🌸🌸🌸🌸🌸🌸🌸🌸
*ದಿನಕ್ಕೊಂದು ಗುಂಪು ತಟ್ಟೆ*
*ದಿನ -8*
*ದಿನಾಂಕ* :
1️⃣8️⃣➖0️⃣1️⃣➖2️⃣1️⃣
*ವಿಷಯ : ಗಣಿತ*
*ಗುಂಪು ತಟ್ಟೆ : 1ನೇ ತಟ್ಟೆ/ಗುಂಪು*
*_ಪರಿಚಯ_*
ಗಣಿತದ 1ನೇ ತಟ್ಟೆಯಲ್ಲಿ ಬರುವ 23 ಲೋಗೋಗಳು
1.ಸ್ಥಾನಬೆಲೆ - ಅಬಾಕಸ್
2.ಎಣಿಕೆ ಬರವಣಿಗೆ- ಹಂಸ 3.ಹಿಂದೆ-ಮುಂದೆ- ಮಧ್ಯೆ -ಗಂಡಬೇರುಂಡ
4. ಹೆಚ್ಚು ಕಡಿಮೆ ಸಮ - ಕೋಳಿ ಮತ್ತು ಮರಿಗಳು
5.ಕನಿಷ್ಠ ಗರಿಷ್ಠ -ನವಿಲು 6.ಕ್ರಮವಾಚಕಗಳು- ಏಣಿ
8.ಸರಿ ಬೆಸ-ಮರಕುಟಿಗ
9.ಸಂಕಲನ - ಕಡ್ಡಿ ಕಚ್ಚಿಕೊಂಡು ಹಾರುವ ಪಕ್ಷಿ
10.ವ್ಯವಕಲನ -ಬಾತುಕೋಳಿ
11.ಮಿಶ್ರಕ್ರಿಯೆ -_+×÷
12. ಏರಿಕೆ ಇಳಿಕೆ -ಜಾರುಬಂಡೆ 13.ಗುಣಾಕಾರ - ಜೋಡಿ ಕೊಕ್ಕರೆ
14.ತೂಕ- ತೂಕದ ಬಟ್ಟು.
15.ದ್ರವದ ಅಳತೆ-ಲೀಟರ್
16.ಆಕೃತಿಗಳು ರೇಖಾಕೃತಿಘನಾಕೃತಿ- ಕೈವಾರ 17.ಉದ್ದದ ಅಳತೆ- ಸ್ಕೇಲ್ 18.ಕಾಲದ ಗಣನೆ -ಗಡಿಯಾರ
19.ಹಣ-ನಾಣ್ಯ
21.ಭಾಗಾಕಾರ-ಹುಂಜ
21.ಭಿನ್ನರಾಶಿ- ಪಾರಿವಾಳ 22.ದತ್ತಾಂಶಗಳ -ಬಾವಲಿ
23.ಸಮಮಿತಿ ವಿನ್ಯಾಸಗಳು- ಕ್ಯಾಲ್ಕುಲೇಟರ್
*ನಿರ್ವಹಣೆ:*
ಈ 23 ಲೋಗೋಗಳು 1ನೇ ತಟ್ಟೆಯಲ್ಲಿ ಬರುತ್ತವೆ
ಇಲ್ಲಿ ಈ
23 ಲೋಗೋಗಳು ಕಲಿಕಾ ಗೋಪುರದ ಹಂತಗಳಲ್ಲಿ *3ನೇ ಹಂತ* ವಾದ *ಕಲಿಕಾಂಶ ಹಂತದ* ಚಟುವಟಿಕೆಗಳಾಗಿ ಕಾರ್ಯ ನಿರ್ವಹಿಸುತ್ತವೆ.
