🌸🌸🌸🌸🌸🌸🌸🌸
*ದಿನಕ್ಕೊಂದು ಗುಂಪು ತಟ್ಟೆ*
*ದಿನ -3*
*ದಿನಾಂಕ* :
1️⃣2️⃣➖0️⃣1️⃣➖2️⃣1️⃣
*ವಿಷಯ : ಭಾಷೆ*
*ಗುಂಪು ತಟ್ಟೆ : 2ನೇ ತಟ್ಟೆ/ಗುಂಪು*
*_ಪರಿಚಯ_*
ಬಾಷೆಯ 2ನೇ ತಟ್ಟೆಯಲ್ಲಿ ಬರುವ ಲೋಗೋಗಳು
1.ಲೇಖನಿ ಹಿಡಿದು ಬರೆಯುತ್ತಿರುವ ಕೈ- ಅಕ್ಷರ ಬರವಣಿಗೆ,ಒತ್ತಕ್ಷರ ಗುರ್ತಿಸಿ ಬರೆ,ಭಾಷಾಭ್ಯಾಸ
2.ಮೀನು-ಸ್ವರ ಚಿಹ್ನೆ ಪರಿಚಯ
3.ನರಿ-ಸನ್ನಿವೇಶ ರಚನೆ, ಸ್ಪಷ್ಟ ಓದು(ಕಲಿಕಾಂಶ)
4.ಜೋಕಾಲಿ ಆಡುತ್ತಿರುವ ಮಗು-ಜಾರುಪಟ್ಟಿ
5.ಅಳಿಲು - ಪ್ರಶ್ನೋತ್ತರ
6.ಕಪ್ಪು ಹಲಗೆ ಮೇಲೆ ಬರೆಯುತ್ತಿರುವ ಬಾಲಕ-ವರ್ಣಮಾಲೆ
7.ಜೋಡಿ ಪೆನ್ಸಿಲ್-ಅಭ್ಯಾಸ ಪುಸ್ತಕ
*ನಿರ್ವಹಣೆ:*
ಈ 7 ಲೋಗೋಗಳು 2ನೇ ತಟ್ಟೆಯಲ್ಲಿ ಬರುತ್ತವೆ
ಇಲ್ಲಿ ಈ 7 ಲೋಗೋಗಳು ಕಲಿಕಾ ಗೋಪುರದ ಹಂತಗಳಲ್ಲಿ *3ನೇ ಹಂತ* ವಾದ *ಕಲಿಕಾಂಶ ಹಂತದ* ಚಟುವಟಿಕೆಗಳಾಗಿ ಕಾರ್ಯ ನಿರ್ವಹಿಸುತ್ತವೆ.
ವಿಶಿಷ್ಟವಾಗಿ ಅಭ್ಯಾಸ ಪುಸ್ತಕ 1ನೇ ತರಗತಿ 2ನೇ ತರಗತಿ ಮತ್ತು 3ನೇ ತರಗತಿಯ ಕಲಿಕಾಂಶ ಹಂತದಲ್ಲಿಯೂ ಅಭ್ಯಾಸ ಪುಸ್ತಕ ಬಳಕೆಯಾಗಿದೆ .
2ನೇ ತಟ್ಟೆಯಲ್ಲಿ ಬಂದಿರುವ ಕಾರ್ಡ್ ಗಳ ಸಂಖ್ಯೆ
1ನೇ ತರಗತಿ ಕಾರ್ಡ್ ಗಳು
: 78+24[ಅಭ್ಯಾಸಪುಸ್ತಕ ಹಾಳೆ]
2ನೇ ತರಗತಿಕಾರ್ಡ್ ಗಳು 29+3[ಅ. ಪು.]
3ನೇ ತರಗತಿ ಕಾರ್ಡ್ ಗಳು 33+11[ಅಭ್ಯಾಸ ಪು]
ಬರುತ್ತವೆ.
ಈ ಗುಂಪು *ಶಿಕ್ಷಕರ ಸಂಪೂರ್ಣ ಸಹಾಯ* ದಲ್ಲಿ ನಿರ್ವಹಣೆಯಾಗುತ್ತದೆ. ಇದು ಅತ್ಯಂತ ಮಹತ್ವದ ಹಂತವಾಗಿದೆ ಶಿಕ್ಷಕರು ಇಲ್ಲಿ ಬಂದಿರುವ ಕಲಿಕಾಂಶ ಚಟುವಟಿಕೆಗಳನ್ನು ತುಂಬಾ ಪರಿಣಾಮಕಾರಿಯಾಗಿ ಮಕ್ಕಳಿಗೆ ದೃಡೀಕರಣವಾಗುವ ರೀತಿ ಮನದಟ್ಟು ಮಾಡಬೇಕಾಗಿದೆ. ಶಿಕ್ಷಕರು ಈ ತಟ್ಟೆಯಲ್ಲಿ 40 ನಿ. ಕಾಲ ಇದ್ದು ಚಟುವಟಿಕೆಗಳನ್ನು ಮಾಡಿಸಬೇಕು ಇಲ್ಲಿ ಮಕ್ಕಳು ಉತ್ತಮವಾಗಿ ಕಲಿತರೆ ಮುಂದಿನ ಗುಂಪುಗಳಲ್ಲಿ ತುಂಬಾ ಉತ್ತಮವಾಗಿ ಪರಿಣಾಮಕಾರಿಯಾಗಿ ಚಟುವಟಿಕೆಗಳನ್ನು ಯಾರ ಸಹಾಯವಿಲ್ಲದೆ ಮಾಡಬಹುದು.
ಸುಗಮಕಾರರು ಭಾಷಾ ವಿಷಯದಲ್ಲಿ 10 ನಿಮಿಷಗಳ ಸಾಮೂಹಿಕ ಚಟುವಟಿಕೆ ನಂತರದಲ್ಲಿ 10 ನಿಮಿಷ ಪ್ರಗತಿನೋಟ ನೋಡಿಕೊಂಡು ಸಾಮಾಗ್ರಿಗಳೊಂದಿಗೆ ಮಕ್ಕಳು ಕುಳಿತುಕೊಂಡ ನಂತರ 10 ನಿಮಿಷದಲ್ಲಿ ಕ್ರಮವಾಗಿ 5,4,3,1 ತಟ್ಟೆಗಳಿಗೆ ಹೋಗಿ ಮಾರ್ಗದರ್ಶನ ಮಾಡುವರು ಹೀಗೆ 1 ನೇ ಗುಂಪಿಗೆ ಮಾರ್ಗದರ್ಶನ ಮಾಡಿ 2 ನೇ ಗುಂಪಿಗೆ ಬಂದು 40 ನಿ.ಕಾಲ ಚಟುವಟಿಕೆಗಳನ್ನು ಮಾಡಿಸುವರು.
ಈ ರೀತಿಯಾಗಿ 2ನೇ ತಟ್ಟೆ ನಿರ್ವಹಣೆಯಾಗುವುದು.
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
*ನಲಿಕಲಿ app ಲಿಂಕ್*
https://play.google.com/store/apps/details?id=a1226930.wpu
No comments:
Post a Comment