Thursday, 31 December 2020

ದಿನಕ್ಕೊಂದು ಲೋಗೋ 77

 🏵️🏵️🏵️🏵️🏵️🏵️🏵️

*ದಿನಕ್ಕೊಂದು ಲೋಗೋ**

       *ದಿನ -77* 

 (ಮೂಲ : ಬೆಳ್ಳಿಮೋಡ ನಲಿಕಲಿ ಸಮಗ್ರ ಸಾಹಿತ್ಯ)


ದಿನಾಂಕ : 31.12.2020 


 *9.ಲೋಗೋ :ಶತಪದಿ* 


 **ಚಟುವಟಿಕೆ ಹೆಸರು : ಸವಾಲ್-ಜವಾಬ್* 


ನಲಿಕಲಿಯ *ಪರಿಸರ ಅಧ್ಯಯನ* ದಲ್ಲಿ ಬರುವ ಒಂದು ವಿಶಿಷ್ಟ ಲೋಗೋ ಇದಾಗಿದೆ. ಇದು ಕಲಿಕಾ ಗೋಪುರದಲ್ಲಿ  *ಕಲಿಕಾ ಪೂರಕ ಹಂತ* ದ ಚಟುವಟಿಕೆಗಳಲ್ಲಿ  ಬರುವ ಲೋಗೋ ಆಗಿದೆ ಮತ್ತು *1ನೇ ತಟ್ಟೆ* ಯಲ್ಲಿ ಈ ಚಟುವಟಿಕೆಯು ನಡೆಯುತ್ತದೆ .

1ನೇ ತರಗತಿಯಲ್ಲಿ 02 ಕಾರ್ಡುಗಳು

 2ನೇ ತರಗತಿಯಲ್ಲಿ 01 ಕಾರ್ಡುಗಳು

 3ನೇ ತರಗತಿಯಲ್ಲಿ 01 ಕಾರ್ಡುಗಳು  ಇರುತ್ತವೆ


 _ಚಟುವಟಿಕೆಯ ವಿಶ್ಲೇಷಣೆ :_ 


> ಕಲಿಕಾರ್ಥಿಗಳ ಸರಳ ಪ್ರಶ್ನೆಗಳಿಗೆ ಉತ್ತರಿಸಲು ಅವಕಾಶ ಕಲ್ಪಿಸುತ್ತದೆ,


> ಪ್ರಶ್ನೆಗಳನ್ನು ಆಲಿಸಿ, ಅರ್ಥೈಸಿಕೊಳ್ಳುವಂತೆ ಮಾಡುತ್ತದೆ.


> ಪರಿಚಿತ ಒಗಟುಗಳನ್ನು ಬಿಡಿಸುವ ಕೌಶಲ ಬೆಳೆಸುತ್ತದೆ.

 _

ಚಟುವಟಿಕೆಗಳ ಉದ್ದೇಶಗಳು:_ 


> ಕಲಿಕಾರ್ಥಿಗಳ ಪೂರ್ವಜ್ಞಾನವನ್ನು ತಿಳಿಯುವುದು,


> ಸಂತಸದ ವಾತಾವರಣ ನಿರ್ಮಿಸುವುದು.


" ಸ್ಪರ್ಧಾತ್ಮಕ ಮನೋಭಾವ ಬೆಳೆಸುವುದು.


 _ಚಟುವಟಿಕೆಯನ್ನು ಹೀಗೆ ಮಾಡೋಣ:_ 


> ಈ ಮೆಟ್ಟಿಲಿನಲ್ಲಿ ಕಲಿಯುತ್ತಿರುವ ಕಲಿಕಾರ್ಥಿಗಳಿಗೆ ಕಾರ್ಡ್‌ನಲ್ಲಿರುವ ಒಗಟು/ಪ್ರಶ್ನೆಗಳನ್ನು ಕೇಳೋಣ.


> ಉತ್ತರವನ್ನು ಪಡೆದು ಸರಿ ತಪ್ಪು ವಿಮರ್ಶಿಸೋಣ,


> ಉತ್ತರೆ ತಪ್ಪಿದ್ದರೆ ಉಳಿದ ಕಲಿಕಾರ್ಥಿಗಳಿಂದ ಉತ್ತರ ಪಡೆಯಲು ಪ್ರಯತ್ನಿಸೋಣ.


> ಸರಿ ಉತ್ತರ ನೀಡಿದ ಕಲಿಕಾರ್ಥಿಗಳನ್ನು ಚಪ್ಪಾಳೆಯ ಮೂಲಕ ಪ್ರೋತ್ಸಾಹಿಸೋಣ.


ನಿರೀಕ್ಷಿತ ಕಲಿಕೆಯ ಫಲಗಳು:


* ಪ್ರಶ್ನೆಗಳನ್ನು ಒಗಟುಗಳನ್ನು ಅರ್ಥ ಮಾಡಿಕೊಳ್ಳುವೆರು.


ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳುವರು.


 *ನಲಿಕಲಿ app ಲಿಂಕ್* 

https://nalikalirenukaradhyatlm.blogspot.com/2020/12/6-zoom-6.html


ರೇಣುಕಾರಾಧ್ಯ 

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ


No comments:

Post a Comment