Thursday, 26 June 2025

ವಿದ್ಯಾಪ್ರವೇಶ ದಿನ 23

  https://nalikalirenukaradhyatlm.blogspot.com/


 *ಆಡಿಯೋ ಲಿಂಕ್* 

https://drive.google.com/file/d/1xsgT83Xkyh49t_4lVyYjXhnGDbMoWlnu/view?usp=drivesdk


*ವಿದ್ಯಾಪ್ರವೇಶ ದಿನ-27* 



✒️🚁🎮🎨🎲🧮📏🔍



*ಅವಧಿ -1* (40ನಿ)

*ಶುಭಾಶಯ ವಿನಿಮಯ* 


(ಮಕ್ಕಳೊಂದಿಗೆ ಶಿಕ್ಷಕರ

 ಬೆಳಗಿನ ಕುಶಲೋಪರಿ)  

35 ನೇ ದಿನದ ಚಟುವಟಿಕೆ ಮಾಡಿಸುವುದು.


 *ಮಾತು ಕತೆ* 


( ಶಿಕ್ಷಕರು - ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕ ಚಟುವಟಿಕೆ)

43 ನೇ (ವಿ.ಪ್ರ 2022-23 ರ ಕೈಪಿಡಿ) ಆಧರಿಸಿ ದಿನದ ಚಟುವಟಿಕೆ ಮಾಡಿಸುವುದು.

ಅವಧಿ-2 (40ನಿ)

*ನನ್ನ ಸಮಯ* 

ಮಕ್ಕಳು ತಾವು ನಿರ್ವಹಿಸಲಿಚ್ಛಿಸಿದ ಕಲಿಕಾ ಮೂಲೆಗಳಿಗೆ ಸಾಗಿ ಚಟುವಟಿಕೆಗಳನ್ನು ನಿರ್ವಹಿಸುವುದು.ಶಿಕ್ಷಕರು ಅನುಪಾಲನಾ ಸೂಚಿಯಂತೆ ಕಾರ್ಯ ನಿರ್ವಹಿಸುವುದು,


 ಅವಧಿ-3(40ನಿ)

*ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* (ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ)


ಸಾಮರ್ಥ್ಯ: ಪ್ರಯೋಗ ಮತ್ತು ವೀಕ್ಷಿಸುವುದು


ಚಟುವಟಿಕೆ : ಗುಳ್ಳೆಗಳ ಆಟ (ಬಬಲ್ ಬೋವರ್) ಮತ್ತು ಅನ್ವೇಷಣೆ (ಗುರಿ -3)


ಉದ್ದೇಶ:- ಸರಳ ಪ್ರಯೋಗವನ್ನು ಮಾಡುವುದು.


ಅಗತ್ಯ ಸಾಮಗ್ರಿಗಳು :ಸೋಪು, ಡಿಟಜೆರ್ಂಟ್ ಪೌಡರ್/ಶ್ಯಾಂಪು, ಸ್ಟ್ರಾ/ ತಂತಿ


ವಿಧಾನ: ಸೋಪ್ / ಡಿಟಜೆರ್ಂಟ್ / ಶಾಂಪೂ ಮಿಶ್ರಣವನ್ನು ತಯಾರಿಸಿಕೊಳ್ಳುವುದು. ಸ್ವಾತಂತಿಯನ್ನು ಬಳಸಿ ಮಿಶ್ರಣದಲ್ಲಿ ಅದ್ದಿ ಗುಳ್ಳೆಗಳನ್ನು ರಚಿಸುವುದು. ಮಕ್ಕಳು ಗುಳ್ಳೆಯನ್ನು ಮುಟ್ಟಿದಾಗ ಏನಾಗುತ್ತದೆ ಎಂಬುದನ್ನು ಗಮನಿಸಲಿ. ಪಾಲಕರ ಮಾರ್ಗದರ್ಶನದಲ್ಲಿ ಮಕ್ಕಳು ಇದೇ ರೀತಿಯ ಗುಳ್ಳೆಗಳ ಆಟವನ್ನು (ಬಬಲ್ ಬೋವರ್) ಮನೆಯಲ್ಲಿಯೇ ಮಾಡಲು ಪ್ರೇರೇಪಿಸುವುದು. ಮತ್ತು ಚಟುವಟಿಕೆಯ ಅನುಭವಗಳನ್ನು ಹೇಳಿಸುವುದು.

ಅವಧಿ -4  (40ನಿ)

*ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳ ಚಟುವಟಿಕೆ)

ಸಾಮರ್ಥ್ಯ : ಸೂಕ್ಷ್ಮ ಚಲನಾ ಕೌಶಲಗಳ ಅಭಿವೃದ್ಧಿ ಮತ್ತು ಸೃಜನಶೀಲತೆಯ ವಿಕಾಸ, ಕಣ್ಣು ಕೈಗಳ ಸಮನ್ವಯತೆ ಆಕಾರಗಳ ಪರಿಕಲ್ಪನೆ. ಚಟುವಟಿಕೆ; ಅಕ್ಷರಗಳ ಆಕಾರದ ಒಳಗೆ ಬಣ್ಣ ತುಂಬುವುದು. (ಗುರಿ - 1)


ಉದ್ದೇಶಗಳು: ಸೂಕ್ಷ್ಮ ಸ್ನಾಯುಗಳ ಅಭಿವೃದ್ಧಿಯಾಗುವುದು.


ಕಣ್ಣು ಕೈಗಳ ನಡುವೆ ಸಮನ್ವಯ ಸಾಧಿಸಲು ಸಾಧ್ಯವಾಗುವುದು.


ಸ್ಥಳದ ಪರಿಕಲ್ಪನೆಯನ್ನು ತಿಳಿಯುವುದು.


ಸಾಮಗ್ರಿಗಳು : ರಬ್ಬರ್ ಅಕ್ಷರಗಳು, ರಟ್ಟಿನಲ್ಲಿ ಕತ್ತರಿಸಿದ ಅಕ್ಷರಗಳು.


ವಿಧಾನ : ಮಕ್ಕಳನ್ನು ವೃತ್ತಾಕಾರದಲ್ಲಿ ಕೂರಿಸುವುದು.ಬಿಳಿಹಾಳೆ ಮತ್ತು ರಬ್ಬರ್ ಅಕ್ಷರ/ರಟ್ಟಿನಲ್ಲಿ ಕತ್ತರಿಸಿದ ಅಕ್ಷರಗಳನ್ನು ನೀಡಿ ಅದರ ಆಕಾರದ ರೇಖಾ ಚಿತ್ರಗಳನ್ನು ರಚಿಸಲು ಹೇಳುವುದು. ತಾವು ರಚಿಸಿದ ಚಿತ್ರಗಳಿಗೆ ತಮಗೆ ಇಷ್ಟಬಂದ


ಬಣ್ಣ ತುಂಬಲು ಹೇಳುವುದು.



ಅವಧಿ -5(60ನಿ)


 *ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ* 


 *ಆಲಿಸುವುದು ಮತ್ತುಮಾತನಾಡುವುದು* 

ಸಾಮರ್ಥ್ಯ:- ಧ್ವನಿ ಸಂಕೇತಗಳ ಅರಿವು, ಅಕ್ಷರ ಶಬ್ದ ಸಹ ಸಂಬಂಧ.


ಚಟುವಟಿಕೆ : ಹೆಸರಿನ ಆರಂಭಿಕ ಅಕ್ಷರದಿಂದ ವಸ್ತುವನ್ನು ಪತ್ತೆ ಹಚ್ಚುವುದು (ಗುರಿ-2)


ಉದ್ದೇಶಗಳು:-


* ಧ್ವನಿ ಸಂಕೇತಗಳ ಅರಿವು ಮೂಡಿಸುವುದು.


* ಅಕ್ಷರಗಳು ಮತ್ತು ಪದಗಳ ನಡುವಿನ ಸಹಸಂಬಂಧವನ್ನು ಗ್ರಹಿಸುವುದು. ಪದಗಳನ್ನು ಗ್ರಹಿಸಿ ಗುರುತಿಸುವುದು.


ಅಂತ್ಯಾಕ್ಷರಿ ಪದಗಳನ್ನು ಬರೆಯುವುದು.


ಅಗತ್ಯ ಸಾಮಗ್ರಿಗಳು- ಇಲ್ಲ


ಸಲಹಾತ್ಮಕ ವಿಷಯ : ವಾಹನಗಳು


ವಿಧಾನ:- ಸುಳಿವುಗಳ ಮೂಲಕ ವಾಹನಗಳ ಹೆಸರನ್ನು ಊಹಿಸಿ ಹೇಳುವ ಚಟುವಟಿಕೆಯನ್ನು ಆಯೋಜಿಸಿ, ಉದಾಹರಣೆಗಾಗಿ ಶಿಕ್ಷಕರು 'ನನ್ನ ಮನಸ್ಸಿನಲ್ಲಿರುವ ವಾಹನ ನೀರಿನಲ್ಲಿ ತೇಲುತ್ತಾ ಹೋಗುವಂತಹದ್ದು, ಅದರ ಹೆಸರು ದೋ ಅಕ್ಷರದಿಂದ ಪ್ರಾರಂಭವಾಗುತ್ತದೆ ಎಂದು ಹೇಳಿದಾಗ ಮಕ್ಕಳು ದೋಣಿ ಎಂದು ಗುರುತಿಸುವುದು.


ಹೀಗೆಯೇ ವಿವಿಧ ಉದಾಹರಣೆಗಳನ್ನು ನೀಡುವುದು.

*ಅರ್ಥಗ್ರಹಿಕೆಯೊಂದಿಗಿನ ಓದು* 

 ಸಾಮರ್ಥ್ಯ: ಪದ ಸಂಪತ್ತು ಅಭಿವೃದ್ಧಿ ಸ್ವಯಂ ಅಭಿವ್ಯಕ್ತಿ ನಟನಾ ಓದು


ಚಟುವಟಿಕೆ : ಊಹಾತ್ಮಕ ಓದು (ಗುರಿ-2)


ಉದ್ದೇಶ: ಮಕ್ಕಳು ಪುಸ್ತಕದಲ್ಲಿನ ಚಿತ್ರ ಸನ್ನಿವೇಶವನ್ನು ನೋಡುವುದರ ಮೂಲಕ ಚತ್ರಸಂಕೇತಗಳನ್ನು ಅರ್ಥಹಿಸಿಕೊಂಡು ಸಂಬಂಧೀಕರಿಸಿಕೊಂಡು ಅಭಿವ್ಯಕ್ತಿಸುವುದು.


ಅಗತ್ಯ ಸಾಮಗ್ರಿಗಳು: ಸಚಿತ್ರ ಕೋಶ, ಸರಣಿ ಚಿತ್ರ ಕಥೆ ಪುಸ್ತಕ


ವಿಧಾನ: ಮಕ್ಕಳು ಚಿತ್ರಗಳನ್ನೊಳಗೊಂಡ ಪುಸ್ತಕಗಳನ್ನ ಸಚಿತ್ರ ಕೋಶ, ಸರಣಿ ಚಿತ್ರ ಕಥೆ ಪುಸ್ತಕ ನೋಡಿ ಅಲ್ಲಿರುವ ಸನ್ನಿವೇಶ ವನ್ನು ಊಹೆ ಮಾಡಿ ಓದುವರು



 *ಉದ್ದೇಶಿತ ಬರಹ*   

ಸಾಮರ್ಥ್ಯ: ಉದ್ದೇಶಿತ ಬರವಣಿಗೆ, ವೀಕ್ಷಣೆ, ಕಲ್ಪನೆ, ಸೃಜನಶೀಲ ಚಿಂತನೆ, ಪರಿಸರ ಪ್ರಜ್ಞೆ,


ಚಟುವಟಿಕೆ : ಹವಾಮಾನ ನಕ್ಷೆ (ಗುರಿ-2)


ಉದ್ದೇಶಿತ ಬರವಣಿಗೆಯನ್ನು ರೂಢಿಸುವುದು, ವೀಕ್ಷಣಾ ಕೌಶಲವನ್ನು ಬೆಳೆಸುವುದು.


ಉದ್ದೇಶಗಳು:


ಸೃಜನಶೀಲ ಚಿಂತನೆಯನ್ನು ಉತ್ತೇಜಿಸುವುದು.


ಪರಿಸರ ಪ್ರಜ್ಞೆ ಮೂಡಿಸುವುದು. ಅಗತ್ಯ ಸಾಮಗ್ರಿಗಳು : ಕಾಗದ/ ಹಾಳೆಗಳು, ಪೆನ್ಸಿಲ್


ವಿಧಾನ : ವಾರದ ದಿನಗಳ ಬಗ್ಗೆ ಮಕ್ಕಳೊಂದಿಗೆ ಚರ್ಚಿಸುವುದು.


ವಾರದ ದಿನಗಳ ಪಟ್ಟಿಯನ್ನು ತರಗತಿಯಲ್ಲಿ ಪ್ರದರ್ಶಿಸುವುದು,


ಗುಂಪು ಚಟುವಟಿಕೆಯ ಸಮಯದಲ್ಲಿ ಆ ದಿನದ ಹವಾಮಾನವನ್ನು ಗುರುತಿಸಲು ತಿಳಿಸುವುದು.


ಇದರ ಬಗ್ಗೆ ಮಕ್ಕಳೊಂದಿಗೆ ಚರ್ಚಿಸಿ ಖಾಲಿ ಹಾಳೆಗಳನ್ನ ನೀಡಿ ಆ ದಿನದ ಹವಾಮಾನದ ಚಿತ್ರವನ್ನು ಬರೆಯಲು ತಿಳಿಸುವುದು.


