Monday, 28 December 2020

ದಿನಕ್ಕೊಂದು ಲೋಗೋ 74

 🏵️🏵️🏵️🏵️🏵️🏵️🏵️

*ದಿನಕ್ಕೊಂದು ಲೋಗೋ**

       *ದಿನ -74* 

 (ಮೂಲ : ಬೆಳ್ಳಿಮೋಡ ನಲಿಕಲಿ ಸಮಗ್ರ ಸಾಹಿತ್ಯ)


ದಿನಾಂಕ : 28.12.2020 


 *6.ಲೋಗೋ :ಸೂರ್ಯ ಮತ್ತು ಮೋಡ* 


 **ಚಟುವಟಿಕೆ ಹೆಸರು : ಹವಾಮಾನ ನಕ್ಷೆ* 


ನಲಿಕಲಿಯ *ಪರಿಸರ ಅಧ್ಯಯನ* ದಲ್ಲಿ ಬರುವ ಒಂದು ವಿಶಿಷ್ಟ ಲೋಗೋ ಇದಾಗಿದೆ. ಇದು ಕಲಿಕಾ ಗೋಪುರದಲ್ಲಿ  *ಪೂರ್ವಸಿದ್ಧತಾ ಹಂತ* ದ ಚಟುವಟಿಕೆಗಳಲ್ಲಿ  ಬರುವ ಲೋಗೋ ಆಗಿದೆ ಮತ್ತು *ಸಾಮೂಹಿಕ ತಟ್ಟೆ* ಯಲ್ಲಿ ಈ ಚಟುವಟಿಕೆಯು ನಡೆಯುತ್ತದೆ .

1ನೇ ತರಗತಿಯಲ್ಲಿ 01 ಕಾರ್ಡುಗಳು

 2ನೇ ತರಗತಿಯಲ್ಲಿ 01 ಕಾರ್ಡುಗಳು

 3ನೇ ತರಗತಿಯಲ್ಲಿ 01 ಕಾರ್ಡುಗಳು  ಇರುತ್ತವೆ


 _ಚಟುವಟಿಕೆಯ ವಿಶ್ಲೇಷಣೆ :_ 


> ಮಕ್ಕಳು ತನ್ನ ಪರಿಸರದ ಆಂಶಗಳಾದ ಮಳೆ, ಗಾಳಿ, ನೀರು, ಆಗಸ..... ಮೊದಲಾದವುಗಳನ್ನು ಗುರುತಿಸಲು ಸಹಕರಿಸುತ್ತದೆ.


> ತಮ್ಮ ಅನುಭವಕ್ಕೆ ಬರುವ ಅಂಶಗಳನ್ನು ವಿವರಿಸುವಂತೆ ಮಾಡುತ್ತದೆ. 

> ಚಿತ್ರದೊಂದಿಗೆ ಸನ್ನಿವೇಶವನ್ನು ಹೊಂದಿಸಲು ಸಹಕರಿಸುತ್ತದೆ.


 _ಚಟುವಟಿಕೆಯ ಉದ್ದೇಶಗಳು:_ 


> ಹವಾಮಾನದ ಸಾಮಾನ್ಯ ಬದಲಾವಣೆಗಳನ್ನು ನಿರ್ದಿಷ್ಟ ಸ್ಥಳದಲ್ಲಿ ಗುರುತಿಸುವುದು.


>ಸ್ಥಳೀಯ ಹವಾಮಾನದ ಲಕ್ಷಣಗಳನ್ನು ಪರಿಚಯಿಸುವುದು,


> ಪರಿಸರ ಅಧ್ಯಯನದ ಕೆಲವು ಪರಿಕಲ್ಪನೆಗಳನ್ನು ಅನುಭವವಾಗಿಸುವುದು,



 _ಚಟುವಟಿಕೆಯನ್ನು ಹೀಗೆ ಮಾಡೋಣ:_ 


> ವರ್ಷದ ಆರಂಭದಲ್ಲಿ ಹವಾಮಾನ ನಕ್ಷೆಯನ್ನು ಸಿದ್ಧಪಡಿಸಿಕೊಳ್ಳೋಣ.


>ಹವಾಮಾನ ನಕ್ಷೆಯಲ್ಲಿ ಗುರುತಿಸಲು ನಿಯಮವೊಂದನ್ನು ರೂಪಿಸೋಣ.


(ಉದಾ: ಹಾಜರಾತಿಯ ಪ್ರಕಾರ ಪ್ರತಿದಿನ ಒಬ್ಬರಂತೆ ಗುರುತಿಸುವುದು.)


> ದಿನದ ಪ್ರಾರ್ಥನಾ ಸಮಯ ಮತ್ತು ಸಂಜೆ ಆಟದ ಸಮಯಗಳಲ್ಲಿ ಹವಾಮಾನ ನಕ್ಷೆ ಗುರುತಿಸುವುದನ್ನು ರೂಢಿಸೋಣ


> 1ನೇ ತರಗತಿಯ ಕಲಿಕಾರ್ಥಿಗಳಿಗೆ ನಕ್ಷೆಯಲ್ಲೂ, 2ನೇ ತರಗತಿಯ ಕಲಿಕಾರ್ಥಿಗಳಿಗೆ ಅಭ್ಯಾಸ ಪುಸ್ತಕದಲ್ಲೂ ಹಾಗೂ 3ನೇ ತರಗತಿಯ ಕಲಿಕಾರ್ಥಿಗಳಿಗೆ ತಿಂಗಳ ಕ್ರೋಡೀಕರಣ ಮಾಡುವುದನ್ನು ಅಭ್ಯಾಸ ಮಾಡಿಸೋಣ,


> ಈ ದಾಖಲೆಗಳನ್ನು ಆಧರಿಸಿ ಮಾಸಿಕ, ತ್ರೈಮಾಸಿಕೆ, ವಾರ್ಷಿಕವಾಗಿ ಹವಾಮಾನ ಬದಲಾವಣೆಗಳ ಕುರಿತು ಕಲಿಕಾರ್ಥಿಗಳೊಂದಿಗೆ ಚರ್ಚಿಸೋಣ.


 _ನಿರೀಕ್ಷಿತ ಕಲಿಕೆಯ ಫಲಗಳು:_ 


> ಹವಾಮಾನದಲ್ಲಾಗುವ ಸಾಮಾನ್ಯ ಬದಲಾವಣೆಗಳನ್ನು ತಿಳಿಯುವರು. 

>ಪರಿಸರದ ಪರಿಕಲ್ಪನೆಗಳಾದ ಮಳೆ, ಮೋಡ, ಬಿಸಿಲು, ಹಗಲು, ರಾತ್ರಿ, ಗಾಳಿ, ಚಳಿ.....ಮೊದಲಾದವುಗಳ ಬಗ್ಗೆ ಅರಿಯುವರು.



 *ನಲಿಕಲಿ ರಸಪ್ರಶ್ನೆ 6 ಲಿಂಕ್*

https://nalikalirenukaradhyatlm.blogspot.com/2020/12/6-zoom-6.html



ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

No comments:

Post a Comment