Friday, 15 January 2021

ದಿನಕ್ಕೊಂದು ತಟ್ಟೆ /ಗುಂಪು ದಿನ 6

 🌸🌸🌸🌸🌸🌸🌸🌸

 

*ದಿನಕ್ಕೊಂದು ಗುಂಪು ತಟ್ಟೆ*

            *ದಿನ -6* 


 *ದಿನಾಂಕ* : 

1️⃣5️⃣➖0️⃣1️⃣➖2️⃣1️⃣


 *ವಿಷಯ : ಭಾಷೆ* 


 *ಗುಂಪು ತಟ್ಟೆ : 5ನೇ ತಟ್ಟೆ/ಗುಂಪು* 


 *_ಪರಿಚಯ_* 


ಬಾಷೆಯ 5ನೇ ತಟ್ಟೆಯಲ್ಲಿ ಬರುವ ಲೋಗೋಗಳು


1.ವಾಚಕಗಳು - ಪುಸ್ತಕ ಹಿಡಿದು ಓದುತ್ತಿರುವ ಗೊಂಬೆ


2.ಹಾವು - ನೆನಪಿನ ಆಟ


3.ಸಿಂಹ - ನನ್ನ ಸಾಧನೆ


4. ಝೀಬ್ರಾ - ಸಮಗ್ರ ಮೌಲ್ಯಮಾಪನ



 *ನಿರ್ವಹಣೆ:*


ಈ 4 ಲೋಗೋಗಳು 5ನೇ ತಟ್ಟೆಯಲ್ಲಿ ಬರುತ್ತವೆ.


ಇಲ್ಲಿ ಈ 4 ಲೋಗೋಗಳು ಕಲಿಕಾ ಗೋಪುರದ ಹಂತಗಳಲ್ಲಿ *6ನೇ ಹಂತ* ವಾದ *ಮೌಲ್ಯಮಾಪನ ಹಂತ* ದ ಚಟುವಟಿಕೆಗಳಾಗಿ ಕಾರ್ಯ ನಿರ್ವಹಿಸುತ್ತವೆ.


5ನೇ ತಟ್ಟೆಯಲ್ಲಿ ಬಂದಿರುವ ಕಾರ್ಡ್ ಗಳ ಸಂಖ್ಯೆ 


1ನೇ ತರಗತಿ ಕಾರ್ಡ್ ಗಳು :

47 [ವಾಚಕ + ಕಾರ್ಡ್ಸ್】


2ನೇ ತರಗತಿ ಕಾರ್ಡ್ ಗಳು :

39 【ವಾಚಕ + ಕಾರ್ಡ್ಸ್】


3ನೇ ತರಗತಿ ಕಾರ್ಡ್ ಗಳು :

44 【ವಾಚಕ + ಕಾರ್ಡ್ಸ್】


        ಈ ಗುಂಪು *ಸ್ವ ಕಲಿಕೆ* ಯಲ್ಲಿ ನಿರ್ವಹಣೆಯಾಗುವುದು.

ಕಲಿಕಾಂಶ  ಹಂತ ಅಭ್ಯಾಸ ಹಂತ ಮತ್ತು ಬಳಕೆ ಹಂತದಲ್ಲಿ ಚಟುವಟಿಕೆಗಳನ್ನು ಮಕ್ಕಳು ಉತ್ತಮವಾಗಿ  ನೆರವೇರಿಸಿದ್ದಲ್ಲಿ  ಕಲಿತ ವಿಷಯವನ್ನು ಈ 5ನೇ ತಟ್ಟೆಯಲ್ಲಿ ಸ್ವ ಕಲಿಕೆ ಮೂಲಕ ದೃಢೀಕರಿಸಿಕೊಳ್ಳುವರು.



ಸುಗಮಕಾರರು ಭಾಷಾ ವಿಷಯದಲ್ಲಿ 10 ನಿಮಿಷಗಳ ಸಾಮೂಹಿಕ ಚಟುವಟಿಕೆ ನಂತರದಲ್ಲಿ 10 ನಿಮಿಷ ಪ್ರಗತಿನೋಟ ನೋಡಿಕೊಂಡು ಸಾಮಾಗ್ರಿಗಳೊಂದಿಗೆ ಮಕ್ಕಳು ಕುಳಿತುಕೊಂಡ ನಂತರ 10 ನಿಮಿಷದಲ್ಲಿ ಕ್ರಮವಾಗಿ 5,4,3,1 ತಟ್ಟೆಗಳಿಗೆ ಹೋಗಿ ಮಾರ್ಗದರ್ಶನ ಮಾಡುವರು ಹೀಗೆ ಸಾಮೂಹಿಕ ಚಟುವಟಿಕೆ ಮುಗಿಸಿ ಮಕ್ಕಳು ಕಾರ್ಡ್ ತೆಗೆದುಕೊಂಡು ಅವರವರ  ತಟ್ಟೆಗಳಿಗೆ ಕುಳಿತುಕೊಂಡ ನಂತರ ಸುಗಮಕಾರರು 5ನೇ ಗುಂಪಿಗೆ ಮಾರ್ಗದರ್ಶನ ಮಾಡಿ 4 ನೇ ಗುಂಪಿಗೆ ಹೋಗುವರು.


ಈ ರೀತಿಯಾಗಿ 5ನೇ ತಟ್ಟೆ/ಗುಂಪು ನಿರ್ವಹಣೆಯಾಗುವುದು


★★★★★★★★★★★


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ


 *ಕಲಿಯುತ್ತಾ ನಲಿಯೋಣ ವಿಭಾಗ*

https://nalikalirenukaradhyatlm.blogspot.com/search/label/%E0%B2%95%E0%B2%B2%E0%B2%BF%E0%B2%AF%E0%B3%81%E0%B2%A4%E0%B3%8D%E0%B2%A4%E0%B2%BE%20%E0%B2%A8%E0%B2%B2%E0%B2%BF%E0%B2%AF%E0%B3%8B%E0%B2%A3

No comments:

Post a Comment