ಮಕ್ಕಳ ಕಾರ್ಯಗಳನ್ನು ತರಗತಿಯಲ್ಲಿ ಪ್ರದರ್ಶಿಸುವುದು. (52ನೇ ದಿನಕ್ಕೆ ಮುಂದುವರೆದಿದೆ)


ಶಿಕ್ಷಕರು ಮಕ್ಕಳೆದುರು ಕಪ್ಪುಹಲಗೆಯಲ್ಲಿ ಬರೆಯುವುದು, ಬರವಣಿಗೆಯ ಸರಿಯಾದ ಕ್ರಮವನ್ನು ಮಕ್ಕಳು ನೋಡಲುಅವಕಾಶ ಕಲ್ಪಿಸುವುದು. ಮಕ್ಕಳ ಹೆಸರು. ಮಕ್ಕಳು ಬರೆದ ಚಿತ್ರಗಳ ಹೆಸರು ಮೊದಲಾದವುಗಳನ್ನು ಮಕ್ಕಳೆದುರೇ ಬರೆಯುವುದು. ಶಿಕ್ಷಕರು ತರಗತಿಯಲ್ಲಿ ಏನನ್ನೇ ಬರೆಯುವುದಾದರೂ ಮಕ್ಕಳ ಎದುರಿನಲ್ಲಿಯೇ ಬರೆಯುವುದು.


 ಅವಧಿ - 6(40ನಿ)

*ಹೊರಾಂಗಣ ಆಟಗಳು* 

ಚಟುವಟಿಕೆ : ಸಮತೋಲನ (ಗುರಿ-1 ಸಾಮರ್ಥ್ಯ: ಸ್ಕೂಲ ಸ್ನಾಯು ಚಲನ ಕೌಶಲ ಬೆಳವಣಿಗೆ,


ಬೇಕಾಗುವ ಸಾಮಗ್ರಿ: ಪುಸ್ತಕ, ನೀರಿನ ಲೋಟ, ಹಗ್ಗ ವಿಧಾನ:


ಮಕ್ಕಳು ತಮ್ಮ ತಲೆಯ ಮೇಲೆ ಪುಸ್ತಕವನ್ನು ಬ್ಯಾಲೆನ್ಸ್ ಮಾಡುತ್ತ ಈ ಓಟವನ್ನು ಮುಗಿಸಬೇಕು ಎಂದು ಸೂಚಿಸುವುದು.


• ಮಕ್ಕಳಿಗೆ ಓಟವನ್ನು ಆಯೋಜಿಸುವುದು.


ಯಾರು ಪುಸ್ತಕವನ್ನು ಬೀಳಿಸದೆ ಮುಕ್ತಾಯದ ಗೆರೆಗೆ ಮೊದಲು ತಲುಪುತ್ತಾರೋ ವಿಜೇತರಾಗುತ್ತಾರೆ


ಅವಧಿ - 7(40ನಿ)

*ಕಥಾ ಸಮಯ* 

ಮೊದಲ ದಿನದ ಉದ್ದೇಶದಂತೆ ಕಥಾ ಸಮಯವು ಮುಂದುವರೆಯುತ್ತದೆ.


ಕಥಾ ಸಾಹಿತ್ಯದ ನಿರೂಪಣೆ


ಶಿಕ್ಷಕರು ಕಥೆಯನ್ನು ನಿರೂಪಿಸುವುದರ ಜೊತೆಗೆ ಮಕ್ಕಳ ನೆರವನ್ನು ಪಡೆದುಕೊಳ್ಳು ವುದರ ಮೂಲಕ ಕಥೆಯನ್ನು ಪೂರ್ಣ ಗೊಳಿಸುವುದು.


ಉದಾ: ಇದಾದ ಮೇಲೆ ಏನಾಗಿತ್ತು? ನಂತರ ಯಾರು ಏನು ಹೇಳಿದರು? ಇತ್ಯಾದಿ


ಕಥೆಯನ್ನು ಹೇಳಿದ ನಂತರ ಸರಳ ಪ್ರಶ್ನೆಗಳನ್ನು ಕೇಳಿ.


ಸಿಗ್ನಲ್ ದೀಪವನ್ನು ನೋಡಿದ ಕಾಗೆ ಏನೆಂದು ಯೋಚಿಸಿತು?


ಕೆಂಪು ದೀಪ ಬಂದಾಗ ಕಾಗೆ ಏನು ಹೇಳಿತು?


(ಕಥೆಯನ್ನು ಆನಂದಿಸುವುದರ ಜೊತೆಗೆ ಆಲಿಸುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿ ಕೊಳ್ಳುವುದು)


ಅವಧಿ -8(20ನಿ)

*ಮತ್ತೆ ಸಿಗೋಣ* 

ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು ಪುನರಾವರ್ತಿಸಿ/ನೆನಪಿಸಿ


ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ


ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಿ. "ಸಿಪ್ಪೆ ಸಹಿತ ನೇರವಾಗಿ ತಿನ್ನುವ ಹಣ್ಣುಗಳ ಬಗ್ಗೆ" ಮಕ್ಕಳು ತಮ್ಮ ಮನೆಗಳಲ್ಲಿ ಮಾಹಿತಿ ಸಂಗ್ರಹಿಸಿಕೊಂಡು ಬರಲಿ.


ಮರುದಿನ ಮಕ್ಕಳು ಸಂತೋಷದಿಂದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ, ಬೀಳ್ಕೊಡಿ.


[ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ]


------------------------------


 *ವಂದನೆಗಳೊಂದಿಗೆ* ,


ರೇಣುಕಾರಾಧ್ಯ ಪಿ ಪಿ 

                        ಶಿಕ್ಷಕರು

ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು


ಅರಸೀಕೆರೆ, ಹಾಸನ


 *ಸಲಹೆ ಮತ್ತು ಮಾರ್ಗದರ್ಶನ* 


ಶ್ರೀಯುತ ಆರ್.ಡಿ.ರವೀಂದ್ರ


ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕೊಪ್ಪ

Wednesday, 25 June 2025

ವಿದ್ಯಾಪ್ರವೇಶ ದಿನ 22

  https://nalikalirenukaradhyatlm.blogspot.com/


 *ಆಡಿಯೋ ಲಿಂಕ್* 

https://drive.google.com/file/d/1q0CMAbEK_5mbhWsdwb9mvbK-cmi-Lc52/view?usp=drivesdk


*ವಿದ್ಯಾಪ್ರವೇಶ ದಿನ-22* 



✒️🚁🎮🎨🎲🧮📏🔍


*ಅವಧಿ -1* (40ನಿ)

*ಶುಭಾಶಯ ವಿನಿಮಯ* 

(ಮಕ್ಕಳೊಂದಿಗೆ ಶಿಕ್ಷಕರ

 ಬೆಳಗಿನ ಕುಶಲೋಪರಿ)  

ಚಟುವಟಿಕೆ 1


ಸಾಮಗ್ರಿಗಳು: ಪಕ್ಷಿಗಳ ಚಿತ್ರಗಳು/ ಆಟಿಕೆಗಳು


ವಿಧಾನ:


'ಮಕ್ಕಳನ್ನು ತರಗತಿಯಹೊರಗೆ ಒಂದುಸಾಲಿನಲ್ಲಿನಿಲ್ಲುವಂತೆಮಾಡಿ. (ಸುರಕ್ಷತಾ ಕ್ರಮಗಳನ್ನು ಗಮನಿಸಿ)


'ಪಕ್ಷಿ ಗಳ ಚಿತ್ರಗಳನ್ನು ಒಂದೊಂದಾಗಿ ತೋರಿಸಿ. (ಶಿಕ್ಷಕರು ತರಗತಿಯಬಾಗಿಲಲ್ಲಿನಿಲ್ಲಬೇಕು. )


ಚಿತ್ರ ನೋಡಿ ಆ ಪಕ್ಷಿ ಯ ಹೆಸರು ಮತ್ತು ಕೂಗುವ ರೀತಿಯಲ್ಲಿ ತರಗತಿ ಪ್ರವೇಶಿಸಲು ಸೂಚಿಸುವುದು


ಉದಾಹರಣೆಗೆ: ನಾನು ನವಿಲು.


'ತರಗತಿ ಪ್ರವೇಶಿಸಿದನಂತರವೃತ್ತಾಕಾರವಾಗಿ ನಿಲ್ಲುವಂತೆ ಸೂಚನೆ.


'ಮಕ್ಕಳು ತರಗತಿಯನ್ನು ಪ್ರವೇಶಿಸುವಾಗಶಿಕ್ಷಕರುಮಕ್ಕಳಿಗೆ "ನಮಸ್ತೆ, ಗುಡ್‌ ಮಾನಿರ್ಂಗ್" ಎಂದು


ಗ್ರೀಟ್ ಮಾಡುವುದು.


'ಮಕ್ಕಳನ್ನು ಕೇಳಿ, "ಇಂದು ಯಾವದಿನ?" ಮತ್ತು "ಇಂದು


ಎಂದುಹೇಳುವಮೂಲಕಮಕ್ಕಳನ್ನು ಪ್ರತಿಕ್ರಿಯಿಸುವಂತೆ ಮಾಡಿ.


'ಹವಾಮಾನನಕ್ಷೆಯ ಚಟುವಟಿಕೆಮಾಡಿಸುವುದು .


ಚಟುವಟಿಕೆ 2:TPR


'ಮಕ್ಕಳನ್ನುವೃತ್ತಾಕಾರದಲ್ಲಿನಿಲ್ಲುವಂತೆ ಮಾಡಿ ಮತ್ತು ಸೂಚನೆಗಳನ್ನು ಕೇಳಲುಮತ್ತು ಅನುಸರಿಸಲು ಅವರಿಗೆ


ಸರಳTPRಸೂಚನೆಗಳನ್ನು ಕೊಡಿ


'ಉದಾ : ಹಕ್ಕಿಯಹಾಗೆಹಾರು


•ಮೊಲದಹಾಗೆ ಜಿಗಿ


'ಕಪ್ಪೆಯಹಾಗೆ ಕುಪ್ಪಳಿಸು


 *ಮಾತು ಕತೆ* 


( ಶಿಕ್ಷಕರು - ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕ ಚಟುವಟಿಕೆ)

ಚಟುವಟಿಕೆ : Sneeze and cough


ಅಗತ್ಯವಿರುವಸಾಮಗ್ರಿಗಳು: ಹ್ಯಾಂಡ್ ಕರ್ಚೀಫ್, ಸ್ಯಾನಿಟೈಸರ್, ವಿಧಾನ:


ಮಕ್ಕಳನ್ನು ವೃತ್ತದಲ್ಲಿನಿಲ್ಲುವಂತೆಮಾಡಿ .


ಸೀನುವಾಗ ಕರವಸ್ತ್ರವನ್ನು ಹೇಗೆ ಬಳಸಬೇಕೆಂದು ತಿಳಿಸಿ.


ಅದನ್ನು ಅನುಕರಿಸಲುಮಕ್ಕಳನ್ನು ಹೇಳಿ.


ಈಗ ಕೈ ಹಿಡಿದುಕೊಂಡು ಕೆಮ್ಮುವುದು ಹೇಗೆ ಎಂದು ತೋರಿಸಿ ಮತ್ತು ಅದನ್ನು ಅನುಕರಿಸಲು ಮಕ್ಕಳಿಗೆ ಹೇಳಿ.


• ಸ್ಯಾನಿಟೈಸರ್‌ ಬಳಕೆಯ ಬಗ್ಗೆ ಕೇಳಿಮತ್ತುವಿವರಿಸಿ


ಮಕ್ಕಳು ಈ ಕ್ರಿಯೆಗಳನ್ನು ಬಳಸಲು ಕಲಿಯುವವರೆಗೆ ಮತ್ತೆಹಂತಗಳನ್ನು ಪುನರಾವರ್ತಿಸಿ.


ಮಕ್ಕಳನ್ನು ವೃತ್ತಾಕಾರದಲ್ಲಿ ಕೂರಿಸಿ.ಮಕ್ಕಳನ್ನು ಗುಂಪು ಚರ್ಚೆ ಒಳಗೊಳ್ಳುವಂತೆ ಸರಳವಾದ ಪ್ರಶ್ನೆಗಳನ್ನು


ನಾವು ಯಾವಾಗಸೀನುತ್ತೇವೆ?


ಸೀನಲುನಾವು ಏನುಬಳಸಬೇಕು?


ಇತರರಮುಂದೆಸೀನಿದರೆ ಏನಾಗುತ್ತದೆ?


ನಾವು ಹೇಗೆ ಕೆಮ್ಮಬೇಕು?


ಮಾಸ್ಕ್‌ ಬಳಸುವುದರಮುಖ್ಯ ಉದ್ದೇಶವೇನು? ಇತ್ಯಾದಿ.


ಎಲ್ಲಾ ಮಕ್ಕಳು ಗುಂಪು ರೈಯಲ್ಲಿ ಭಾಗವಹಿಸುವುದನ್ನು ಶಿಕ್ಷಕರು ಖಚಿತಪಡಿಸಿಕೊಳ್ಳಬೇಕು

ಅವಧಿ-2 (40ನಿ)

*ನನ್ನ ಸಮಯ* 

ಕಲಿಕಾ ಸಿದ್ಧತಾ ಭಾಗವಾಗಿ 4 ಮೂಲೆಗಳಲ್ಲಿ ಮೊದಲ ಹಂತದಲ್ಲಿ ನಿಗದಿಪಡಿಸಿರುವ ಮೂಲೆವಾರು ಚಟುವಟಿಕೆಗಳ ಬಗ್ಗೆ ಹಾಗೂ ಆಯಾ ಮೂಲೆಗಳ ಸಾಮಗ್ರಿಗಳನ್ನು ಬಳಸುವ ಬಗ್ಗೆ ಶಿಕ್ಷಕರು ಮಕ್ಕಳಿಗೆ ಪರಿಚಯ ಒದಗಿಸುವರು. ಮಕ್ಕಳಿಗೆ ಪ್ರಶ್ನೆಗಳನ್ನು ಕೇಳುತ್ತ ಅವರ ಅರ್ಥೈಸಿಕೊಳ್ಳುವಿಕೆಯನ್ನು ಖಾತ್ರಿ ಪಡಿಸಿಕೊಳ್ಳುತ್ತಾರೆ.


