🏵️🏵️🏵️🏵️🏵️🏵️🏵️
*ದಿನಕ್ಕೊಂದು ಲೋಗೋ**
*ದಿನ -80*
(ಮೂಲ : ಬೆಳ್ಳಿಮೋಡ ನಲಿಕಲಿ ಸಮಗ್ರ ಸಾಹಿತ್ಯ)
ದಿನಾಂಕ : 0️⃣3️⃣➖0️⃣1️⃣➖2️⃣0️⃣2️⃣1️⃣
*12.ಲೋಗೋ :ಮಿಡತೆ*
**ಚಟುವಟಿಕೆ ಹೆಸರು : ಮಾಡಿನೋಡು*
ನಲಿಕಲಿಯ *ಪರಿಸರ ಅಧ್ಯಯನ* ದಲ್ಲಿ ಬರುವ ಒಂದು ವಿಶಿಷ್ಟ ಲೋಗೋ ಇದಾಗಿದೆ. ಇದು ಕಲಿಕಾ ಗೋಪುರದಲ್ಲಿ *ಬಳಕೆ ಹಂತ* ದ ಚಟುವಟಿಕೆಗಳಲ್ಲಿ ಬರುವ ಲೋಗೋ ಆಗಿದೆ ಮತ್ತು *ಸಾಮೂಹಿಕ ಮತ್ತು 4ನೇ ತಟ್ಟೆ* ಯಲ್ಲಿ ಈ ಚಟುವಟಿಕೆಯು ನಡೆಯುತ್ತದೆ .
1ನೇ ತರಗತಿಯಲ್ಲಿ 00 ಕಾರ್ಡುಗಳು
2ನೇ ತರಗತಿಯಲ್ಲಿ 03 ಕಾರ್ಡುಗಳು
3ನೇ ತರಗತಿಯಲ್ಲಿ 00 ಕಾರ್ಡುಗಳು ಇರುತ್ತವೆ
_ಚಟುವಟಿಕೆಯ ವಿಶ್ಲೇಷಣೆ :_
> 'ಮಾಡಿಕಲಿ' ತತ್ವವನ್ನು ಆಧರಿಸಿದೆ.
> ಕಲಿಕಾರ್ಥಿಗಳಲ್ಲಿ ಆಸಕ್ತಿ ಮೂಡಿಸುತ್ತದೆ.
> ಕಲಿಕಾರ್ಥಿಗಳು ಅನುಭವದ ಮೂಲಕ ಕಲಿಯುವಂತೆ ಮಾಡುತ್ತದೆ.
> ಸಕ್ರಿಯವಾಗಿ ಭಾಗವಹಿಸುವಂತೆ ಮಾಡುತ್ತದೆ.
_ಚಟುವಟಿಕೆಗಳ ಉದ್ದೇಶ:_
> ಕಲಿಕಾರ್ಥಿಗಳಲ್ಲಿ ಕಲ್ಪನಾಶಕ್ತಿಯನ್ನು ಹೆಚ್ಚಿಸುವುದು.
> ತಮ್ಮ ಜ್ಞಾನವನ್ನು ತಾವೇ ಕಟ್ಟಿಕೊಳ್ಳಲು ಅವಕಾಶ ಕಲ್ಪಿಸುವುದು,
> ಪಡೆದ ಅನುಭವವನ್ನು ಸಮನ್ವಯಗೊಳಿಸುವುದು,
_ಚಟುವಟಿಕೆಯನ್ನು ಹೀಗೆ ಮಾಡೋಣ:_
> ಕಾರ್ಡ್‌ನಲ್ಲಿರುವ ಸೂಚನೆಗಳಿಗೆ ಅನುಗುಣವಾಗಿ ಕಲಿಕಾರ್ಥಿಗಳಿಂದ ಚಟುವಟಿಕೆಯನ್ನು ಮಾಡಿಸೋಣ,
> ಅಗತ್ಯವಿದ್ದಲ್ಲಿ ಗೆಳೆಯರ ಸಹಾಯ ಪಡೆಯಲು ತಿಳಿಸೋಣ.
>ಅಗತ್ಯವಿದ್ದಲ್ಲಿ ಸೂಕ್ತ ಸಲಹೆ, ಸೂಚನೆಗಳೊಂದಿಗೆ ಮಾರ್ಗದರ್ಶನ ಮಾಡೋಣ
ಕಲಿಕಾರ್ಥಿಗಳು ಮಾಡಿದ ಚಟುವಟಿಕೆಗಳನ್ನು ವೀಕ್ಷಿಸಿ ದೃಢೀಕರಿಸೋಣ.
_ನಿರೀಕ್ಷಿತ ಕಲಿಕೆಯ ಫಲಗಳು:_
>ಸ್ವ-ಅನುಭವವನ್ನು ಪಡೆಯುವರು.
> ಜ್ಞಾನವನ್ನು ತಾವೇ ಕಟ್ಟಿಕೊಳ್ಳುವರು.
> ಪಡೆದ ಜ್ಞಾನ/ಅನುಭವವನ್ನು ನಿತ್ಯ ಜೀವನದ ಸನ್ನಿವೇಶಗಳೊಂದಿಗೆ ಆನ್ವಯಿಸುವರು.
*ನಲಿಕಲಿ app ಲಿಂಕ್*
https://play.google.com/store/apps/details?id=a1226930.wpu
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
No comments:
Post a Comment