ನಿಮ್ಮ ವೇದಿಕೆ
ನಿಮ್ಮ ವೇದಿಕೆ.....6
ಶ್ರೀಯುತ ಜಾವೇದ್ ಭಾಷಾ (ನಲಿಕಲಿ ಶಿಕ್ಷಕರು)
ಸ.ಹಿ.ಪ್ರಾ.ಶಾಲೆ
ಕಂಡಿಕೇರಿ
ಹಿರಿಯೂರು .ತಾ.
ಚಿತ್ರದುರ್ಗ. ಜಿ.
ಎಲ್ಲರಿಗೂ ನಮಸ್ತೆ..
ನಲಿಕಲಿ ಎಂಬುದು ನಮ್ಮ ಹೆಮ್ಮೆ . ನಲಿಕಲಿ ಎಂಬ ಪದ್ಧತಿ ಅನೇಕ ವೈವಿಧ್ಯತೆಗಳ ಆಗರ ನಮ್ಮ ನಲಿಕಲಿ app ಬ್ಲಾಗ್ ನಲ್ಲಿ ಒಂದು ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ ಅದುವೇ ನಿಮ್ಮ ವೇದಿಕೆ
ಇದು ನಲಿಕಲಿ ಶಿಕ್ಷಕರ ಕ್ರಿಯಾಶೀಲತೆಗೆ ಒಂದು ಪುಟ್ಟ ವೇದಿಕೆಯಾಗಿದೆ ಅನೇಕ ಶಿಕ್ಷಕರಿಗೆ ಇದು ದಿಕ್ಸೂಚಿ ಸಹಾಯಕ ಆಗಬಲ್ಲದು ಎಂಬ ಆಶಯದೊಂದಿಗೆ ಇಂದು ನಿಮ್ಮ ವೇದಿಕೆಯಡಿಯಲ್ಲಿ 6ನೇ ಶಾಲೆಯ ಪರಿಚಯ ನೀಡುತ್ತಿದ್ದೇವೆ.
ಈ ದಿನದ ನಲಿಕಲಿ ಕ್ರಿಯಾಶೀಲ ಶಿಕ್ಷಕರಾದಂತಹ ಶ್ರೀಯುತ ಜಾವೇದ್ ಭಾಷಾ ಸರ್ ಅವರು ಮತ್ತು ಅವರ ಶಾಲೆ. ಈ ಶಾಲೆಯು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಶಾಲೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಂಡಿಕೇರಿ ಶಾಲೆಯಾಗಿದೆ.
ಈ ಶಾಲೆಯು 2019-20ನೇ ಸಾಲಿನ ಜಿಲ್ಲೆಯ ಅತ್ಯುತ್ತಮ ನಲಿಕಲಿ ಶಾಲೆಗಳ ಪೈಕಿ ಒಂದು ಎಂಬುದು ಹೆಮ್ಮೆಯ ಸಂಗತಿ ಈ ಶಾಲೆಯಲ್ಲಿ ನಲಿಕಲಿ ವಿಧಾನವನ್ನು ಅತ್ಯುತ್ತಮ ರೀತಿಯಲ್ಲಿ ನಡೆಸುತ್ತಿರುವ ಕೀರ್ತಿ ಶ್ರೀ ಯುತ ಜಾವೇದ್ ರವರಿಗೆ ಸಲ್ಲುತ್ತಿದೆ ಇಲ್ಲಿಯ ಮಕ್ಕಳ ತೊಡಗುವಿಕೆ ವಿಭಿನ್ನ ವಿಧಾನ ಗಳ ಮೂಲಕ ಸಮುದಾಯದ ಮೆಚ್ಚುಗೆಗೆ ಶಾಲೆ ಪಾತ್ರವಾಗಿದೆ .ಈ ಶಾಲೆಗೆ ಭೇಟಿ ನೀಡುವ ಅನೇಕ ಅಧಿಕಾರಿಗಳು ಶಾಲೆಯ ಶಿಕ್ಷಕರ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ ಅಲ್ಲದೆ ಇಲ್ಲಿಯ ಶಿಕ್ಷಕರು ಇಲಾಖೆಯ ಅಧಿಕಾರಿಗಳ ಪ್ರೋತ್ಸಾಹವನ್ನು ಸ್ಮರಿಸುತ್ತಾರೆ. ನಲಿಕಲಿಯನ್ನು ವಿಭಿನ್ನವಾಗಿ ಅಳವಡಿಸಿಕೊಂಡಿರುವ ಶಾಲೆ ಇದಾಗಿದೆ .