(* ಮೂಲೆವಾರು ಸಲಹಾತ್ಮಕ ಚಟುವಟಿಕೆಗಳನ್ನು ನೀಡಿದ್ದು, ಸಾಮರ್ಥ್ಯಗಳನ್ನು ಸಾಧಿಸಲು ಅನುಕೂಲವಾಗುವಂತೆ ಮಕ್ಕಳಿಗೆ ಹೆಚ್ಚುವರಿ ಚಟುವಟಿಕೆಗಳನ್ನು ಯೋಚಿಸಬಹುದಾಗಿದೆ.)


ಮೂಲೆ - ಬಿಲ್ಡಿಂಗ್ ಬ್ಲಾಕ್ ಮೂಲೆ:-


ಸಾಮರ್ಥ್ಯ: ಕಣ್ಣು ಮತ್ತು ಕೈಗಳ ಸಂಯೋಜನೆಯನ್ನು ಸಾಧಿಸುವುದು.


ಚಟುವಟಿಕೆ: "ಗೆರೆ ಮೇಲೆ ಜೋಡಿಸು"


ಉದ್ದೇಶ :ವಸ್ತುಗಳನ್ನು ನಿರ್ದಿಷ್ಟವಾಗಿ ಜೋಡಿಸುವ ಕೌಶಲ್ಯ ಬೆಳೆಸುವುದು, ಏಕಾಗ್ರತೆ, ಸೌಂದರ್ಯಪ್ರಜ್ಞೆ ಹಾಗೂ ಆತ್ಮವಿಶ್ವಾಸ ಬೆಳೆಸುವುದು.


ಸಾಮಗ್ರಿಗಳು: ಬೀಜ, ಹರಳು,ಬ್ಲಾಕ್ ಗಳು


ವಿಧಾನ : ಶಿಕ್ಷಕರು ನೆಲದ ಮೇಲೆ ಸರಳ/ವಕ್ರ ರೇಖೆಗಳನ್ನು ಸೀಮೆಸುಣ್ಣದಿಂದ ಎಳೆಯುವರು, ಆ ಗೆರೆಗಳ ಮೇಲೆ ಬೀಜ, ಹರಳು, ಬ್ಲಾಕ್ ಗಳನ್ನು ಅನುಕ್ರಮವಾಗಿ ಜೋಡಿಸುವುದು.


ಮೂಲೆ - ಗಣಿತ ಮೂಲೆ:-


ಸಾಮರ್ಥ್ಯ: ವಸ್ತುಗಳ ಗಾತ್ರ, ಎತ್ತರ-ಗಿಡ್ಡ, ಭಾರ-ಹಗುರ, ಆಧಾರದ ಮೇಲೆ ವರ್ಗೀಕರಿಸುವುದು ಹಾಗೂ ಸಾಂಕೇತಿಕವಾಗಿ


ಸಂಖ್ಯೆಗಳ ಹೋಲಿಕೆ ಮಾಡುವುದು.


ಉದ್ದೇಶ : ವಸ್ತು/ಬ್ಲಾಕ್ ಗಳನ್ನು ಎತ್ತರ/ಗಿಡ್ಡ ಆಧಾರವಾಗಿ ವರ್ಗೀಕರಿಸುವುದು.


ಸಾಮಗ್ರಿಗಳು: ಬ್ಲಾಕ್ ಗಳು, ಖಾಲಿ ಬೆಂಕಿ ಪೊಟ್ಟಣ/ಸೋಪ್ ಬಾಕ್ಸ್/ಟೂಥ್ ಪೇಸ್ಟ್ ಬಾಕ್ಸ, ಎತ್ತರ/ಗಿಡ್ಡ ಬಿಂಬಿಸುವ


ಸಾಮಗಿಗಳು


* ಲಭ್ಯ ಬ್ಲಾಕ್/ ಸಾಮಗ್ರಿಗಳಲ್ಲಿ ವಸ್ತುಗಳ ಎತ್ತರ ಗಿಡ್ಡವನ್ನು ಆಧರಿಸಿ ವರ್ಗೀಕರಿಸುವುದು ತನಗಿಂತ ಎತ್ತರವಾದ ಹಾಗೂ ಗಿಡ್ಡವಿರುವ ವಸ್ತುಗಳನ್ನು ಹೆಸರಿಸುವುದು.


ಪರಿಸರದಲ್ಲಿ ಕಾಣಸಿಗುವ ಎತ್ತರ/ಗಿಡ್ಡವಾದ ಮರ, ಮನೆ, ಪ್ರಾಣಿ ಇತ್ಯಾದಿಗಳನ್ನು ಹೆಸರಿಸುವುದು


ಆನೇಷಣೆ ಅಥವಾ ವಿಜ್ಞಾನ ಮೂಲೆ:


ಸಾಮರ್ಥ್ಯ: ವೈಜ್ಞಾನಿಕ, ಅನ್ವೇಷಣಾ ಮನೋಭಾವ ಹಾಗೂ ಚಿಂತನಾ ಮನೋಭಾವಗಳನ್ನು ಬೆಳೆಸುವುದು.


ಚಟುವಟಿಕೆ: ತೇಲು ಮುಳುಗು (ಗುರಿ - 3)


ಉದ್ದೇಶ : ತೇಲುವ ಹಾಗೂ ಮುಳುಗುವ ವಸ್ತುಗಳ ವರ್ಗೀಕರಣ


ಸಾಮಗ್ರಿ :- ನೀರು, ಟಬ್, ಪ್ಲಾಸ್ಟಿಕ್ ಚೆಂಡು, ಮುಚ್ಚಳ, ಐಸ್ ಕ್ರೀಂ ಕಡ್ಡಿ, ತುಂಡು, ನಾಣ್ಯ. ತೇಲುವ ಮುಳುಗುವ ವಸ್ತುಗಳು,


ವಿಧಾನ:


ಮಕ್ಕಳು ಟಬ್ ನ ನೀರಿನಲ್ಲಿ ವಸ್ತುಗಳನ್ನು ಹಾಕುವ ಮೂಲಕ ಯಾವ ವಸ್ತುಗಳು ತೇಲುತ್ತವೆ ಮುಳುಗುತ್ತವೆ ಎಂದು


ಆಧಾರದ ಮೇಲೆ ಅವುಗಳನ್ನು 2 ಗುಂಪುಗಳಾಗಿ ವಿಂಗಡಿಸುತ್ತಾನೆ.



ಗೊಂಬೆಗಳ ಮೂಲೆ :


ಸಾಮರ್ಥ್ಯ: ಸೌಂದರ್ಯೋಪಾಸನೆ, ವೈಯಕಿಕ ಸ್ವಚ್ಛತೆ, ಅಭಿವ್ಯಕ್ತಿ ಕೌಶಲ್ಯ ಬೆಳೆಸುವುದು.


ಚಟುವಟಿಕೆ: ನೋಡು ನನ್ನ ಗೊಂಬೆ


ಉದ್ದೇಶ: ನಿರ್ದಿಷ್ಟ ವಿಷಯದ ಕುರಿತು ಅಭಿವ್ಯಕ್ತಿ ಬೆಳೆಸುವುದು.


ಸಾಮಗ್ರಿ :- ಹಸು, ಹುಲಿ, ಆನೆ, ನವಿಲು, ಕೋಳಿ, ಪಾರಿವಾಳ, ಹಾಗೂ ಇತರೆ ಪ್ರಾಣಿ-ಪಕ್ಷಿಗಳ ಗೊಂಬೆಗಳು.


ವಿಧಾನ:


ಮೂಲೆಯಲ್ಲಿ ಲಭ್ಯವಿರುವ ಗೊಂಬೆಗಳಲ್ಲಿ ತಾನೇ 2-3 ಗೊಂಬೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. ಆಯ್ಕೆ ಮಾಡಿಕೊಂಡ ಗೊಂಬೆಗಳ ಬಗ್ಗೆ 2-3 ವಾಕ್ಯಗಳನ್ನು ಹೇಳುವನು.

ಓದುವ / ತರಗತಿ ಗ್ರಂಥಾಲಯ ಮೂಲೆ :


ಸಾಮರ್ಥ್ಯ: ಚಿತ್ರಗಳನ್ನು ಓದುವುದರೊಂದಿಗೆ ಅರ್ಥೈಸಿಕೊಳ್ಳುವುದು, ಕಲ್ಪನಾಶಕ್ತಿ, ಅಭಿವ್ಯಕ್ತಿ ಸಾಮರ್ಥ್ಯವನ್ನು ಬೆಳೆಸುವುದು.


ಚಟುವಟಿಕೆ: ಚಿತ್ರ ಓದು (ಗುರಿ - 1)


ಉದ್ದೇಶ : * ಚಿತ್ರ ಗುರುತಿಸುವುದರೊಂದಿಗೆ ಸ್ಪಷ್ಟವಾಗಿ ಅದರ ಬಗ್ಗೆ ಮಾತನಾಡುತ್ತಾನೆ / ಳೆ.



ಸಾಮಗ್ರಿ :- ಸನ್ನಿವೇಶ ಬಿಂಬಿತ ಚಿತ್ರಗಳು. (ಮನೆ, ಆಸ್ಪತ್ರೆ, ಶಾಲೆ, ಸಹಾಯ ಮಾಡುವಿಕೆ, ಅಪಘಾತ ಸನ್ನಿವೇಶ, ಆರೋಗ್ಯಕರ ಅಭ್ಯಾಸಗಳು)


ವಿದ್ಯಾ ಪ್ರವೇಶ (ವಿ.ಪ):


ಓದಿನ ಮೂಲೆಯಲ್ಲಿ ಲಭ್ಯವಿರುವ ವಿಭಿನ್ನ ಸನ್ನಿವೆಶಗಳ ಚಿತ್ರ ಕಾರ್ಡ್‌ಗಳನ್ನು


ಓದಿ ತನ್ನದೆ ರೀತಿಯಲ್ಲಿ ವಿವರಿಸುತ್ತಾನೆ.



ಕಲೆಗೊಂದು ನೆಲೆ/ಕರಕುಶಲ ಮೂಲೆ:


ಸಾಮರ್ಥ್ಯ: ಸೂಕ್ಷ್ಮ ಸ್ನಾಯು ಬೆಳವಣಿಗೆಯೊಂದಿಗೆ ಸೌಂದರ್ಯೋಪಾಸನೆ, ಸೃಜನಶೀಲತೆಯನ್ನು ಬೆಳೆಸುವುದು. ಚಟುವಟಿಕೆ: ಟೋಪಿ ಬೇಕಾ ಟೋಪಿ (ಟೋಪಿ ತಯಾರಿಕೆ)


ಉದ್ದೇಶ : * ನೀಡಲಾದ ಮಾರ್ಗದರ್ಶನವನ್ನು ಅರ್ಥೈಸಿಕೊಂಡು


ಕಾರ್ಯೋನ್ಮುಖನಾಗುವುದು. ಸಾಮಗ್ರಿ :- ನಿಯತ ಕಾಲಿಕೆಗಳ ಪತ್ರಿಕೆಗಳ ಪುಟಗಳು,

ಬಣ್ಣದ ಹಾಳೆಗಳು


ಬರೆಯುವ ಮೂಲೆ :


ಸಾಮರ್ಥ್ಯ : ಬರವಣಿಗೆ ಸಿದ್ಧತಾ ಅಭ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ಅಕ್ಷರಗಳ ವಿನ್ಯಾಸವನ್ನು ರಚಿಸುವುದು.


ಚಟುವಟಿಕೆ: ಗೆರೆಗಳನ್ನು ರಚಿಸು


ಉದ್ದೇಶ : ಬರವಣೆಗೆ ಪೂರ್ವ ಸಿದ್ಧತೆಗಾಗಿ ವಿವಿಧ ರೀತಿಯಲ್ಲಿ ರೇಖೆಗಳನ್ನು ರಚಿಸುವುದು.


ಸಾಮಗ್ರಿ : ಪೇಪರ್, ಪೆನ್ಸಿಲ್, ಎರೈಸರ್, ಸ್ಟೇಲ್ 


ಆಟಿಕೆ / ಮಾಡಿ ನೋಡು ಮೂಲೆ :


ಸಾಮರ್ಥ್ಯ: ಆಲೋಚನಾಶಕ್ತಿ, ಸೃಜನಶೀಲತೆ, ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವುದು.


ಚಟುವಟಿಕೆ: "ಚಿತ್ರ ಚಿತ್ತಾರ"


ಉದ್ದೇಶ : ಕಲೋಪಾಸನೆಯನ್ನು ಗುರುತಿಸುವುದು ಮತ್ತು ಪ್ರೋತ್ಸಾಹಿಸುವುದು.


