Thursday, 14 January 2021

ದಿನಕ್ಕೊಂದು ಗುಂಪು ತಟ್ಟೆ 4

 🌸🌸🌸🌸🌸🌸🌸🌸

 

*ದಿನಕ್ಕೊಂದು ಗುಂಪು ತಟ್ಟೆ*

            *ದಿನ -5* 


 *ದಿನಾಂಕ* : 

1️⃣4️⃣➖0️⃣1️⃣➖2️⃣1️⃣


 *ವಿಷಯ : ಭಾಷೆ* 


 *ಗುಂಪು ತಟ್ಟೆ : 4ನೇ ತಟ್ಟೆ/ಗುಂಪು* 


 *_ಪರಿಚಯ_* 


ಬಾಷೆಯ 4ನೇ ತಟ್ಟೆಯಲ್ಲಿ ಬರುವ ಲೋಗೋಗಳು


1.ಕುರಿ -ಚಿತ್ರಗಳಿಗೆ ಪದ ಹೊಂದಿಸು


2. ಆಮೆ - ಅಶ ಆಟ/ ಪದ ಶಬ್ದ ಆಟ


3.ಜಿರಾಫೆ - ಪದಗಳ ಆಟ / ಭಾಷಾ ಆಟ


4.ಒಂಟೆ - ಪದಬಂಧ


5.ಕುದುರೆ - ಗೆಲುವಿನ ಆಟ


6.ಏಡಿ - ಓದಿ ಉತ್ತರಿಸು.


7.ಜೋಡಿ ಪೆನ್ಸಿಲ್ - ಅಭ್ಯಾಸ ಪುಸ್ತಕ



 *ನಿರ್ವಹಣೆ:*


ಈ 7 ಲೋಗೋಗಳು 4ನೇ ತಟ್ಟೆಯಲ್ಲಿ ಬರುತ್ತವೆ.


ಇಲ್ಲಿ ಈ 7 ಲೋಗೋಗಳು ಕಲಿಕಾ ಗೋಪುರದ ಹಂತಗಳಲ್ಲಿ *5ನೇ ಹಂತ* ವಾದ *ಬಳಕೆ ಹಂತ* ದ ಚಟುವಟಿಕೆಗಳಾಗಿ ಕಾರ್ಯ ನಿರ್ವಹಿಸುತ್ತವೆ.


4ನೇ ತಟ್ಟೆಯಲ್ಲಿ ಬಂದಿರುವ ಕಾರ್ಡ್ ಗಳ ಸಂಖ್ಯೆ 


1ನೇ ತರಗತಿ ಕಾರ್ಡ್ ಗಳು :

18+15[ಅಭ್ಯಾಸ ಪುಸ್ತಕ ಹಾಳೆ]


2ನೇ ತರಗತಿ ಕಾರ್ಡ್ ಗಳು :

27+21[ಅಭ್ಯಾಸ ಪುಸ್ತಕ ಹಾಳೆ]


3ನೇ ತರಗತಿ ಕಾರ್ಡ್ ಗಳು :

4+16[ಅಭ್ಯಾಸ ಪುಸ್ತಕ ಹಾಳೆ]


        ಈ ಗುಂಪು *ಗೆಳೆಯನ ಭಾಗಶಃ ಸಹಾಯ* ದಲ್ಲಿ ನಿರ್ವಹಣೆಯಾಗುವುದು.

ಕಲಿಕಾಂಶ  ಹಂತ ಅಭ್ಯಾಸ ಹಂತದಲ್ಲಿ ಚಟುವಟಿಕೆಗಳನ್ನು ಮಕ್ಕಳು ಉತ್ತಮವಾಗಿ  ನೆರವೇರಿಸಿದ್ದಲ್ಲಿ  ಭಾಗಶಃ ಗೆಳೆಯರ ಸಹಾಯ ಪಡೆದು ಆಟಗಳ ಮೂಲಕ ಕಲಿತ ವಿಷಯವನ್ನು ಮತ್ತಷ್ಟು ಈ 4ನೇ ತಟ್ಟೆಯಲ್ಲಿ ದೃಢೀಕರಿಸಿಕೊಳ್ಳುವರು.



ಸುಗಮಕಾರರು ಭಾಷಾ ವಿಷಯದಲ್ಲಿ 10 ನಿಮಿಷಗಳ ಸಾಮೂಹಿಕ ಚಟುವಟಿಕೆ ನಂತರದಲ್ಲಿ 10 ನಿಮಿಷ ಪ್ರಗತಿನೋಟ ನೋಡಿಕೊಂಡು ಸಾಮಾಗ್ರಿಗಳೊಂದಿಗೆ ಮಕ್ಕಳು ಕುಳಿತುಕೊಂಡ ನಂತರ 10 ನಿಮಿಷದಲ್ಲಿ ಕ್ರಮವಾಗಿ 5,4,3,1 ತಟ್ಟೆಗಳಿಗೆ ಹೋಗಿ ಮಾರ್ಗದರ್ಶನ ಮಾಡುವರು ಹೀಗೆ 5 ನೇ ಗುಂಪಿಗೆ ಮಾರ್ಗದರ್ಶನ ಮಾಡಿ 4 ನೇ ಗುಂಪಿಗೂ ಬಂದು ಮಕ್ಕಳ ಕಾರ್ಡ್ ಪುಸ್ತಕ ಅವರು ಬಂದಿರುವ ಚಟುವಟಿಕೆಗಳನ್ನು ಗಮನಿಸಿ ಅದೇ ಗುಂಪಿನಲ್ಲಿ ಇರುವ ಹಿರಿಯ ವಿದ್ಯಾರ್ಥಿ ಅಥವಾ ಕಲಿಕೆಯಲ್ಲಿ ಆ ಮೈಲಿಗಲ್ಲು ಮುಗಿಸಿರುವ ಗೆಳೆಯರ ಅಗತ್ಯ ವೇಳೆ ಅನಿವಾರ್ಯವಾದ ಸಂದರ್ಭದಲ್ಲಿ ಅವರ ಸಹಾಯ ಪಡೆಯಲು ಸೂಚಿಸಿ ಚಟುವಟಿಕೆ ಸಂಬಂಧಿಸಿದಂತೆ ಮಾರ್ಗದರ್ಶನ ಮಾಡಿ 3 ನೇ ತಟ್ಟೆಗೆ ತೆರಳುವರು.


ಈ ರೀತಿಯಾಗಿ 4ನೇ ತಟ್ಟೆ/ಗುಂಪು ನಿರ್ವಹಣೆಯಾಗುವುದು


★★★★★★★★★★★


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ


 *ನಲಿಕಲಿ app ಲಿಂಕ್*

https://play.google.com/store/apps/details?id=a1226930.wpu

No comments:

Post a Comment