Thursday, 28 January 2021

ದಿನಕ್ಕೊಂದು ಗುಂಪು ತಟ್ಟೆ ದಿನ 14

 🌸🌸🌸🌸🌸🌸🌸🌸

 

*ದಿನಕ್ಕೊಂದು ಗುಂಪು ತಟ್ಟೆ*

            *ದಿನ -14* 


 *ದಿನಾಂಕ* : 

2️⃣6️⃣➖0️⃣1️⃣➖2️⃣1️⃣


 *ವಿಷಯ : ಪರಿಸರ ಅಧ್ಯಯನ* 


 *ಗುಂಪು ತಟ್ಟೆ : 1ನೇ ತಟ್ಟೆ/ಗುಂಪು* 


 *_ಪರಿಚಯ_* 


ಪರಿಸರ ಅಧ್ಯಯನದ 1ನೇ ತಟ್ಟೆಯಲ್ಲಿ ಬರುವ ಲೋಗೋಗಳು


1.ಶತಪದಿ -ಸವಾಲ್ ಜವಾಬ್


2.ಜೋಡಿ ಗುಲಾಬಿ - ಅಭ್ಯಾಸ ಪುಸ್ತಕ


 *ನಿರ್ವಹಣೆ* 


ಈ 2 ಲೋಗೋಗಳು 1ನೇ ತಟ್ಟೆಯಲ್ಲಿ ಬರುತ್ತವೆ

 

ಇಲ್ಲಿ ಈ 2 ಲೋಗೋಗಳು ಕಲಿಕಾ ಗೋಪುರದ ಹಂತಗಳಲ್ಲಿ *2ನೇ ಹಂತ* ವಾದ *ಕಲಿಕಾ ಪೂರಕ ಹಂತದ* ಚಟುವಟಿಕೆಗಳಾಗಿ ಕಾರ್ಯ ನಿರ್ವಹಿಸುತ್ತವೆ.

ವಿಶಿಷ್ಟವಾಗಿ ಅಭ್ಯಾಸ ಪುಸ್ತಕ  ಕಲಿಕಾ ಪೂರಕ ಹಂತದ ಚಟುವಟಿಕೆಯಾಗಿ ಇಲ್ಲಿ ಅಭ್ಯಾಸ ಪುಸ್ತಕವು ಬಳಕೆಯಾಗಿದೆ.


1ನೇ ತಟ್ಟೆಯಲ್ಲಿ ಬಂದಿರುವ ಕಾರ್ಡ್ ಗಳ ಸಂಖ್ಯೆ


1ನೇ ತರಗತಿ ಕಾರ್ಡ್ ಗಳು

 : 2+11[ಅ.ಪು. ಹಾಳೆಗಳು]


2ನೇ ತರಗತಿಕಾರ್ಡ್ ಗಳು 

: 1+15[ಅ. ಪು.ಹಾಳೆಗಳು]


3ನೇ ತರಗತಿ ಕಾರ್ಡ್ ಗಳು 

: 1+17[ಅ. ಪು.ಹಾಳೆಗಳು]


ಈ ಗುಂಪು *ಶಿಕ್ಷಕರ ಭಾಗಶಃ ಸಹಾಯ* ದಲ್ಲಿ ನಿರ್ವಹಣೆಯಾಗುತ್ತದೆ.


ಸುಗಮಕಾರರು ಪರಿಸರ ಅಧ್ಯಯನ ವಿಷಯದಲ್ಲಿ 10 ನಿಮಿಷಗಳ ಸಾಮೂಹಿಕ ಚಟುವಟಿಕೆ ನಂತರದಲ್ಲಿ 10 ನಿಮಿಷ ಪ್ರಗತಿನೋಟ ನೋಡಿಕೊಂಡು ಸಾಮಾಗ್ರಿಗಳೊಂದಿಗೆ ಮಕ್ಕಳು ಕುಳಿತುಕೊಂಡ ನಂತರ 10 ನಿಮಿಷದಲ್ಲಿ ಕ್ರಮವಾಗಿ 5,4,3,1 ತಟ್ಟೆಗಳಿಗೆ ಹೋಗಿ ಮಾರ್ಗದರ್ಶನ ಮಾಡುವರು ಹೀಗೆ 3 ನೇ ಗುಂಪಿಗೆ ಮಾರ್ಗದರ್ಶನ ಮಾಡಿ 1 ನೇ ಗುಂಪಿಗೆ ಬಂದು ಮಾರ್ಗದರ್ಶನ ಮಾಡುವರು.1ನೇ ಗುಂಪು ಮಾರ್ಗದರ್ಶನ ಮಾಡಿ 2ನೇ ಗುಂಪಿಗೆ ತೆರಳುವರು.

    

ಈ ರೀತಿಯಾಗಿ 1 ನೇ ತಟ್ಟೆ ನಿರ್ವಹಣೆಯಾಗುವುದು.

◆◆◆◆◆◆◆◆◆◆◆◆◆




ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ


 *ನಿಮ್ಮ ವೇದಿಕೆ- 6*

https://nalikalirenukaradhyatlm.blogspot.com/2021/01/6_25.html

No comments:

Post a Comment