ಸಾಮಗ್ರಿಗಳು: ಬಿಳಿಹಾಳೆ, ಅಂಟು, ಬಣ್ಣ, ಪೆನ್ಸಿಲ್ ನ್ನು ಶಾರ್ಪನರ್ ನಿಂದ ಹೆರೆದಾಗ ಸಿಗುವ ಕಸದ ತುಂಡುಗಳು


2: (2.5) ಶಾರ್ಪನರ್ ನಿಂದ ಪೆನ್ಸಿಲ್ ತೆರೆದಾಗ ಸಿಗುವ ಕಸದ ತುಂಡುಗಳನ್ನು ಹೂವಿನಾಕಾರದಲ್ಲಿ ಜೋಡಿಸಿ ಅಂಟಿಸುವುದು, ಬಣ್ಣ ತುಂಬುವುದು. ತೊಟ್ಟು-ಎಲೆಗಳನ್ನು ಚಿತ್ರಿಸುವುದು.


 ಅವಧಿ-3(40ನಿ)

*ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* (ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ)

ಸಾಮರ್ಥ್ಯ: ಹೋಲಿಸುವುದು, ಪರಿಸರ ಅರಿವು, ಬಣ್ಣಗಳ ಕಲ್ಪನೆ, ಆಕಾರ ಮತ್ತು ಗಾತ್ರ ಚಟುವಟಿಕೆ 12 ಎ ." ಸ್ಪರ್ಶ ಮಾಡು ಎಣಿಸಿ ನೋಡು" (ಗುರಿ -3)


ಉದ್ದೇಶ:- ಸ್ಪರ್ಶಿಸಿ ಎಣಿಸಿ ಹೇಳುವುದು.


ಸಾಮಗ್ರಿಗಳು: ಬ್ಲಾಕ್, ಬಳಪ, ಹರಳುಗಳು, ಬಾಟಲ್ ಮುಚ್ಚಳ, ಬಾಲು, ಕಾಳುಗಳು.


ವಿಧಾನ: ಐದು ಅಥವಾ ಐದಕ್ಕಿಂತ ಹೆಚ್ಚು ವಸ್ತುಗಳನ್ನು ಇರಿಸುವುದು ( ಬ್ಲಾಕ್‌ಗಳು, ಸೀಮೆಸುಣ್ಣ, ಬಾಟಲ್ ಮುಚ್ಚಳ ಬಾಲಗಳು) ಪ್ರತಿಯೊಂದು ವಸ್ತುವನ್ನು ಸ್ಪರ್ಶಿಸಲು ಮತ್ತು ಎಣಿಸಲು ಹೇಳುವುದು. ಗುಣಲಕ್ಷಣಗಳ ಆಧಾರದಲ್ಲಿ ಹೊಂದಿಸುವುದು. ವಿಭಿನ್ನ ರೀತಿಯ ವಸ್ತುಗಳನ್ನು ನೀಡಿ ಒಂದಕ್ಕಿಂತ ಒಂದು ಹೇಗೆ ಭಿನ್ನವಾಗಿವೆ ಎಂಬುದನ್ನು ತಿಳಿಸಲು ಹೇಳುವುದು.


2ನೇ ತರಗತಿ


ಕನಿಷ್ಠ 10 ವಸ್ತುಗಳನ್ನು ನೀಡಿ ಅವುಗಳ ಗುಣಲಕ್ಷಣಗಳ ಆಧಾರದ ಮೇಲೆ ವಿಂಗಡಿಸಿ ಎಣಿಸಲು ತಿಳಿಸುವುದು.


ಆಹಾ:-II.-15 ಹಣ್ಣುಗಳ ಬೀಜ ಗುರ್ತಿಸೋಣ


ಅವಧಿ -4  (40ನಿ)

*ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳ ಚಟುವಟಿಕೆ)

ಸಾಮರ್ಥ್ಯ : ಸ್ಕೂಲ ಮತ್ತು ಸೂಕ್ಷ್ಮ ಸ್ನಾಯುಗಳ ಚಲನಾ ಕೌಶಲಗಳ ಸೌಂದರ್ಯ ಪ್ರಜ್ಞೆಯ ವಿಕಾಸ. ಅಭಿವೃದ್ಧಿ, ಸೃಜನಶೀಲತೆ ಮತ್ತು


ಚಟುವಟಿಕೆ: 21. ಯೋಗ, ನೃತ್ಯ ಮತ್ತು ವ್ಯಾಯಾಮ. ಗುರಿ - 1


ಉದ್ದೇಶ:


ಸ್ಕೂಲ ಮತ್ತು ಸೂಕ್ಷ್ಮ ಸ್ನಾಯುಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ.


• ಸೃಜನಶೀಲತೆಯನ್ನು ಅಭಿವ್ಯಕ್ತಿಗೊಳಿಸಲು ಸಹಕಾರಿಯಾಗುತ್ತದೆ.


• ಮಕ್ಕಳ ಸಮಗ್ರ ವಿಕಾಸ ಮತ್ತು ಆರೋಗ್ಯಕ್ಕೆ ಸಹಕಾರಿಯಾಗುತ್ತದೆ.


. ಉತ್ತಮ ಭಂಗಿಗಳನ್ನು ಕಲಿಯಲಾಗುತ್ತದೆ. [ನಿಲ್ಲುವುದು. ಕುಳಿತುಕೊಳ್ಳುವುದು, ನೆಡೆಯುವುದು]


ಸಾಮಗ್ರಿಗಳು : ಸ್ಕಾರ/ದುಪಟ್ಟಿ ಯಾವುದಾದರು ಸಂಗೀತ ವಾದ್ಯ


ವಿಧಾನ : ಚಟುವಟಿಕೆಗೆ ಹೊಂದುವಂತಹ ಯಾವುದಾದರು ಜನಪ್ರಿಯ ಅಥವಾ ಸಾಂಪ್ರದಾಯಿಕ ಸಂಗೀತವನ್ನು ಹಾಕುವುದು. ಮಕ್ಕಳಿಗೆ ಸಂಗೀತಕ್ಕೆ ಸರಿಯಾಗಿ ದುಪಟ್ಟಿ ಹಿಡಿದು ಚಲಿಸಲು ಹೇಳುವುದು ಅಥವಾ ಚಿತ್ರದಲ್ಲಿ ತೋರಿಸಿರುವಂತೆ ಯೋಗಾಸನದ ವಿವಿಧ ಭಂಗಿಗಳನ್ನು ಮಕ್ಕಳು ಪ್ರಯತ್ನಿಸಬಹುದು. ಯೋಗಾಸನ, ನೃತ್ಯ, ವ್ಯಯಾಮ ಮುಂತಾದ ಚಟುವಟಿಕೆಗಳು ಮಕ್ಕಳ ಸಮಗ್ರ ವಿಕಾಸ ಮತ್ತು ಆರೋಗ್ಯಕ್ಕೆ ಸಹಕಾರಿಯಾಗಿದೆ. ಇದರಿಂದ ಮಕ್ಕಳು ದೈಹಿಕವಾಗಿ ಸಮರ್ಥರಾಗುತ್ತಾರೆ, ಮಾನಸಿಕವಾಗಿ ಜಾಗೃತರಾಗುತ್ತಾರೆ ಮತ್ತು ಭಾವನೆಗಳ ಸಮತೋಲನ ಉಂಟಾಗುತ್ತದೆ. ಆದ್ದರಿಂದ ಸುಗಮಕಾರರು ಈ ಚಟುವಟಿಕೆಗಳನ್ನು ದಿನನಿತ್ಯದ ಮಕ್ಕಳ ಪಠ್ಯಕ್ರಮದ ಚಟುವಟಿಕೆಗಳನ್ನಾಗಿ ರೂಢಿಸಿಕೊಳ್ಳುವುದು.



ಬಳಸಬೇಕಾದ ಅಭ್ಯಾಸ ಹಾಳೆಗಳು: H. W.-11 


ಅವಧಿ -5(60ನಿ)


 *ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ* 



 *ಆಲಿಸುವುದು ಮತ್ತುಮಾತನಾಡುವುದು* 

ಸಾಮರ್ಥ್ಯ: ಕ್ರಿಯಾತ್ಮಕ ಸ್ವ ಅಭಿವ್ಯಕ್ತಿ, ಧ್ವನಿ ಸಂಕೇತ ಹಾಗೂ ಪ್ರಾಸದ ಅರಿವು, ಪರಿಸರ ಪ್ರಜ್ಞೆ, ಪದಸಂಪತ್ತಿನ ಬೆಳವಣಿಗೆ ಚಟುವಟಿಕೆ 3 ಹಾಡು, ಪ್ರಾಸಗೀತೆ, ಪದ್ಯ/ನಾಟಕ. (ಗುರಿ-2) ECL-3


ಉದ್ದೇಶ:


ಧ್ವನಿ ಸಂಕೇತಗಳ ಅರಿವನ್ನು ಮೂಡಿಸುವುದು.


ಪ್ರಾಸಗಳ ಅರಿವನ್ನು ಉಂಟು ಮಾಡುವುದು.


ಕ್ರಿಯಾತ್ಮಕ ಸ್ವ ಅಭಿವ್ಯಕ್ತಿಗೆ ಅವಕಾಶ ಕಲ್ಪಿಸುವುದು.


* ತನ್ನ ಸುತ್ತಲಿನ ಪರಿಸರದೊಂದಿಗೆ ಸಂಬಂಧೀಕರಿಸುವುದು.


ಅಗತ್ಯ ಸಾಮಗ್ರಿಗಳು ಇಲ್ಲ


ವಿಧಾನ: ಮಕ್ಕಳನ್ನು ವೃತ್ತಾಕಾರದಲ್ಲಿ ನಿಲ್ಲಿಸಿ. ಶಿಕ್ಷಕರು ಮಕ್ಕಳಿಗೆ ಹೊಸ ಪ್ರಾಸಗೀತೆಯನ್ನು ಅಭಿನಯದೊಂದಿಗೆ ಹಾಡಿ ತೋರಿಸಲಿ. ಶಿಕ್ಷಕರನ್ನು ಅನುಕರಿಸುತ್ತಾ ಮಕ್ಕಳು ಹಾಡನ್ನು ಪುನರುಚ್ಚರಿಸಲು ತಿಳಿಸಿ.


ನೆನಪಿಡಬೇಕಾದ ಅಂಶಗಳು:


* ಮಕ್ಕಳು ಹಾಡನ್ನು ಆನಂದಿಸಲು ಸೂಕ್ತ ಅಭಿನಯ ಹಾಗೂ ಉತ್ಸಾಹದಿಂದ ಹಾಡಿ.


ಮಕ್ಕಳು ಗೀತೆಯಲ್ಲಿರುವ ಪ್ರಾಸ ಪದಗಳನ್ನು ಶಿಕ್ಷಕರ ಸಹಾಯದಿಂದ ಗುರುತಿಸಲಿ.



*ಅರ್ಥಗ್ರಹಿಕೆಯೊಂದಿಗಿನ ಓದು* 

 ಸಾಮರ್ಥ್ಯ : ಪದ ಗುರುತಿಸುವುದು, ಮುದ್ರಿತ ಪಠ್ಯದ ಅರಿವು, ಅರ್ಥ ಗ್ರಹಿಕೆ, ಪದ ಸಂಪತ್ತಿನ ಅಭಿವೃದ್ಧಿ,


ಚಟುವಟಿಕೆ : 11 ಹೆಸರಿನ ಜಗತ್ತು (ಗುರಿ 2)


ಉದ್ದೇಶ: ಪರಿಚಿತ ಸನ್ನಿವೇಶದಲ್ಲಿನ ವಸ್ತುಗಳನ್ನು ಲಿಪಿಸಂಕೇತಗಳೊಂದಿಗೆ ಸಹ ಸಂಬಂಧಿಕರಿಸಿಕೊಳ್ಳುವುದು. ಸಾಹಿತ್ಯ


ಮತ್ತು ವಸ್ತು ಒಂದೇ ಇದೆ ಎಂಬ ತೀರ್ಮಾನಕ್ಕೆ ಬಂದು ಓದುವಿಕೆಯಲ್ಲಿ ಆಸಕ್ತಿ ಬೆಳಸಿಕೊಳ್ಳುವುದು.


ಅಗತ್ಯ ಸಾಮಗ್ರಿಗಳು : ನೋಟ್ ಪುಸ್ತಕ, ಚಾರ್ಟ್ ಪೇಪರ್, ಪೆನ್ಸಿಲ್, ಕ್ರೇಯಾನ್ಸ್, ನಮಗೆ ಕಣ್ಣಿಗೆ ಕಾಣುವ ಸುತ್ತಮುತ್ತಲಿನ ಸಾಮಾಗ್ರಿಗಳು


ವಿಧಾನ :


ಮಕ್ಕಳ ಸಹಾಯದಿಂದ ತರಗತಿಯಲ್ಲಿರುವ ಸಾಮಾನ್ಯ/ಪರಿಚಿತ ವಸ್ತುಗಳ ಹೆಸರನ್ನು ಪಟ್ಟಿ 69/121


ಉದಾ- ಮೇಜು, ಖುರ್ಚಿ, ಬಾಗಿಲು ಇತ್ಯಾದಿ.


ಸಿದ್ದಪಡಿಸಿದ ನಾಮ ಫಲಕಗಳನ್ನು ಆಯಾ ವಸ್ತುಗಳ ಮೇಲೆ ಅಂಟಿಸುವುದು.


ಇನ್ನೊಂದು ಸೆಟ್ ನಾಮ ಫಲಕಗಳ ಮಿಂಚುಪಟ್ಟಿಗಳನ್ನು ತಯಾರಿಸಿಟ್ಟುಕೊಳ್ಳುವುದು.


ಪದಗಳ ಮಿಂಚುಪಟ್ಟಿಯನ್ನು ತರಗತಿಯಲ್ಲಿ ಪ್ರದರ್ಶಿಸುತ್ತಾ, ಮಕ್ಕಳಿಂದ ಗಟ್ಟಿಯಾಗಿ ಹೇಳಿಸುವುದು.


