾಲೋಚನೆಯೊಂದಿಗೆ ತರಗತಿ ನಿರ್ವಹಿಸಬೇಕು ಚಟುವಟಿಕೆಯಲ್ಲಿ ಯಾವುದಾದರೂ ಒಂದು ಅಥವಾ 2 ಚಟುವಟಿಕೆಯನ್ನು ಸುಗಮಕಾರರು ನಿಗಧಿತ 10 ನಿಮಿಷಗಳ ಕಾಲಾವಧಿಯಲ್ಲಿ ನಿರ್ವಹಿಸಬೇಕು ಸಾಮೂಹಿಕ ಚಟುವಟಿಕೆ ನಿರ್ವಹಿಸಿದ ನಂತರ ಉಳಿದ ಗುಂಪು ತಟ್ಟೆಗಳನ್ನು ನೆಲದ ಮೇಲೆ ಹಾಕಿಸಿ ಮುಂದಿನ ತರಗತಿ ಪ್ರಕ್ರಿಯೆ ನಿರ್ವಹಿಸಬೇಕು .
ಈ ರೀತಿಯಾಗಿ 10 ನಿಮಿಷ ಅವಧಿಯಲ್ಲಿ ಸಾಮೂಹಿಕ ಚಟುವಟಿಕೆ ನಿರ್ವಹಣೆ ಮಾಡಬೇಕು.
ನಲಿಕಲಿ ಕ್ರಿಯಾಶೀಲ ತಾರೆಯರ *ರಸಪ್ರಶ್ನೆ ಲಿಂಕ್*
https://nalikalirenukaradhyatlm.blogspot.com/2021/01/48_9.html
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
No comments:
Post a Comment