1ನೇ ತಟ್ಟೆಯಲ್ಲಿ ಬಂದಿರುವ ಕಾರ್ಡ್ ಗಳ ಸಂಖ್ಯೆ
1ನೇ ತರಗತಿ ಕಾರ್ಡ್ ಗಳು
: 37 ಕಾರ್ಡ್ಸ್
2ನೇ ತರಗತಿಕಾರ್ಡ್ ಗಳು
: 38 ಕಾರ್ಡ್ಸ್
3ನೇ ತರಗತಿ ಕಾರ್ಡ್ ಗಳು
: 40ಕಾರ್ಡ್ಸ್
ಬರುತ್ತವೆ.
ಈ ಗುಂಪು *ಶಿಕ್ಷಕರ ಸಂಪೂರ್ಣ ಸಹಾಯ* ದಲ್ಲಿ ನಿರ್ವಹಣೆಯಾಗುತ್ತದೆ. ಇದು ಅತ್ಯಂತ ಮಹತ್ವದ ಹಂತವಾಗಿದೆ ಶಿಕ್ಷಕರು ಇಲ್ಲಿ ಬಂದಿರುವ ಕಲಿಕಾಂಶ ಚಟುವಟಿಕೆಗಳನ್ನು ತುಂಬಾ ಪರಿಣಾಮಕಾರಿಯಾಗಿ ಮಕ್ಕಳಿಗೆ ದೃಡೀಕರಣವಾಗುವ ರೀತಿ ಮನದಟ್ಟು ಮಾಡಬೇಕಾಗಿದೆ. ಶಿಕ್ಷಕರು ಈ ತಟ್ಟೆಯಲ್ಲಿ 40 ನಿ. ಕಾಲ ಇದ್ದು ಚಟುವಟಿಕೆಗಳನ್ನು ಮಾಡಿಸಬೇಕು ಇಲ್ಲಿ ಮಕ್ಕಳು ಉತ್ತಮವಾಗಿ ಕಲಿತರೆ ಮುಂದಿನ ಗುಂಪುಗಳಲ್ಲಿ ತುಂಬಾ ಉತ್ತಮವಾಗಿ ಪರಿಣಾಮಕಾರಿಯಾಗಿ ಚಟುವಟಿಕೆಗಳನ್ನು ಯಾರ ಸಹಾಯವಿಲ್ಲದೆ ಮಾಡಬಹುದು.
ಸುಗಮಕಾರರು ಗಣಿತ ವಿಷಯದಲ್ಲಿ 10 ನಿಮಿಷಗಳ ಸಾಮೂಹಿಕ ಚಟುವಟಿಕೆ ನಂತರದಲ್ಲಿ 10 ನಿಮಿಷ ಪ್ರಗತಿನೋಟ ನೋಡಿಕೊಂಡು ಸಾಮಾಗ್ರಿಗಳೊಂದಿಗೆ ಮಕ್ಕಳು ಕುಳಿತುಕೊಂಡ ನಂತರ 10 ನಿಮಿಷದಲ್ಲಿ ಕ್ರಮವಾಗಿ 5,4,3,2ನೇ ತಟ್ಟೆಗಳಿಗೆ ಹೋಗಿ ಮಾರ್ಗದರ್ಶನ ಮಾಡುವರು ಹೀಗೆ 2 ನೇ ಗುಂಪಿಗೆ ಮಾರ್ಗದರ್ಶನ ಮಾಡಿ 1 ನೇ ಗುಂಪಿಗೆ ಬಂದು 40 ನಿ.ಕಾಲ ಚಟುವಟಿಕೆಗಳನ್ನು ಮಾಡಿಸುವರು.
ಈ ರೀತಿಯಾಗಿ 1ನೇ ತಟ್ಟೆ ನಿರ್ವಹಣೆಯಾಗುವುದು.
*ನಲಿಕಲಿ app*
ನಲಿಕಲಿ ಸಕಲವೂ ಇಲ್ಲಿ ಲಭ್ಯ
https://play.google.com/store/apps/details?id=a1226930.wpu
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
No comments:
Post a Comment