ಪದ ಉಚ್ಚರಿಸುತ್ತಾ ಆ ವಸ್ತುವಿನ ಬಳಿಗೆ ಮಗು ಹೋಗಲು ತಿಳಿಸುವುದು.


ಮಗು ಕನಿಷ್ಟ ನಾಲೈದು ವಸ್ತುಗಳನ್ನಾದರೂ ಹೆಸರಿಸಲು ಅವಕಾಶ ಕಲ್ಪಿಸುವುದು..


ಆ ಪದಗಳನ್ನು ಕಥೆಯಲ್ಲಿ ಗುರುತಿಸಲು ಅವಕಾಶ ಕಲ್ಪಿಸುವುದು.


ಚಿತ್ರ ಸಹಿತ ನಾಮಫಲಕ/ ಮಿಂಚುಪಟ್ಟಿಗಳನ್ನು ಸಿದ್ಧಪಡಿಸಿ, ಚಟುವಟಿಕೆ ಸ್ಥಳದಲ್ಲಿ/ಸಮಯದಲ್ಲಿ ಮಕ್ಕಳಿಗೆ ಗುರುತಿಸಿ ಓದಲು (ಚಿತ್ರಗಳ ಸಹಾಯದಿಂದ) ಅವಕಾಶ ಕಲ್ಪಿಸುವುದು.



ಅ.ಹಾ: E.C-10 ಊಹಿಸು-ಗುರುತಿಸು




 *ಉದ್ದೇಶಿತ ಬರಹ*   

ಸಾಮರ್ಥ್ಯ : ಸೂಕ್ಷ್ಮ ಸ್ನಾಯು ಚಲನಾ ಕೌಶಲಾಭಿವೃದ್ಧಿ ಅಕ್ಷರಗಳನ್ನು ಗುರುತಿಸುವುದು.


ಚಟುವಟಿಕೆ: 36, ಚುಕ್ಕಿ ಸೇರಿಸು ಅಕ್ಷರಬರೆ (ಗುರಿ: 2 ) ECW-17


ಬರಹ


ಉದ್ದೇಶ :


ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳನ್ನು ಅಭಿವೃದ್ಧಿಪಡಿಸುವುದು.


ಅಕ್ಷರಗಳನ್ನು ಗುರುತಿಸುವುದು.


ಚುಕ್ಕಿಗಳಿಂದ ಅಕ್ಷರಗಳನ್ನು ರಚಿಸುವುದು


ಅಗತ್ಯ ಸಾಮಗ್ರಿ : ನೋಟ್ ಪುಸ್ತಕ, ಪೆನ್ಸಿಲ್, ಕರಿ ಹಲಗೆ, ಸೀಮೆ ಸುಣ್ಣ


ವಿಧಾನ :


ಮಕ್ಕಳಿಗೆ ಚುಕ್ಕಿ ಬಳಸಿ ರ, ಗ, ಸ, ದ, ಅ ಅಕ್ಷರಗಳನ್ನು ಬರೆಯುವ ವಿಧಾನವನ್ನು ಬರೆದು ತೋರಿಸುವುದು, ಮಕ್ಕಳು ರ, ಗ, ಸ, ದ, ಆ ಅಕ್ಷರಗಳ ಚುಕ್ಕಿಗಳನ್ನು ಸೇರಿಸಲು ಹೇಳುವುದು.


ಬರವಣಿಗೆಯ ಮಾದರಿ:


ಶಿಕ್ಷಕರು ಮಕ್ಕಳೆದುರು ಕಪ್ಪುಹಲಗೆಯಲ್ಲಿ ಬರೆಯುವುದು. ಬರವಣಿಗೆಯ ಸರಿಯಾದ ಕ್ರಮವನ್ನು ಮಕ್ಕಳು ನೋಡಲು ಅವಕಾಶ ಕಲ್ಪಿಸುವುದು. ಮಕ್ಕಳ ಹೆಸರು, ಮಕ್ಕಳು ಬರೆದ ಚಿತ್ರಗಳ ಹೆಸರು ಮೊದಲಾದವುಗಳನ್ನು ಮಕ್ಕಳೆದುರೇ ಬರೆಯುವುದು. ಶಿಕ್ಷಕರು ತರಗತಿಯಲ್ಲಿ ಏನನ್ನೇ ಬರೆಯುವುದಾದರೂ ಮಕ್ಕಳ ಎದುರಿನಲ್ಲಿಯೇ ಬರೆಯುವುದು.


 ಅವಧಿ - 6(40ನಿ)

*ಹೊರಾಂಗಣ ಆಟಗಳು* 

ಚಟುವಟಿಕೆ -19 ಜಿಗಿಯುವುದು, ಕುಪ್ಪಳಿಸುವುದು, ತಿರುಗುವುದು


ಸಾಮರ್ಥ್ಯ: ಸ್ಕೂಲ ಸ್ನಾಯು ಚಲನ ಕೌಶಲ ಬೆಳವಣಿಗೆ, ವಿನ್ಯಾಸದ ಅರಿವು, ದೇಹದ ಸಮತೋಲನ ಕಾಲುಗಳ ಹೊಂದಾಣಿಕೆ.


ಬೇಕಾಗುವ ಸಾಮಗ್ರಿ:


ನೆಲದ ಮೇಲೆ ಗೆರೆಯನ್ನು ಎಳೆಯುವುದು..


ಮಕ್ಕಳಿಗೆ ಒಂದು ವಿನ್ಯಾಸವನ್ನು ಶಿಕ್ಷಕರು ಪ್ರದರ್ಶಿಸುವುದು ಉದಾ : ರನ್ ಜಂಪ್, ಈ ವಿನ್ಯಾಸವನ್ನು ಹೇಳುತಾ ಆಟವನ್ನು ಪ್ರಾಂಭಿಸುವುದು.



ಅವಧಿ - 7(40ನಿ)

*ಕಥಾ ಸಮಯ* 

ಸಾಮಗ್ರಿಗಳು : ಕಾಡು ಪ್ರಾಣಿಗಳ ಚಿತ್ರಗಳ ಚಾರ್ಟ, ಸಾಹಿತ್ಯ




> ಆಲಿಸುವ ಸಾಮರ್ಥ್ಯ ಬೆಳೆಸುವುದು.


ಏಕಾಗ್ರತೆಯನ್ನು ಹೆಚ್ಚಿಸುವುದು.


ನಿರರ್ಗಳವಾಗಿ ಮಾತನಾಡುವ ಕೌಶಲ ರೂಢಿಸುವುದು.


> ಅಭಿವ್ಯಕ್ತಿ ಸಾಮರ್ಥ್ಯವನ್ನು ಹೆಚ್ಚಿಸುವುದು.


ಪ್ರಶ್ನಿಸುವ ಮನೋಭಾವ ಉಂಟುಮಾಡುವುದು.


ಸೃಜನಶೀಲತೆಯನ್ನು ಅಭಿವೃದ್ಧಿ ಪಡಿಸುವುದು.




ಚಿತ್ರ ಕಥೆ ಚಾರ್ಟಿ ಪ್ರದರ್ಶನ


ನೀಲಿ ಬಣ್ಣದ ಚಿತ್ರಕಥೆ ಚಾರ್ಟನ್ನು ಪ್ರದರ್ಶಿಸಿ ಕಥೆಯನ್ನು ನಿರೂಪಿಸುವುದು. ಇಲ್ಲಿ ಚಿತ್ರವನ್ನು ನೋಡಿ ಒಂದೊಂದು ಸಾಲನ್ನು ಒಬ್ಬೊಬ್ಬ ವಿದ್ಯಾರ್ಥಿ ಪ್ರೇರೇಪಿಸುವುದು. ಶಿಕ್ಷಕರು ಕಥೆಯನ್ನು ಮತ್ತೊಮ್ಮೆ ನಿರೂಪಿಸುವುದು.


(ಕಥೆಯನ್ನು ಆನಂದಿಸುವುದರಜೊತೆಗೆ ಆಲಿಸುತ್ತಿದ್ದಾರೆಎನ್ನುವುದನ್ನು ಖಚಿತಪಡಿಸಿಕೊಳ್ಳುವುದು)




ಅವಧಿ -8(20ನಿ)

*ಮತ್ತೆ ಸಿಗೋಣ* 

ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು ಒಮ್ಮೆ ಶೀಘ್ರವಾಗಿ ಪುನರಾವರ್ತಿಸಿ/ನೆನಪಿಸಿ


ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರೊತ್ಸಾಹಿಸಿ


ಮರುದಿನ ಮಕ್ಕಳು ಸಂತೋಷದಿಂದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ, ಬೀಳ್ಕೊಡಿ.


ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು ಒಮ್ಮೆ ಶೀಘ್ರವಾಗಿ ಪುನರಾವರ್ತಿಸಿ/ನೆನಪಿಸಿ


[ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ]


------------------------------


 *ವಂದನೆಗಳೊಂದಿಗೆ* ,


ರೇಣುಕಾರಾಧ್ಯ ಪಿ ಪಿ 

                        ಶಿಕ್ಷಕರು

ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು


ಅರಸೀಕೆರೆ, ಹಾಸನ


 *ಸಲಹೆ ಮತ್ತು ಮಾರ್ಗದರ್ಶನ* 


ಶ್ರೀಯುತ ಆರ್.ಡಿ.ರವೀಂದ್ರ


ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕೊಪ್ಪ

Tuesday, 24 June 2025

ವಿದ್ಯಾಪ್ರವೇಶ ದಿನ 21

  https://nalikalirenukaradhyatlm.blogspot.com/


 *ಆಡಿಯೋ ಲಿಂಕ್* 

https://drive.google.com/file/d/1oTdSW3sD3ivPx9Q7GCQYSIKoN703aAnl/view?usp=drivesdk

*ವಿದ್ಯಾಪ್ರವೇಶ ದಿನ-21* 


✒️🚁🎮🎨🎲🧮📏🔍


*ಅವಧಿ -1* (40ನಿ)

*ಶುಭಾಶಯ ವಿನಿಮಯ* 


(ಮಕ್ಕಳೊಂದಿಗೆ ಶಿಕ್ಷಕರ

 ಬೆಳಗಿನ ಕುಶಲೋಪರಿ)  


ಚಟುವಟಿಕೆ 1: My choice


ಅಗತ್ಯವಿರುವ ಸಾಮಗ್ರಿಗಳು: ಚಾರ್ಟ್


ವಿಧಾನ: ಮಕ್ಕಳು ತರಗತಿಯನ್ನು ಪ್ರವೇಶಿಸುವಾಗ ಚಾರ್ಟ್‌ನಲ್ಲಿ ನೀಡಿರುವ ಯಾವುದಾದರೊಂದು ಸಂಕೇತವನ್ನು ಆಯ್ಕೆ ಮಾಡುವಂತೆ ಹೇಳಿ.


    ಮಗುವಿನ ಆಯ್ಕೆಯ ಅನುಸಾರ ಶಿಕ್ಷಕರು ಮಗುವನ್ನು ಸ್ವಾಗತಿಸ ಬೇಕು. ಉದಾ: ಮಗುವು ಹೈ ಫೈ ಆಯ್ಕೆ ಮಾಡಿದರೆ ಶಿಕ್ಷಕರು ಮಗುವಿಗೆ ಹೈ ಫೈ ನೀಡುವುದು.


“ಇಂದು ಯಾವ ವಾರ?” ಎಂದು ಮಕ್ಕಳನ್ನು ಕೇಳಿ ಮತ್ತು “ಇಂದು ಎಂಬ ಉತ್ತರ ಪಡೆಯಿರಿ.


ಹವಾಮಾನ ನಕ್ಷೆ ಮಾಡಿಸಿ.

 *ಮಾತು ಕತೆ* 


( ಶಿಕ್ಷಕರು - ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕ ಚಟುವಟಿಕೆ)

ಮಕ್ಕಳನ್ನು ವೃತ್ತಾಕಾರದಲ್ಲಿ ನಿಲ್ಲಿಸಿ ಅಭಿನಯದೊಂದಿಗೆ ರೈಮ್ ಹೇಳಿಕೊಡಿ.


Teacher: This is the way I clap my hands, Students :clap my hands,


Teacher: clap my hands,


Students: Clap, clap, clap.


Teacher: This is the way I tap my feet,


Students: Tap my feet,


Teacher: Tap my feet


Students: Tap, tap, tap.


Teacher: This is the way I shake my head, Students :Shake my head,


Teacher :Shake my head.


Students :Shake, shake, shake.


   ಶಿಕ್ಷಕರು ಮೊದಲ ಸಾಲನ್ನು ಹೇಳಿದರೆ ಮಕ್ಕಳು ಎರಡನೇ ಸಾಲನ್ನು ಹಾಡುವುದು. ಹೀಗೆಯೇ ಮುಂದುವರೆಸುವುದು.

ಅವಧಿ-2 (40ನಿ)

*ನನ್ನ ಸಮಯ* 

ಮಕ್ಕಳು ತಾವು ನಿರ್ವಹಿಸಲಿಚ್ಛಿಸಿದ ಕಲಿಕಾ ಮೂಲೆಗಳಿಗೆ ಸಾಗಿ ಚಟುವಟಿಕೆಗಳನ್ನು ನಿರ್ವಹಿಸುವುದು. ಶಿಕ್ಷಕರು ಅನುಪಾಲನಾ ಸೂಚಿಯಂತೆ ಕಾರ್ಯ ನಿರ್ವಹಿಸುವುದು.