ಜಾವೇದ್ ರವರು ಸದಾ ಮಕ್ಕಳ ಕಲಿಯುವಿಕೆಗಾಗಿ ನೂರಾರು ಸರಳ ಕಲಿಕೋಪಕರಣಗಳನ್ನು ತಯಾರಿಸಿಕೊಂಡಿದ್ದಾರೆ ಅದು ಅವರ ಶ್ರಮದಿಂದಾಗಿ ಕಡಿಮೆ ವೆಚ್ಚದಲ್ಲಿ ತಯಾರಾಗಿವೆ ಮಕ್ಕಳ ಕೈಯಿಂದಲೂ ಅನೇಕ ಕ್ರಾಫ್ಟ್ ಚಟುವಟಿಕೆ ಸರಳ ಪ್ರಯೋಗಗಳು ನಾಟಕ ಹಾಡು ಮುಂತಾದವುಗಳನ್ನು ವಿಭಿನ್ನವಾಗಿ ಮಾಡಿಸುತ್ತಿದ್ದಾರೆ
ಹೆಚ್ಚು ಖುಷಿಯ ಹೆಮ್ಮೆಯ ವಿಚಾರವೆಂದರೆ ನಲಿಕಲಿ ಕುರಿತು ತಮಗಿರುವ ಆಸಕ್ತಿ ಕುರಿತು ಜಾವೇದ್ ರವರು ತಮ್ಮ ನರ ನಾಡಿಗಳಲೆಲ್ಲಾ ನಲಿಕಲಿಯೇ ತುಂಬಿದೆ ಎಂದು ಹೇಳುವ ಅವರ ನುಡಿಗಳು ನಲಿಕಲಿ ವಿಧಾನದ ಮೇಲೆ ಅವರಿಗಿರುವ ಪ್ರೀತಿಯನ್ನು ತೋರಿಸುತ್ತದೆ.
ಕಲಿಕೋಪಕರಣಗಳು ಜೋಡಣೆ
ಅವರ ಶಾಲೆಯ ನಲಿಕಲಿ ತರಗತಿ ವಿಡಿಯೋ ಮತ್ತು ನಲಿಕಲಿ ಕಲಿಕೋಪಕರಣಗಳು ಮತ್ತು ಅವರ ಶಾಲೆಯ ನಲಿಕಲಿ ಕೊಠಡಿ ಕೂಡ ಇಲ್ಲಿ ಲಭ್ಯವಿದೆ ಅವರ ಕಾರ್ಯವು ಎಲ್ಲರಿಗೂ ಪ್ರೇರಣೆ ನೀಡುತ್ತದೆ ಉತ್ಸಾಹ ಮೂಡಿಸುತ್ತದೆ .
ಇವರಿಗೆ ದೊರೆತಿರುವ ಗೌರವಗಳು
ಈ ಶಾಲೆಯ ನಲಿಕಲಿ ಕೊಠಡಿ ವಿಡಿಯೋ
ತರಗತಿ ಫೋಟೋಗಳು ಮತ್ತು ಕಲಿಕೋಪರಣಗಳ ಫೋಟೋಗಳ pdf ಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿರಿ
https://drive.google.com/file/d/1vXx8j0ld1HbwspzKA_D8MlhPyBTf1QQR/view?usp=drivesdk
ನಿಮ್ಮ ವೇದಿಕೆ ಕಾರ್ಯಕ್ರಮ ಕುರಿತು ಮತ್ತು ಈ ಶಾಲೆಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಈ ಕೆಳಗಿನ ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಬಹುದು
ವಂದನೆಗಳೊಂದಿಗೆ,
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ, ಶಿವಮೊಗ್ಗ
ನಿಮ್ಮ ವೇದಿಕೆ ಕಾರ್ಯಕ್ರಮ ಮಾರ್ಗದರ್ಶಕರು
ಶ್ರೀಯುತ ಫಣೀಶ
ಹಿರಿಯ ಉಪನ್ಯಾಸಕರು
ಡಯಟ್ ಶಿವಮೊಗ್ಗ
ನಲಿಕಲಿ ಕೊಠಡಿ ತುಂಬಾ ಚೆನ್ನಾಗಿದೆ ಸಾರ್ ಗೆ ತುಂಬಾ ಧನ್ಯವಾದಗಳು ಕಲಿಕಾ ಸಾಮಗ್ರಿಗಳು ವಿಷಯವಾರು ಸಿದ್ಧತೆ ಚೆನ್ನಾಗಿದೆ ಅವರ ಶ್ರಮಕ್ಕೆ ಧನ್ಯವಾದಗಳು ಸಾರ್
ReplyDeleteಮಾದರಿ ನಲಿ ಕಲಿ ತರಗತಿ.ಸೂಪರ ಸರ್
ReplyDelete