🌸🌸🌸🌸🌸🌸🌸🌸
*ದಿನಕ್ಕೊಂದು ಗುಂಪು ತಟ್ಟೆ*
*ದಿನ -17*
*ದಿನಾಂಕ* :
2️⃣9️⃣➖0️⃣1️⃣➖2️⃣1️⃣
*ವಿಷಯ : ಪರಿಸರ ಅಧ್ಯಯನ*
*ಗುಂಪು ತಟ್ಟೆ : 4ನೇ ತಟ್ಟೆ/ಗುಂಪು*
*_ಪರಿಚಯ_*
ಪರಿಸರ ಅಧ್ಯಯನದ 4ನೇ ತಟ್ಟೆಯಲ್ಲಿ ಬರುವ ಲೋಗೋಗಳು
1.ಮಿಡತೆ - ಮಾಡಿನೋಡು
2.ಡಬ್ಬದೊಳಗೆ ಕೈ - ಅಶು ಲೇಖನ
3.ಬಸವನ ಹುಳು -ದಾರದಿಂದ ಹೊಂದಿಸು
4.ಜೋಡಿ ಗುಲಾಬಿ - ಅಭ್ಯಾಸ ಪುಸ್ತಕ
*ನಿರ್ವಹಣೆ:*
ಈ 4 ಲೋಗೋಗಳು 4ನೇ ತಟ್ಟೆಯಲ್ಲಿ ಬರುತ್ತವೆ.
ಇಲ್ಲಿ ಈ 4 ಲೋಗೋಗಳು ಕಲಿಕಾ ಗೋಪುರದ ಹಂತಗಳಲ್ಲಿ *5ನೇ ಹಂತ* ವಾದ *ಬಳಕೆ ಹಂತ* ದ ಚಟುವಟಿಕೆಗಳಾಗಿ ಕಾರ್ಯ ನಿರ್ವಹಿಸುತ್ತವೆ.
4ನೇ ತಟ್ಟೆಯಲ್ಲಿ ಬಂದಿರುವ ಕಾರ್ಡ್ ಗಳ ಸಂಖ್ಯೆ
1ನೇ ತರಗತಿ ಕಾರ್ಡ್ ಗಳು :
0+14[ಅಭ್ಯಾಸ ಪುಸ್ತಕ ಹಾಳೆ]
2ನೇ ತರಗತಿ ಕಾರ್ಡ್ ಗಳು :
09+10[ಅಭ್ಯಾಸ ಪುಸ್ತಕ ಹಾಳೆ]
3ನೇ ತರಗತಿ ಕಾರ್ಡ್ ಗಳು :
01+5(ಜಿಲ್ಲಾ ಪರಿಚಯ ಪುಸ್ತಕ)+26[ಅಭ್ಯಾಸ ಪುಸ್ತಕ ಹಾಳೆ]
ಈ ಗುಂಪು *ಗೆಳೆಯನ ಭಾಗಶಃ ಸಹಾಯ* ದಲ್ಲಿ ನಿರ್ವಹಣೆಯಾಗುವುದು.
ಕಲಿಕಾಂಶ ಹಂತ ಅಭ್ಯಾಸ ಹಂತದಲ್ಲಿ ಚಟುವಟಿಕೆಗಳನ್ನು ಮಕ್ಕಳು ಉತ್ತಮವಾಗಿ ನೆರವೇರಿಸಿದ್ದಲ್ಲಿ ಭಾಗಶಃ ಗೆಳೆಯರ ಸಹಾಯ ಪಡೆದು ಕಲಿತ ವಿಷಯವನ್ನು ಮತ್ತಷ್ಟು ಈ 4ನೇ ತಟ್ಟೆಯಲ್ಲಿ ದೃಢೀಕರಿಸಿಕೊಳ್ಳುವರು.
ಸುಗಮಕಾರರು ಪರಿಸರ ವಿಷಯದಲ್ಲಿ 10 ನಿಮಿಷಗಳ ಸಾಮೂಹಿಕ ಚಟುವಟಿಕೆ ನಂತರದಲ್ಲಿ 10 ನಿಮಿಷ ಪ್ರಗತಿನೋಟ ನೋಡಿಕೊಂಡು ಸಾಮಾಗ್ರಿಗಳೊಂದಿಗೆ ಮಕ್ಕಳು ಕುಳಿತುಕೊಂಡ ನಂತರ 10 ನಿಮಿಷದಲ್ಲಿ ಕ್ರಮವಾಗಿ 5,4,3,1 ತಟ್ಟೆಗಳಿಗೆ ಹೋಗಿ ಮಾರ್ಗದರ್ಶನ ಮಾಡುವರು ಹೀಗೆ 5 ನೇ ಗುಂಪಿಗೆ ಮಾರ್ಗದರ್ಶನ ಮಾಡಿ 4 ನೇ ಗುಂಪಿಗೂ ಬಂದು ಮಕ್ಕಳ ಕಾರ್ಡ್ ಪುಸ್ತಕ ಅವರು ಬಂದಿರುವ ಚಟುವಟಿಕೆಗಳನ್ನು ಗಮನಿಸಿ ಅದೇ ಗುಂಪಿನಲ್ಲಿ ಇರುವ ಹಿರಿಯ ವಿದ್ಯಾರ್ಥಿ ಅಥವಾ ಕಲಿಕೆಯಲ್ಲಿ ಆ ಮೈಲಿಗಲ್ಲು ಮುಗಿಸಿರುವ ಗೆಳೆಯರ ಅಗತ್ಯ ವೇಳೆ ಅನಿವಾರ್ಯವಾದ ಸಂದರ್ಭದಲ್ಲಿ ಅವರ ಸಹಾಯ ಪಡೆಯಲು ಸೂಚಿಸಿ ಚಟುವಟಿಕೆ ಸಂಬಂಧಿಸಿದಂತೆ ಮಾರ್ಗದರ್ಶನ ಮಾಡಿ 3 ನೇ ತಟ್ಟೆಗೆ ತೆರಳುವರು.
ಈ ರೀತಿಯಾಗಿ 4ನೇ ತಟ್ಟೆ/ಗುಂಪು ನಿರ್ವಹಣೆಯಾಗುವುದು
★★★★★★★★★★★
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
*ನಲಿಕಲಿ app ಲಿಂಕ್*
https://play.google.com/store/apps/details?id=a1226930.wpu
No comments:
Post a Comment