 ಅವಧಿ-3(40ನಿ)

*ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* (ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ)

ಸಾಮರ್ಥ್ಯ : ಹೋಲಿಕೆ, ಹೊಂದಾಣಿಕೆ, ವಿಂಗಡಣೆ, ಗಾತ್ರ/ಪ್ರಮಾಣದ ಪರಿಕಲ್ಪನೆ ಮತ್ತು ಪರಿಸರದ ಅರಿವು,


ಚಟುವಟಿಕೆ : ಹೋಲಿಕೆ ಮಾಡೋಣ (ಗುರಿ 3)


ಉದ್ದೇಶ:- ವಸ್ತುಗಳ ಗಾತ್ರ ಮತ್ತು ಪ್ರಮಾಣವನ್ನು ಆಧರಿಸಿ ಹೋಲಿಸಿ ವಿಂಗಡಿಸುವುದು.


ಅಗತ್ಯ ಸಾಮಗ್ರಿಗಳು : ಪೆನ್ಸಿಲ್‌ಗಳು, ಮಾಪಕಗಳು, ಹಣ್ಣುಗಳು (ಸೇಬು, ಕಿತ್ತಳೆ), ತರಕಾರಿಗಳು (ಆಲೂಗಡ್ಡೆ/ಈರುಳ್ಳಿ),ಪಾತ್ರೆಗಳು (ಚಮಚ, ಬಟ್ಟಲುಗಳು, ತಟ್ಟೆಗಳು), ವಿಭಿನ್ನ ಗಾತ್ರದ ಇತರೆ ವಸ್ತುಗಳು.


ವಿಧಾನ : ಸರಳವಾದ ಹೋಲಿಕೆ ಕಾರ್ಯವನ್ನು ಮೊದಲು ಸ್ಟ್ರಾಗಳು, ಪೆನ್ಸಿಲ್‌ಗಳು, ಹಣ್ಣುಗಳು, ತರಕಾರಿಗಳುಮತ್ತು ಲಭ್ಯವಿರುವ ಇತರೆ ವಸ್ತುಗಳನ್ನು ಬಳಸಿ ಮಾಡುವುದು.


    ಗಾತ್ರ ಮತ್ತು ಪ್ರಮಾಣವನ್ನು ಆಧರಿಸಿ ಹೋಲಿಕೆ ಮಾಡುವುದು. ಗಾತ್ರದ ಆಧರಿಸಿ ವಸ್ತುಗಳ ಗುಂಪಿನಿಂದ ಅತಿ ದೊಡ್ಡ ವಸ್ತು, ಮಕ್ಕಳ ಗುಂಪಿನಿಂದ ಅತಿ ಎತ್ತರವಾದ ಹುಡುಗ, ಅತಿ ಉದ್ದವಾದ ಕೋಲು/ಜಾಕಪೀಸ್‌ ಆರಿಸಲು ಹೇಳುವುದು.


👉ಹೋಲಿಕೆಯು ಒಂದೇ ವಿಧದ ವಸ್ತುಗಳೊಂದಿಗೆ ಆಗಬೇಕು. ಹೋಲಿಸುವ ಚಟುವಟಿಕೆಯನ್ನು ಮಿಶ್ರ ಗುಂಪಿನಲ್ಲಿ ನಡೆಸಬಾರದು.


ಉದಾ: ಆಯತಾಕಾರದ ವಸ್ತುವನ್ನು ವೃತ್ತಾಕಾರದ ವಸ್ತುವಿನೊಂದಿಗೆ ಅಥವಾ ಚೆಂಡನ್ನು ಸೇಬು ಹಣ್ಣಿನೊಂದಿಗೆ


ಹೋಲಿಸಬಾರದು.


👉ಅದೇ ರೀತಿ ಪ್ರಮಾಣವನ್ನು ಹೋಲಿಸುವಾಗ ಒಂದೇ ರೀತಿಯ ವಸ್ತುಗಳಿರುವ ಯಾವ ಗುಂಪಿನಲ್ಲಿ ವಸ್ತುಗಳು ಹೆಚ್ಚು ಇವೆ ಎಂದು ಹೋಲಿಸಿ ಹೇಳುವುದು.


ಆಹಾ:-IL-14 ಹೋಲಿಕೆ ಮಾಡೋಣ


ಅವಧಿ -4  (40ನಿ)

*ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳ ಚಟುವಟಿಕೆ)

ಸಾಮರ್ಥ್ಯ: ಸೂಕ್ಷ್ಮ ಸ್ನಾಯುಗಳ ಕೌಶಲ ವಿಕಾಸ, ಕಣ್ಣು ಕೈಗಳ ನಡುವೆ ಸಮನ್ವಯ, ಸೃಜನ ಶೀಲತೆಯ ವಿಕಾಸ


ಚಟುವಟಿಕೆ : ರಂಗೋಲಿ ಬಿಡಿಸುವುದು.


ಉದ್ದೇಶಗಳು


•ಸೂಕ್ಷ್ಮ ಸ್ನಾಯುಗಳ ಬೆಳವಣಿಗೆಯಾಗುವುದು.


•ಕಣ್ಣು ಕೈಗಳ ನಡುವೆ ಸಮನ್ವಯತೆ ಬರುವುದು.


•ಸೌಂದರ್ಯೋಪಾಸನೆಯ ವಿಕಾಸವಾಗುವುದು.


•ಮೇಲ್ಮೈ (ಒರಟು, ಮೆದು) ರಚನೆಯೊಂದಿಗೆ ಕಾರ್ಯನಿರ್ವಹಿಸುವುದು.


•ವಿವಿಧ ವಸ್ತುಗಳ ಉಪಯೋಗದ ಜೊತೆಗೆ ಬಳಕೆಯ ವಿಧಾನವನ್ನು ಅರಿಯುವುದು.


ಸಾಮಗ್ರಿಗಳು: ರಂಗೋಲಿ, ಅಂಟು, ಪೇಪರ್, ಪೆನ್ಸಿಲ್ ಮತ್ತು ಬ್ರಶ್.


ವಿಧಾನ: ಸರಳ ರೇಖಾ ಚಿತ್ರಗಳನ್ನು ಅಥವಾ ಮಕ್ಕಳೇ ಚಿತ್ರಗಳನ್ನು ಬರೆಯಬಹುದು. ಅದನ್ನು ಮಕ್ಕಳಿಗೆ ಒದಗಿಸುವುದು. ಒಂದು ಚಿಕ್ಕ ಲೋಟದಲ್ಲಿ ಅಂಟನ್ನು ಇನ್ನೊಂದರಲ್ಲಿ ಬಣ್ಣದ ರಂಗೋಲಿ ಪುಡಿಯನ್ನು ಕೊಡುವುದು.ಮಕ್ಕಳು ಬ್ರಶ್‌ನಿಂದ ಚಿತ್ರದ ಮೇಲೆ ಅಂಟನ್ನು ಸವರಬೇಕು.ನಂತರ ಬೆರಳುಗಳಲ್ಲಿ ರಂಗೋಲಿ ಪುಡಿ ತೆಗೆದುಕೊಂಡು ಅದರ ಮೇಲೆ ಉದುರಿಸುವುದು.        ನಂತರ ರಂಗೋಲಿ ಪುಡಿಯನ್ನು ಉದುರಿಸಲು ಪೇಪರನ್ನಾಗಲಿ ಅಥವಾ ತಟ್ಟೆಯನ್ನಾಗಲಿ ಕೊಡಬೇಕು. ಹಾಗೆ ಉದುರಿಸಿದ ಮೇಲೆ ಮಕ್ಕಳಿಗೆ ಪೇಪರಿನಲ್ಲಿ ಮೂಡಿದ ಚಿತ್ರವನ್ನು ನೋಡಿ ಸಂತೋಷವುಂಟಾಗುತ್ತದೆ.


    ಮಕ್ಕಳಿಗೆ ಇಷ್ಟವಾಗುವಂತಹ ಪರಿಚಿತ ಚಿತ್ರಗಳನ್ನು ಕೊಡಬೇಕು. ಅಥವಾ ಮಕ್ಕಳೇ ಹೂವು, ಮನೆ ಮುಂತಾದ ಚಿತ್ರಗಳನ್ನು ಬರೆಯಲಿ.


ಅ.ಹಾ:-HW-9 ನನ್ನ ಚಿತ್ರ ನನ್ನ ಬಣ್ಣ


ಅವಧಿ -5(60ನಿ)


 *ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ* 



 *ಆಲಿಸುವುದು ಮತ್ತುಮಾತನಾಡುವುದು* 

ಸಾಮರ್ಥ್ಯ: ಪದ ಸಂಯೋಜನೆ


ಚಟುವಟಿಕೆ : ಪದರಚನೆ (ಗುಂಪು-2)


ಉದ್ದೇಶಗಳು:


* ಪದ ರಚನಾ ಸಾಮರ್ಥ್ಯವನ್ನು ಹೆಚ್ಚಿಸುವುದು.


* ಪದ ಸಂಪತ್ತನ್ನು ಹೆಚ್ಚಿಸಿಕೊಳ್ಳುವುದು.


ಸಾಮಗ್ರಿ: ಇಲ್ಲ


ವಿಧಾನ: ಮಕ್ಕಳನ್ನು ವೃತ್ತಾಕಾರವಾಗಿ ಕೂರಿಸಿ ಸ್ಪಷ್ಟವಾದ ಸೂಚನೆಗಳನ್ನು ನೀಡಿ ಚಟುವಟಿಕೆಯನ್ನು ಆರಂಭಿಸಿ.


* ನಾನು ಹೇಳುವ ಅಕ್ಷರಗಳನ್ನು ಆಲಿಸಿ.


ಅಕ್ಷರಗಳನ್ನು ಸೇರಿಸಿ ಪದ ರಚಿಸಿ ಹೇಳಿ,


ಉದಾಹರಣೆ : ಶಿಕ್ಷಕರು ಜೋರಾಗಿ ಸ(ವಿರಾಮ) ರ ಎಂದು ಉಚ್ಚರಿಸಿದಾಗ ಮಕ್ಕಳು ಅಕ್ಷರಗಳನ್ನು ಆಲಿಸಿ ಸರ ಎಂದು ಪದ ರಚಿಸಿ ಹೇಳಲಿ, ಈ ಚಟುವಟಿಕೆಯಲ್ಲಿ ಶಿಕ್ಷಕರು ಹಂತ ಹಂತವಾಗಿ ಮೂರಕ್ಷರ ಹಾಗೂ ನಾಲ್ಕಕ್ಷರದ ಪದಗಳನ್ನು ಬಳಸಬಹುದಾಗಿದೆ.


*ಅರ್ಥಗ್ರಹಿಕೆಯೊಂದಿಗಿನ ಓದು* 

 

ಸಾಮರ್ಥ್ಯ: ಮುದ್ರಿತ ಪಠ್ಯದ ಅರಿವು, ಪದ ಗುರುತಿಸುವಿಕೆ, ಅರ್ಥಗ್ರಹಿಕೆ, ಪದ ಸಂಪತ್ತಿನ ಬೆಳವಣಿಗೆ ಮತ್ತು ಪರಿಸರದ ಅರಿವು.


ಚಟುವಟಿಕೆ :


ಚಿತ್ರ ಸಂಪುಟ (ಗುರಿ-2)


ವಿಷಯ: 'ಪ್ರಾಣಿ ಸಂಗ್ರಹಾಲಯದಲ್ಲಿ ನೋಡಬಹುದಾದ ಪ್ರಾಣಿಗಳು/ ಪಕ್ಷಿಗಳು/ವಸ್ತುಗಳು'


ಉದ್ದೇಶಗಳು:


*ಚಿತ್ರ ಓದುವುದು ಮತ್ತು ಚರ್ಚಿಸಿ ಅರ್ಥ ಮಾಡಿಕೊಳ್ಳುವುದು.


*ಸಂತೋಷ ಮನೋರಂಜನೆ ಹಾಗೂ ಇತರೆ ಉದ್ದೇಶಗಳಿಗಾಗಿ ಸ್ವತಂತ್ರವಾಗಿ ಓದುವುದು.


ಅಗತ್ಯ ಸಾಮಗ್ರಿಗಳು : ಪ್ರಾಣಿ ಸಂಗ್ರಹಾಲಯಕ್ಕೆ ಸಂಬಂಧಿಸಿದ ಚಿತ್ರಗಳು, ಪ್ರಾಣಿ ಸಂಗ್ರಹಾಲಯ -ದಲ್ಲಿ ನೋಡಬಹುದಾದ ಪ್ರಾಣಿಗಳು/ ಪಕ್ಷಿಗಳು/ ವಸ್ತುಗಳ ಕುರಿತ ಕಥನ/ಕವಿತೆ/ ಹಾಡುಗಳ ಪಟ್ಟಿ.


ವಿಧಾನ : ಮಕ್ಕಳಿಗೆ ಪರಿಚಿತವಿರುವ ಹಾಡು ಮತ್ತು ಶಿಶುಗೀತೆಗಳಿಗೆ ಸಂಬಂಧಿಸಿದ ಚಿತ್ರಗಳನ್ನು ಗುರುತಿಸುವುದು.


* ಹಾಡು/ ಕಥೆಯಲ್ಲಿರುವ ವಿಶೇಷ ಪದಗಳನ್ನು ಗುರುತಿಸಿ ಹೆಸರಿಸುವುದು.


* ಹಾಡು/ ಕಥೆಯಲ್ಲಿ ಬರುವ ಮುಖ್ಯ ಪಾತ್ರಗಳನ್ನು ಗುರುತಿಸುವುದು ಮತ್ತು ಪುನರಾವರ್ತಿತ ಪದ/ ಸಾಲುಗಳನ್ನು ಹೇಳುವುದು/ಬರೆಯುವುದು.


