🏵️🏵️🏵️🏵️🏵️🏵️🏵️
*ದಿನಕ್ಕೊಂದು ಲೋಗೋ**
*ದಿನ -73*
(ಮೂಲ : ಬೆಳ್ಳಿಮೋಡ ನಲಿಕಲಿ ಸಮಗ್ರ ಸಾಹಿತ್ಯ)
ದಿನಾಂಕ : 27.12.2020
*5.ಲೋಗೋ :ಹತ್ತಿಗೊಂಬೆ*
**ಚಟುವಟಿಕೆ ಹೆಸರು : ಪಪೆಟ್ ಶೋ*
ನಲಿಕಲಿಯ *ಪರಿಸರ ಅಧ್ಯಯನ* ದಲ್ಲಿ ಬರುವ ಒಂದು ವಿಶಿಷ್ಟ ಲೋಗೋ ಇದಾಗಿದೆ. ಇದು ಕಲಿಕಾ ಗೋಪುರದಲ್ಲಿ *ಪೂರ್ವಸಿದ್ಧತಾ ಹಂತ* ದ ಚಟುವಟಿಕೆಗಳಲ್ಲಿ ಬರುವ ಲೋಗೋ ಆಗಿದೆ ಮತ್ತು *ಸಾಮೂಹಿಕ ತಟ್ಟೆ* ಯಲ್ಲಿ ಈ ಚಟುವಟಿಕೆಯು ನಡೆಯುತ್ತದೆ .
1ನೇ ತರಗತಿಯಲ್ಲಿ 01 ಕಾರ್ಡುಗಳು
2ನೇ ತರಗತಿಯಲ್ಲಿ 01 ಕಾರ್ಡುಗಳು
3ನೇ ತರಗತಿಯಲ್ಲಿ 00 ಕಾರ್ಡುಗಳು ಇರುತ್ತವೆ
_ಚಟುವಟಿಕೆಯ ವಿಶ್ಲೇಷಣೆ :_
> ಈ ಚಟುವಟಿಕೆ ನೋಡಿಕಲಿ, ಕೇಳಿಕಲಿ, ಮಾಡಿಕಲಿ ತತ್ವಗಳನ್ನೊಳಗೊಂಡಿದೆ.
>ಮಕ್ಕಳ ಸಾಮರ್ಥೈಕ್ಕನುಗುಣವಾದ ಸರಳ ರಚನೆಗಳಾಗಿವೆ,
> ಆಲಿಸುವ, ಗ್ರಹಿಸುವ, ಅರ್ಥೈಸುವ ಪ್ರತಿಕ್ರಿಯಿಸುವ ಸಾಮರ್ಥ್ಯಗಳನ್ನು ಬೆಳೆಸುತ್ತದೆ.
_ಚಟುವಟಿಕೆಯ ಉದ್ದೇಶಗಳು:_
> ಸಂತಸದಾಯಶ ಕಲಿಕಾ ವಾತಾವರಣವನ್ನು ಸೃಷ್ಟಿಸುವುದು,
> ಮಕ್ಕಳಲ್ಲಿ ಅಭಿವ್ಯಕ್ತಿ ಕೌಶಲ ಬೆಳೆಸುವುದು.
> ಕಲಿಕಾ ವಾತಾವರಣವನ್ನು ಆಕರ್ಷಣೀಯವಾಗಿಸುವುದು,
_ಚಟುವಟಿಕೆಯನ್ನು ಹೀಗೆ ಮಾಡೋಣ:_
> ಕಾರ್ಡ್‌ಗಳಲ್ಲಿರುವ ಸಂಭಾಷಣೆಗನುಗುಣವಾದ ಗೊಂಬೆಗಳನ್ನು ಮತ್ತು ಪರದೆ. ಸೀನ್, ಬೆಳಕಿನ ವ್ಯವಸ್ಥೆಯನ್ನು
ಮಾಡಿಕೊಳ್ಳೋಣ.
> ಅಗತ್ಯವಿದ್ದಲ್ಲಿ ಹಿರಿಯ ತರಗತಿಯ ಕಲಿಕಾರ್ಥಿಗಳ ನೆರವು ಪಡೆಯೋಣ.
> ಸಂಭಾಷಣೆಯನ್ನು ಕಲಿಕಾರ್ಥಿಗಳಿಗೆ ಅರ್ಥವಾಗುವಂತೆ ಅಭ್ಯಾಸ ಮಾಡಿಸೋಣ.
> ಎಲ್ಲ ಕಲಿಕಾರ್ಥಿಗಳನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳೋಣ.
> ಈ ಪ್ರದರ್ಶನವನ್ನು ಪರಿಣಾಮಕಾರಿಯಾಗಿ ಆಯೋಜಿಸುವ ಮೂಲಕ ಸೃಜನಶೀಲತೆ ಅಭಿವ್ಯಕ್ತಿ ಸಾಮರ್ಥ್ಯವನ್ನು ಬೆಳೆಸೋಣ
_ನಿರೀಕ್ಷಿತ ಕಲಿಕೆಯ ಫಲಗಳು:_
> ನಿರೂಪಣಾ ಸಾಮರ್ಥ್ಯ ಬೆಳೆಸಿಕೊಳ್ಳುವರು.
• ಭಾವಾಭಿವ್ಯಕ್ತಿ, ಸೃಜನಶೀಲತೆಯನ್ನು ಬೆಳೆಸಿಕೊಳ್ಳುವರು.
> ಇತರರ ಭಾಷೆಯನ್ನು ಅರ್ಥಮಾಡಿಕೊಳ್ಳುವರು.
*ನಲಿಕಲಿ app ಲಿಂಕ್*
https://play.google.com/store/apps/details?id=a1226930.wpu
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
No comments:
Post a Comment