Wednesday, 30 December 2020

ದಿನಕ್ಕೊಂದು ಲೋಗೋ 76

 🏵️🏵️🏵️🏵️🏵️🏵️🏵️

*ದಿನಕ್ಕೊಂದು ಲೋಗೋ**

       *ದಿನ -76* 

 (ಮೂಲ : ಬೆಳ್ಳಿಮೋಡ ನಲಿಕಲಿ ಸಮಗ್ರ ಸಾಹಿತ್ಯ)


ದಿನಾಂಕ : 30.12.2020 


 *8.ಲೋಗೋ :ಜಾದೂಗಾರ* 


 **ಚಟುವಟಿಕೆ ಹೆಸರು : ಮೂಕಾಭಿನಯ* 


ನಲಿಕಲಿಯ *ಪರಿಸರ ಅಧ್ಯಯನ* ದಲ್ಲಿ ಬರುವ ಒಂದು ವಿಶಿಷ್ಟ ಲೋಗೋ ಇದಾಗಿದೆ. ಇದು ಕಲಿಕಾ ಗೋಪುರದಲ್ಲಿ  *ಪೂರ್ವಸಿದ್ಧತಾ ಹಂತ* ದ ಚಟುವಟಿಕೆಗಳಲ್ಲಿ  ಬರುವ ಲೋಗೋ ಆಗಿದೆ ಮತ್ತು *ಸಾಮೂಹಿಕ ತಟ್ಟೆ* ಯಲ್ಲಿ ಈ ಚಟುವಟಿಕೆಯು ನಡೆಯುತ್ತದೆ .

1ನೇ ತರಗತಿಯಲ್ಲಿ 06 ಕಾರ್ಡುಗಳು

 2ನೇ ತರಗತಿಯಲ್ಲಿ 02 ಕಾರ್ಡುಗಳು

 3ನೇ ತರಗತಿಯಲ್ಲಿ 00 ಕಾರ್ಡುಗಳು  ಇರುತ್ತವೆ


 _ಚಟುವಟಿಕೆಯ ವಿಶ್ಲೇಷಣೆ :_ 


* ಮಕ್ಕಳು ನೋಡಿರುವ ಸನ್ನಿವೇಶಗಳನ್ನು ಪುನರ್ಮನನ ಮಾಡಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. 

> ಸರಳ ವಿಷುಯಾ0ಶಗಳನ್ನು ತಮ್ಮದೇ ಶೈಲಿಯಲ್ಲಿ ವ್ಯಕ್ತಪಡಿಸಲು ಅವಕಾಶ ಕಲ್ಪಿಸುತ್ತದೆ.


> ಚಟುವಟಿಕೆಯು ವೈವಿಧ್ಯತೆಯನ್ನು ಗುರುತಿಸಲು ಸಹಕರಿಸುತ್ತದೆ.


 _ಚಟುವಟಿಕೆಗಳ ಉದ್ದೇಶಗಳು:_ 


> ಕಲಿಕಾ ವಾತಾವರಣವನ್ನು ಸಂತಸದಾಯಕವಾಗಿಸುವುದು.


> ವಿಷಯಾಂಶವನ್ನು ಗುರ್ತಿಸಿ, ಗ್ರಹಿಸುವಂತೆ ಮಾಡುವುದು.


 _ಚಟುವಟಿಕೆಯನ್ನು ಹೀಗೆ ಮಾಡೋಣ:_ 


> ಕಲಿಕಾರ್ಥಿಗಳ ಸಂಖ್ಯೆಗನುಗುಣವಾಗಿ ನಿಲ್ಲಿಸೋಣ /ಕೂರಿಸೋಣ.


>ಈ ಚಟುವಟಿಕೆ ನಿರ್ವಹಿಸಬೇಕಿರುವ ಕಲಿಕಾರ್ಥಿಗೆ ಕಾರ್ಡನ್ನು ಕೊಟ್ಟು ಚಿತ್ರವನ್ನು ಗಮನಿಸಲು ತಿಳಿಸೋಣ.


> ಆ ಕಲಿಕಾರ್ಥಿಗೆ ಧ್ವನಿ ರಹಿತವಾಗಿ ಚಿತ್ರದಲ್ಲಿರುವಂತೆ ಅಭಿನಯಿಸಲು ತಿಳಿಸೋಣ.


> ಉಳಿದ ಕಲಿಕಾರ್ಥಿಗಳು ಆ ಕಲಿಕಾರ್ಥಿಯ ಅಭಿನಯವನ್ನು ಗುರುತಿಸಿ, ಹೆಸರಿಸಿ: ವಿವರಿಸೋಣ.


* ಅತ್ಯುತ್ತಮ ನಿರ್ವಹಣೆಯನ್ನು ಪ್ರೋತ್ಸಾಹಿಸೋಣ...


 _ನಿರೀಕ್ಷಿತ ಕಲಿಕೆಯ ಫಲಗಳು:_ 


> ಕಲಿಕಾಂಶವನ್ನು ಅರ್ಥೈಸಿಕೊಳ್ಳುವರು.


• ಅಭಿನಯ ಕೌಶಲವನ್ನು ಬೆಳೆಸಿಕೊಳ್ಳುವರು.


 *ಟೆಲಿಗ್ರಾಮ್ ಗ್ರೂಪ್* 

ನಲಿಕಲಿ ಗ್ರೂಪ್

https://t.me/NalikaliappRenukaradhya


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

No comments:

Post a Comment