Saturday, 5 December 2020

ದಿನಕ್ಕೊಂದು ಲೋಗೋ 51

 🌸🌸🌸🌸🌸🌸🌸🌸

*ದಿನಕ್ಕೊಂದು ಲೋಗೋ* 

       *ದಿನ -51* 

 (ಮೂಲ : ಬೆಳ್ಳಿಮೋಡ ನಲಿಕಲಿ ಸಮಗ್ರ ಸಾಹಿತ್ಯ)


ದಿನಾಂಕ : 05.12.2020

 

 *20.ಲೋಗೋ :ತೂಕದ ಬಟ್ಟು* 🕊️


 **ಚಟುವಟಿಕೆ ಹೆಸರು :ತೂಕದ ಅಳತೆ* 


ನಲಿಕಲಿಯ ಗಣಿತದಲ್ಲಿ ಬರುವ ಒಂದು ವಿಶಿಷ್ಟ ಲೋಗೋ ಇದಾಗಿದೆ. ಇದು ಕಲಿಕಾ ಗೋಪುರದಲ್ಲಿ  *ಕಲಿಕಾಂಶ ಹಂತ* ದ ಚಟುವಟಿಕೆಗಳಲ್ಲಿ  ಬರುವ ಲೋಗೋ ಆಗಿದೆ ಮತ್ತು *ಗುಂಪು 1(ತಟ್ಟೆ-1)* ರಲ್ಲಿ ಈ ಚಟುವಟಿಕೆಯು *ಶಿಕ್ಷಕರ ಸಂಪೂರ್ಣ ಸಹಾಯ* ದಲ್ಲಿ ಈ ಚಟುವಟಿಕೆಯು ನಡೆಯುತ್ತದೆ .

1ನೇ ತರಗತಿಯಲ್ಲಿ 00 ಕಾರ್ಡುಗಳು

 2ನೇ ತರಗತಿಯಲ್ಲಿ 01 ಕಾರ್ಡುಗಳು

 3ನೇ ತರಗತಿಯಲ್ಲಿ 02 ಕಾರ್ಡುಗಳು  ಇರುತ್ತವೆ


 _ಚಟುವಟಿಕೆಯ ವಿಶ್ಲೇಷಣೆ:_ 


• ಗಣಿತದ  ಪರಿಕಲ್ಪನೆಗಳನ್ನು ಅರ್ಥಮಾಡಿಸುವುದು,


• ಮುಂದಿನ ಚಟುವಟಿಕೆಯನ್ನು ಸ್ವತಂತ್ರವಾಗಿ ನಿರ್ವಹಿಸಲು ಸಮರ್ಥರಾಗುವಂತೆ ಮಾಡುವುದು.


* ಅಮೂರ್ತ ಕಲ್ಪನೆಗಳನ್ನು ಮೂರ್ತರೂಪದ ವಸ್ತುಗಳ ಮೂಲಕ ಮನವರಿಕೆ ಮಾಡಿಕೊಡುವುದು.



 _ಚಟುವಟಿಕೆಯ ಉದ್ದೇಶಗಳು:_ 


*ಅನೌಪಚಾರಿಕವಾಗಿ ತೂಕ ಮಾಡುವ ವಿಧಾನ ಅರಿಯುವುದು.


* ತೂಕದ ಮೂಲ ಮಾನವನ್ನು ತಿಳಿಯುವುದು.


* ನಿತ್ಯಜೀವನಕ್ಕೆ ಸಂಬಂಧಿಸಿದ ತೂಕದ ಸರಳ ಸಮಸ್ಯೆಗಳನ್ನು ಬಿಡಿಸುವುದು,


 _ಚಟುವಟಿಕೆಯನ್ನು ಹೀಗೆ ಮಾಡೋಣ:_ 


• ಕಾರ್ಡಿನಲ್ಲಿ ನೀಡಿರುವ ಸೂಚನೆಗೆ ಅನುಗುಣವಾಗಿ ಹಂತ ಹಂತವಾಗಿ ಚಟುವಟಿಕೆ ಮಾಡಲು ಸಹಕರಿಸುವುದು.


• ತೂಕದ ಮೂಲಮಾನ ಗ್ರಾಂ. ಕಿ.ಗ್ರಾಂ. ಎಂಬುದನ್ನು ಮನವರಿಕೆ ಮಾಡುವುದು. 

• ನಿತ್ಯ ಜೀವನಕ್ಕೆ ಸಂಬಂಧಿಸಿದ ಸರಳ ಸಂಕಲನ ಮತ್ತು ವ್ಯವಕಲನ ತೂಕದ ಲೆಕ್ಕಗಳನ್ನು ಬಿಡಿಸಲು ಸಹಕಾರ ನೀಡುವುದು


 _ನಿರೀಕ್ಷಿತ ಕಲಿಕೆಯ ಫಲಗಳು:_ 


• ಅನೌಪಚಾರಿಕವಾಗಿ ತೂಕ ಮಾಡುವ ವಿಧಾನ ಅರಿಯುವರು.


• ತೂಕದ ಮೂಲಮಾನಗಳನ್ನು ತಿಳಿಯುವರು.


* ನಿತ್ಯ ಜೀವನಕ್ಕೆ ಸಂಬಂಧಿಸಿದ ತೂಕದ ಸರಳ ಸಮಸ್ಯೆಗಳನ್ನು ಬಿಡಿಸುವರು.


 *ನಲಿಕಲಿ ಕಲಿಕೋಪಕರಣಗಳು*

https://nalikalirenukaradhyatlm.blogspot.com/2020/12/blog-post.html


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

No comments:

Post a Comment