🌸🌸🌸🌸🌸🌸🌸🌸
*ದಿನಕ್ಕೊಂದು ಗುಂಪು ತಟ್ಟೆ*
*ದಿನ -4*
*ದಿನಾಂಕ* :
1️⃣3️⃣➖0️⃣1️⃣➖2️⃣1️⃣
*ವಿಷಯ : ಭಾಷೆ*
*ಗುಂಪು ತಟ್ಟೆ : 3ನೇ ತಟ್ಟೆ/ಗುಂಪು*
*_ಪರಿಚಯ_*
ಬಾಷೆಯ 3ನೇ ತಟ್ಟೆಯಲ್ಲಿ ಬರುವ ಲೋಗೋಗಳು
1.ಹಸು - ಚಿತ್ರಪದ ಮತ್ತು ಸಾಧನ
2.ಜಿಂಕೆ - ಚಿತ್ರ ಸಹಿತ ವಾಕ್ಯ
3.ಜೋಡಿ ಪೆನ್ಸಿಲ್ -ಅಭ್ಯಾಸ ಪುಸ್ತಕ
*ನಿರ್ವಹಣೆ:*
ಈ 3 ಲೋಗೋಗಳು 3ನೇ ತಟ್ಟೆಯಲ್ಲಿ ಬರುತ್ತವೆ.
ಇಲ್ಲಿ ಈ 3 ಲೋಗೋಗಳು ಕಲಿಕಾ ಗೋಪುರದ ಹಂತಗಳಲ್ಲಿ
*4ನೇ ಹಂತ* ವಾದ *ಅಭ್ಯಾಸ ಹಂತದ ಚಟುವಟಿಕೆ* ಗಳಾಗಿ ಕಾರ್ಯ ನಿರ್ವಹಿಸುತ್ತವೆ.
3ನೇ ತಟ್ಟೆಯಲ್ಲಿ ಬಂದಿರುವ ಕಾರ್ಡ್ ಗಳ ಸಂಖ್ಯೆ
1ನೇ ತರಗತಿ ಕಾರ್ಡುಗಳು :
34+25[ಅಭ್ಯಾಸ ಪುಸ್ತಕ ಹಾಳೆ]
2ನೇ ತರಗತಿ ಕಾರ್ಡುಗಳು
36+33[ಅಭ್ಯಾಸ ಪುಸ್ತಕ ಹಾಳೆ]
3ನೇ ತರಗತಿ ಕಾರ್ಡುಗಳು
0+44[ಅಭ್ಯಾಸ ಪುಸ್ತಕ ಹಾಳೆ]
ಈ ಗುಂಪು *ಗೆಳೆಯನ ಸಂಪೂರ್ಣ ಸಹಾಯ* ದಲ್ಲಿ ನಿರ್ವಹಣೆಯಾಗುವುದು.ಕಲಿಕಾಂಶ ಹಂತದಲ್ಲಿ ಕಲಿಕೆಯು ಉತ್ತಮವಾಗಿ ನೆರವೇದಿದ್ದಲ್ಲಿ ಗೆಳೆಯರೊಂದಿಗೆ ಸಹಕಾರ ಪಡೆದು ಇಲ್ಲಿ ಚಟುವಟಿಕೆಗಳನ್ನು ಮಕ್ಕಳು ಮಾಡುವರು.
ಸುಗಮಕಾರರು ಭಾಷಾ ವಿಷಯದಲ್ಲಿ 10 ನಿಮಿಷಗಳ ಸಾಮೂಹಿಕ ಚಟುವಟಿಕೆ ನಂತರದಲ್ಲಿ 10 ನಿಮಿಷ ಪ್ರಗತಿನೋಟ ನೋಡಿಕೊಂಡು ಸಾಮಾಗ್ರಿಗಳೊಂದಿಗೆ ಮಕ್ಕಳು ಕುಳಿತುಕೊಂಡ ನಂತರ 10 ನಿಮಿಷದಲ್ಲಿ ಕ್ರಮವಾಗಿ 5,4,3,1 ತಟ್ಟೆಗಳಿಗೆ ಹೋಗಿ ಮಾರ್ಗದರ್ಶನ ಮಾಡುವರು ಹೀಗೆ 4 ನೇ ಗುಂಪಿಗೆ ಮಾರ್ಗದರ್ಶನ ಮಾಡಿ 3 ನೇ ಗುಂಪಿಗೂ ಬಂದು ಮಕ್ಕಳ ಕಾರ್ಡ್ ಪುಸ್ತಕ ಅವರು ಬಂದಿರುವ ಚಟುವಟಿಕೆಗಳನ್ನು ಗಮನಿಸಿ ಅದೇ ಗುಂಪಿನಲ್ಲಿ ಇರುವ ಹಿರಿಯ ವಿದ್ಯಾರ್ಥಿ ಅಥವಾ ಕಲಿಕೆಯಲ್ಲಿ ಆ ಮೈಲಿಗಲ್ಲು ಮುಗಿಸಿರುವ ಗೆಳೆಯರಿಗೆ ಮಾಡಬೇಕಾದ / ಮಾಡಿಸಬೇಕಾದ ಚಟುವಟಿಕೆ ಸಂಬಂಧಿಸಿದಂತೆ ಮಾರ್ಗದರ್ಶನ ಮಾಡಿ 1 ನೇ ತಟ್ಟೆಗೆ ತೆರಳುವರು.
ಈ ರೀತಿಯಾಗಿ 3ನೇ ತಟ್ಟೆ/ಗುಂಪು ನಿರ್ವಹಣೆಯಾಗುವುದು
★★★★★★★★★★★
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
ನಲಿಕಲಿ app ಲಿಂಕ್
https://play.google.com/store/apps/details?id=a1226930.wpu
No comments:
Post a Comment