* ಮಾದರಿ ಚಿತ್ರಗಳನ್ನು (ಪ್ರಾಣಿಸಂಗ್ರಹಾಲಯಕ್ಕೆ ಸಂಬಂಧಿಸಿದ) ಓದುವುದು ಮತ್ತು ಅದರ ಕುರಿತಾಗಿ


ಪ್ರತಿಕ್ರಿಯಿಸುತ್ತಾ ಶಿಕ್ಷಕರೊಂದಿಗೆ ಚರ್ಚಿಸುವರು.


   ವೈಯಕ್ತಿಕ ಚಿತ್ರ ಸಂಪುಟ: ಕಥೆ ಅಥವಾ ಹಾಡುಗಳಲ್ಲಿ ಬರುವ ವಸ್ತುಗಳು ಅಥವಾ ವಿಶೇಷ ಪದಗಳನ್ನು ಪ್ರತಿ ಮಗು ಸನ್ನಿವೇಶ ಚಿತ್ರಗಳನ್ನು ಓದಿ ಗ್ರಹಿಸಿ ವೈಯಕ್ತಿಕವಾಗಿ ಚರ್ಚಿಸಲು ಅನುವು ಮಾಡಿಕೊಡುವುದು. ಆ ಚಿತ್ರ ಓದಿನ ಗ್ರಹಿಕೆಗಳನ್ನು ಅಭಿವ್ಯಕ್ತಿಸುವುದನ್ನು ಖಾತ್ರಿ ಮಾಡಿಕೊಳ್ಳುವುದು.


ಉದಾ: ಪ್ರಾಣಿಗಳ, ಮರಗಳು, ಪಕ್ಷಿಗಳು, ಪಂಜರಗಳು, ಕುಳಿತುಕೊಳ್ಳುವ ಆಸನಗಳು ಇತ್ಯಾದಿ. ಚಿತ್ರಗಳು/ವಿಡಿಯೋಗಳು/ ಪ್ರಾಣಿ ಸಂಗ್ರಹಾಲಯಕ್ಕೆ ಭೇಟಿ.ಶಿಕ್ಷಕರು ಸುಗಮಕಾರಿಕೆಯಲ್ಲಿ ಬಳಸಬಹುದಾದ ಬೆಳವಣಿಗೆಯ ಪ್ರಶ್ನೆಗಳು:.


*ಪ್ರಾಣಿಸಂಗ್ರಹಾಲಯವನ್ನು ನೋಡಿರುವಿರಾ?


*ನೀವು ಪ್ರಾಣಿಸಂಗ್ರಹಾಲಯದಲ್ಲಿ ಏನೇನು ನೋಡಿರುವಿರಿ?


*ನಿಮಗೆ ಇಷ್ಟವಾದ ಪ್ರಾಣಿ, ಪಕ್ಷಿ ಯಾವುದು?


*ನೀವು ನೋಡಿರುವ ಪ್ರಾಣಿ ಮತ್ತು ಪಕ್ಷಿಗಳನ್ನು ಹೇಳಿರಿ


*ನಿಮ್ಮ ಶಾಲೆಯಲ್ಲಿ ಸುಂದರ ಪಕ್ಷಿಧಾಮ ಮಾಡಿದರೆ ನಿರ್ಮಾಣ ಮಾಡುವುದಾದರೆ ನೀನು ಏನೇನು ಜವಾಬ್ದಾರಿತೆಗೆದುಕೊಳ್ಳುವೆ?


*ಪಕ್ಷಿಧಾಮ ನಿರ್ಮಾಣ ಮಾಡುವುದಕ್ಕೆ ಯಾವೆಲ್ಲ ಸಾಮಗ್ರಿಗಳ ಅವಶ್ಯಕತೆ ಇದೆ? ಇತ್ಯಾದಿ


  ಹೀಗೆ ಶಿಕ್ಷಕರು ತಮ್ಮ ಸ್ಥಳೀಯ ಸಂದರ್ಭಕ್ಕನುಗುಣವಾದ ಪ್ರಶ್ನಾವಳಿಗಳನ್ನು ರೂಪಿಸಿಕೊಂಡು ತರಗತಿಯನ್ನು ಅನುಕೂಲಿಸುವುದು.


  ಪ್ರಾಣಿಸಂಗ್ರಹಾಲಯಕ್ಕೆ ಸಂಬಂಧಿಸಿದ ಚಿತ್ರಗಳನ್ನು / ಚಿತ್ರಪಟಗಳನ್ನು/ ವಿಡಿಯೋ/ ಹಾಡು/ಕಥೆಗಳನ್ನೂ ಬಳಸಿ ಅಥವಾ ಪ್ರದರ್ಶಿಸಿ ಮಕ್ಕಳೊಂದಿಗೆ ಚರ್ಚಿಸಬಹುದು.


  ಸದರಿ ಸಂದರ್ಭದಲ್ಲಿ ಶಿಕ್ಷಕರು ಮಕ್ಕಳನ್ನು ಮುಕ್ತವಾಗಿ ಮಾತನಾಡಲು, ಪ್ರಶ್ನೆಗಳನ್ನು ಕೇಳಲು ಹಾಗೂ ತಮ್ಮ ಸಹಜ ಭಾಷೆಯಲ್ಲಿ ಚರ್ಚಿಸಲು ಅವಕಾಶಗಳನ್ನು ಮಾಡಿಕೊಡುವುದು.ಎಲ್ಲಾ ಮಕ್ಕಳೂ ಅಭಿವ್ಯಕ್ತಿಸುವುದನ್ನು ಖಾತ್ರಿಪಡಿಕೊಳ್ಳುವುದು.


(ಸದರಿ ಚಟುವಟಿಕೆಯ ಮುಂದುವರೆದ ಭಾಗವು 37ನೇ ದಿನದಲ್ಲಿ ಮುಂದುವರೆಯುವುದು


 *ಉದ್ದೇಶಿತ ಬರಹ*   

ಸಾಮರ್ಥ್ಯ: ಉದ್ದೇಶಿತ ಬರವಣಿಗೆ, ಸೃಜನಶೀಲ ಚಿಂತನೆ, ಪದಸಂಪತ್ತಿನ ಅಭಿವೃದ್ಧಿ, ಆಲಿಸಿ ಅರ್ಥ ಮಾಡಿಕೊಳ್ಳುವುದು, ಪರಿಸರದ ಅರಿವು.


ಚಟುವಟಿಕೆ : ಪಟ್ಟಿ ಮಾಡೋಣ (ಗುರಿ-2)


ಉದ್ದೇಶಗಳು:


*ಉದ್ದೇಶಕ್ಕನುಸಾರವಾಗಿ ಬರವಣಿಗೆ ಮಾಡಲು ಅವಕಾಶ ನೀಡುವುದು.


*ಸೃಜನಶೀಲ ಚಿಂತನೆಯನ್ನು ಬೆಳೆಸುವುದು.


*ಪರಿಸರದ ಅರಿವು ಮೂಡಿಸುವುದು.


*ಪದಸಂಪತ್ತನ್ನು ಹೆಚ್ಚಿಸುವುದು,


*ಸೂಚನೆಗಳನ್ನು ಆಲಿಸಿ ಅರ್ಥಮಾಡಿಕೊಳ್ಳುವುದು.


ಅಗತ್ಯ ಸಾಮಗ್ರಿಗಳು : ನೋಟ್ ಪುಸ್ತಕ, ಕಾಗದ, ಶ್ರೇಯಾನ್ಸ್


ವಿಧಾನ : ಮಕ್ಕಳ ಪದಸಂಪತ್ತನ್ನು ಹೆಚ್ಚಿಸಲು ಹಾಗೂ ಉದ್ದೇಶಿತ ಬರವಣಿಗೆಗೆ ಅವಕಾಶ ಕಲ್ಪಿಸಲು ಮಕ್ಕಳಿಗೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ಪದಗಳನ್ನು ಪಟ್ಟಿಮಾಡಲು ತಿಳಿಸಿ.


ಸೂಚಿತ ವಿಷಯ: ನಮ್ಮ ಉಡುಪುಗಳು


   ಇಡೀ ತರಗತಿಯನ್ನು ಒಳಗೊಂಡಂತೆ ಒಂದು ಚಾರ್ಟ್‌ಪೇಪರ್‌ನಲ್ಲಿ ಪಟ್ಟಿ ಮಾಡುವ ಚಟುವಟಿಕೆಯನ್ನು ಆಯೋಜಿಸಬಹುದು. ಈ ಚಾರ್ಟ್‌ನಲ್ಲಿ ಬಳಸಬಹುದಾದ ಸಾಮಾನ್ಯ ಪದಗಳ ಪಟ್ಟಿಯನ್ನು ಶಿಕ್ಷಕರೇ ಸಿದ್ಧಪಡಿಸಿ, ಮಕ್ಕಳು ಇವುಗಳನ್ನು ನೋಡಲು ಹಾಗೂ ಓದಲು ಸಹಾಯಕವಾಗುವಂತೆ ತರಗತಿ ಕೋಣೆಯಲ್ಲಿ ಪ್ರದರ್ಶಿಸುವುದು.


                  *ಬರವಣಿಗೆಯ ಮಾದರಿ*


    ಶಿಕ್ಷಕರು ಮಕ್ಕಳೆದುರು ಕಪ್ಪುಹಲಗೆಯಲ್ಲಿ ಬರೆಯುವುದು. ಬರವಣಿಗೆಯ ಸರಿಯಾದ ಕ್ರಮವನ್ನು ಮಕ್ಕಳು ನೋಡಲು ಅವಕಾಶ ಕಲ್ಪಿಸುವುದು.


 ಮಕ್ಕಳ ಹೆಸರು, ಮಕ್ಕಳು ಬರೆದ ಚಿತ್ರಗಳ ಹೆಸರು ಮೊದಲಾದವುಗಳನ್ನು ಮಕ್ಕಳೆದುರೇ ಬರೆಯುವುದು, ಶಿಕ್ಷಕರು ತರಗತಿಯಲ್ಲಿ ಏನನ್ನೆ ಬರೆಯುವುದಾದರೂ ಮಕ್ಕಳ ಎದುರಿನಲ್ಲಿಯೇ ಬರೆಯವುದು.


 ಅವಧಿ - 6(40ನಿ)

*ಹೊರಾಂಗಣ ಆಟಗಳು* 

ಚಟುವಟಿಕೆ : ನೃತ್ಯ (ಗುರಿ-1)


ಸಾಮರ್ಥ್ಯ: ಸ್ಕೂಲ ಸ್ನಾಯು ಚಲನ ಕೌಶಲ ಬೆಳವಣಿಗೆ


ಸಾಮಗ್ರಿ: ಡ್ರಮ್ / ಸಂಗೀತ


ವಿಧಾನ: ಡ್ರಮ್ ಅಥವಾ ಸಂಗೀತ ನುಡಿಸುವ ಮೂಲಕ ಮಕ್ಕಳು ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಲು ಸೂಚಿಸುವುದು


ಅವಧಿ - 7(40ನಿ)

*ಕಥಾ ಸಮಯ* 

ಶೀರ್ಷಿಕೆ : ಮೈ ರೀಡಿಂಗ್ ಪಾರ್ಟ್ನರ್ 


ಸಾಮಗ್ರಿಗಳು : ಸಾಹಿತ್ಯ, ಪಾತ್ರಗಳ ಚಿತ್ರಗಳು.


ಉದ್ದೇಶಗಳು :


> ಆಲಿಸುವ ಸಾಮರ್ಥ್ಯ ಬೆಳೆಸುವುದು.


> ಕುತೂಹಲ ಪ್ರವೃತ್ತಿಯನ್ನು ಹೆಚ್ಚಿಸುವುದು


> ಪದಸಂಪತ್ತನ್ನು ಹೆಚ್ಚಿಸುವುದು.


ವಿಧಾನ :


*ಕಥೆಯನ್ನು ಓದಿ ಪುನರಾವಲೋಕನ ಮಾಡಿಕೊಳ್ಳುವುದು.


*ಕಥೆಯ ಪಾತ್ರಗಳ ಹೆಸರುಗಳನ್ನು ಮಕ್ಕಳಿಂದ ಹೇಳಿಸುತ್ತಾ ನಿರೂಪಿಸುವುದು.


*ಶಿಕ್ಷಕರು ಕಥೆಯ ಸಂಭಾಷಣೆಯನ್ನು ಹಾವ ಭಾವದೊಂದಿಗೆ ಹೇಳುವುದನ್ನು ಗಮನಿಸಲು ಮಕ್ಕಳಿಗೆ ತಿಳಿಸುವುದು. ನಂತರ ಮಕ್ಕಳು ಅನುಕರಿಸಲು ಪ್ರೇರೇಪಿಸುವುದು.


*ಇದೇ ರೀತಿಯ ಚಿಕ್ಕ ಕಥೆಗಳನ್ನು ಶಿಕ್ಷಕರು ಹೇಳುವುದು.


ಅವಧಿ -8(20ನಿ)

*ಮತ್ತೆ ಸಿಗೋಣ* 

* ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು ಒಮ್ಮೆ ಶೀಘ್ರವಾಗಿ ಪುನರಾವರ್ತಿಸಿ/ನೆನಪಿಸಿ.


* ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆ ಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಿ.


* ಮರುದಿನ ಮಕ್ಕಳು ಸಂತೋಷದಿಂದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ,ಬೀಳ್ಕೊಡಿ.



[ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ]

------------------------------


 *ವಂದನೆಗಳೊಂದಿಗೆ* ,


ರೇಣುಕಾರಾಧ್ಯ ಪಿ ಪಿ 

                        ಶಿಕ್ಷಕರು

ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು

ಅರಸೀಕೆರೆ, ಹಾಸನ


 *ಸಲಹೆ ಮತ್ತು ಮಾರ್ಗದರ್ಶನ* 


ಶ್ರೀಯುತ ಆರ್.ಡಿ.ರವೀಂದ್ರ

ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕೊಪ್ಪ

Monday, 23 June 2025

ವಿದ್ಯಾಪ್ರವೇಶ ದಿನ 20

  https://nalikalirenukaradhyatlm.blogspot.com/


 *ಆಡಿಯೋ ಲಿಂಕ್* 

https://drive.google.com/file/d/1nZCQLHtL_yZzqQaHCyGswEMBuPUkC-Gg/view?usp=drivesdk

*ವಿದ್ಯಾಪ್ರವೇಶ ದಿನ-20* 


✒️🚁🎮🎨🎲🧮📏🔍


*ಅವಧಿ -1* (40ನಿ)

*ಶುಭಾಶಯ ವಿನಿಮಯ* 


(ಮಕ್ಕಳೊಂದಿಗೆ ಶಿಕ್ಷಕರ

 ಬೆಳಗಿನ ಕುಶಲೋಪರಿ)  

ಚಟುವಟಿಕೆ1: ಗಾಡಿ ಬಿಡು


ಚಟುವಟಿಕೆಯ ವಿವರ


ಸಾಮಗ್ರಿಗಳು: ವಿವಿಧ ವಾಹನಗಳ ಚಿತ್ರಗಳು.

ವಿಧಾನ:


ಮಕ್ಕಳು ತರಗತಿ ಪ್ರವೇಶಿಸುವಾಗ ವಿವಿಧ ವಾಹನಗಳ ಚಿತ್ರಗಳನ್ನು ತೋರಿಸಿ.


ಮಗು ತನಗೆ ಇಷ್ಟವಾದ ವಾಹನವನ್ನು ಚಲಾಯಿಸುವಂತೆ ನಟಿಸುತ್ತಾ ತರಗತಿಯನ್ನು ಪ್ರವೇಶಿಸಬೇಕು.


ತರಗತಿ ಪ್ರವೇಶಿಸಿದ ನಂತರ ವೃತ್ತಾಕಾರವಾಗಿ ನಿಲ್ಲುವಂತೆ ಸೂಚಿಸಿ. "What day is today? (ಇಂದುಯಾವ ದಿನ?)" ಎಂದು ಮಕ್ಕಳನ್ನು ಕೇಳಿ ಮತ್ತು Today is_ ಪಡೆಯಿರಿ. ಹವಾಮಾನ ನಕ್ಷೆ ಮಾಡಿಸಿ. ("ಇಂದು) ఎంబ ಉತ್ತರ


 *ಮಾತು ಕತೆ* 


( ಶಿಕ್ಷಕರು - ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕ ಚಟುವಟಿಕೆ)

ವಿಧಾನ: ಮಕ್ಕಳನ್ನು ವೃತ್ತಾಕಾರದಲ್ಲಿ ಇದು ಕೂರಿಸಿ. 1. ಚಿತ್ರ ಕಾರ್ಡ್ ಗಳನ್ನು ಚೀಲದಲ್ಲಿ ಇರಿಸಿ. ಚೀಲವನ್ನು ಪಾಸ್ ಮಾಡಿ ಮತ್ತು ಪಾಸಿಂಗ್ ದಿ ಪಾರ್ಸಲ್‌ಚಟುವಟಿಕೆ ಮಾಡಿಸಿ.


2. ಚೀಲವನ್ನು ಹೊಂದಿರುವ ಮಗುವು ಚೀಲದಿಂದ ಒಂದು ಕಾರ್ಡ್ ಆಯ್ಕೆ ಮಾಡಿ ಚಿತ್ರದ ಕುರಿತು ಮಾತನಾಡಲು ಪ್ರೋತ್ಸಾಹಿಸಿ.


ಪ್ರಶ್ನೆಗಳು: ಚಿತ್ರ ಯಾವುದು? ನೀವು ಆ ಪರಿಸ್ಥಿತಿಯಲ್ಲಿದ್ದರೆ ನೀವು ಏನು ಮಾಡುತ್ತೀರಿ? ನೀವು ಇದನ್ನು ಏಕೆ ಮಾಡುತ್ತೀರಿ? ನೀರನ್ನು ಉಳಿಸಲು/ ಮರಗಳನ್ನು ಉಳಿಸಲು ನಾವು ಏನು ಮಾಡಬೇಕು?

ಅವಧಿ-2 (40ನಿ)

*ನನ್ನ ಸಮಯ* 

ಮಕ್ಕಳು ತಾವು ನಿರ್ವಹಿಸಲಿಚ್ಛಿಸಿದ ಕಲಿಕಾ ಮೂಲೆಗಳಿಗೆ ಸಾಗಿ ಚಟುವಟಿಕೆಗಳನ್ನು ನಿರ್ವಹಿಸುವುದು.ಶಿಕ್ಷಕರು


ಅನುಪಾಲನಾ ಸೂಚಿಯಂತೆ ಕಾರ್ಯ ನಿರ್ವಹಿಸುವುದು.



 ಅವಧಿ-3(40ನಿ)

*ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* (ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ)

ಚಟುವಟಿಕೆ : "ಸೂಚಿತ ಸಂಖ್ಯೆ" (ಅನುಕ್ರಮಜೋಡಣೆ) (ಗುರಿ 3)ಉದ್ದೇಶ ಅನುಕ್ರಮವಾಗಿ ಜೋಡಿಸುವುದು.


ಸಾಮರ್ಥ್ಯ: ಸ್ಪರ್ಶ ಸಂವೇದನೆ, ಪರಿಸರದ ಅರಿವು


2 ಅಗತ್ಯ ಸಾಮಗ್ರಿಗಳು : 1 ರಿಂದ 10 ರವರೆಗಿನ ಕಾರ್ಡುಗಳು (ಕಿಟ್ ನಲ್ಲಿರುವ ಸಂಖ್ಯಾ ಕಾರ್ಡುಗಳನ್ನು ನೀಡುವುದು)


ಆ ವಿಧಾನ : ಮಕ್ಕಳನ್ನು ವೃತ್ತಾಕಾರದಲ್ಲಿ ಕುಳಿತುಕೊಳ್ಳಲು ತಿಳಿಸುವುದು. 1 ರಿಂದ 10 ರವರೆಗಿನ ಸಂಖ್ಯಾ ಕಾರ್ಡುಗಳನ್ನು ಒಂದು ಟ್ರೇನಲ್ಲಿ ಇರಿಸಿ ಅದರಲ್ಲಿಯ ಸೂಚಿತ ಸಂಖ್ಯೆಗಳ ಕಾರ್ಡುಗಳನ್ನು ಕ್ರಮವಾಗಿ ಜೋಡಿಸಲು ಮಕ್ಕಳಿಗೆ ಅವಕಾಶ ಮಾಡಿಕೊಡುವುದು.


ಅ.ಹಾ:-IL-13 ಇವುಗಳ ಉಳಿದ ಭಾಗಗಳನ್ನು ಹೊಂದಿಸೋಣ



ಅವಧಿ -4  (40ನಿ)

*ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳ ಚಟುವಟಿಕೆ)

ಸಾಮರ್ಥ್ಯ: ಸಣ್ಣ ಸ್ನಾಯುಗಳ ಚಲನಾ ಶಕ್ತಿಯ ವಿಕಾಸ ಮತ್ತು ಸೃಜನ ಶೀಲತೆಯ ಅಭಿವೃದ್ಧಿ.


ಚಟುವಟಿಕೆ: ಮಾಡಿ ನೋಡು


ಉದ್ದೇಶಗಳು:


• ಸಣ್ಣ ಸ್ನಾಯುಗಳ ಚಲನಾ ಕೌಶಲಗಳು ಅಭಿವೃದ್ಧಿಯಾಗುವುದು.


• ಬೆರಳುಗಳ ಕುಶಲತೆ ಹೆಚ್ಚುವುದು ಮತ್ತು ಏಕಾಗ್ರತೆ ಬೆಳೆಯುವುದು.


ಸಾಮಗ್ರಿಗಳು: ಕತ್ತರಿ, ವರ್ಣಮಯ ನಕಾಶೆಗಳು, ಅಂಟು.


ವಿಧಾನ: ಮಕ್ಕಳನ್ನು ವೃತ್ತಾಕಾರವಾಗಿ ಕೂರಿಸುವುದು. ಮಕ್ಕಳಿಗೆ ವಿವಿಧ ನಕ್ಷೆ (ತಾಲ್ಲೂಕು, ಜಿಲ್ಲೆಗಳ) ಚಿತ್ರವನ್ನು ಕತ್ತರಿಸಿ ಅದನ್ನು ರಟ್ಟಿನ ಮೇಲೆ ಅಂಟಿಸಲು ಹೇಳುವುದು. ನಂತರ ಅದನ್ನು ಬೇರೆ ಬೇರೆ ಆಕಾರದ 6-7 ತುಂಡುಗಳಾಗಿ ಕತ್ತರಿಸುವುದು (ಟ್ಯಾನ್ ಗ್ರಾಂ ಮಾದರಿಯಲ್ಲಿ). ಕತ್ತರಿಸಿದ ತುಂಡುಗಳನ್ನು ಮತ್ತೆ ಮೊದಲಿನ ನಕ್ಷಾಚಿತ್ರ ಬರುವಂತೆ ಜೋಡಿಸಲು ಹೇಳುವುದು


ಅವಧಿ -5(60ನಿ)


 *ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ* 



 *ಆಲಿಸುವುದು ಮತ್ತುಮಾತನಾಡುವುದು* 

ಸಾಮರ್ಥ್ಯ: ಪದ ಗುರುತಿಸುವಿಕೆ, ಪದ ಸಂಪತ್ತಿನ ಅಭಿವೃದ್ಧಿ, ಮುದ್ರಣದ ಅರಿವು ಹಾಗೂ ಅರ್ಥೈಸುವಿಕೆ.


ಚಟುವಟಿಕೆ : ನಾಮ ಫಲಕ (ಗುರಿ-20)


ಉದ್ದೇಶಗಳು :


ಚಿತ್ರದ ಸಹಾಯದಿಂದ ಪದ ಗುರುತಿಸುವುದು.


ಮುದ್ರಿತ ಪದಗಳನ್ನು ಗಟ್ಟಿಯಾಗಿ ಉಚ್ಚರಿಸುವುದು.


ಅಗತ್ಯ ಸಾಮಗ್ರಿಗಳು : ಕಥಾ ಕಾರ್ಡಗಳು, ಸುಳಿವು ಚಿತ್ರಗಳು, (ಕಥೆಯಲ್ಲಿ ಬರುವ ಸನ್ನಿವೇಶ/ ಘಟನಾವಳಿಚಿತ್ರಗಳು.)


ವಿಧಾನ : ಪ್ರತಿ ಮಗುವಿನ ಹೆಸರಿನ ಮುಂದೆ ಒಂದು ಚಿತ್ರವನ್ನು ಅಂಟಿಸುವುದು. ತನ್ನ ಹೆಸರನ್ನು ಓದಲು ಸಾಧ್ಯವಾಗದ ಮಗು ಚಿತ್ರದ ಮೂಲಕ ತನ್ನನ್ನು ಗುರುತಿಸಿಕೊಳ್ಳುವುದು.


ಉದಾ: ರಮೇಶ ಎಂಬ ಮಗುವಿನ ಹೆಸರಿನ ಮುಂದೆ ಮರದೆ ಚಿತ್ರವನ್ನು ಅಂಟಿಸುವುದು. ರಮೇಶ ಎಂದುಓದಲು ಸಾಧ್ಯವಾಗದೇ ಇದ್ದಾಗ ಚಿತ್ರದ ಮೂಲಕ ತನ್ನನ್ನು ಗುರುತಿಸಿಕೊಳ್ಳುವುದು. ಆ ಹಾ: E.C-9 ಚಿತ್ರ ನೋಡು-ಕಥೆ ಊಹಿಸು


*ಅರ್ಥಗ್ರಹಿಕೆಯೊಂದಿಗಿನ ಓದು* 

 ಸಾಮರ್ಥ್ಯ: ಅವಧಾನ ಮತ್ತು ಅಲಿಸುವಿಕೆ, ಪದ ಸಂಪತ್ತಿನ ಅಭಿವೃದ್ಧಿ, ಅನುಕ್ರಮ ಆಲೋಚನೆ. ಸ್ಮರಣ ಶಕ್ತಿ ಬೆಳವಣಿಗೆ ಚಟುವಟಿಕೆ : ಮುಂದೇನು..?


ಉದ್ದೇಶ : ಅನುಭವ ಮತ್ತು ಪೂರ್ವಜ್ಞಾನದ ಆಧಾರದ ಮೇಲೆ ಊಹಿಸುವುದು ಮತ್ತು ಸಹಸಂಬಂಧೀಕರಿಸುವುದು.


ಅಗತ್ಯ ಸಾಮಗ್ರಿಗಳು : ಕಥಾ ಕಾರ್ಡ್‌ಗಳು, ಸುಳಿವು ಚಿತ್ರಗಳು, (ಕಥೆಯಲ್ಲಿ ಬರುವ ಸನ್ನಿವೇಶ/ ಘಟನಾವಳಿಚಿತ್ರಗಳು.)


ವಿಧಾನ : ಶಿಕ್ಷಕರು ತರಗತಿ ಪ್ರವೇಶ ಮಾಡಿದಾಗ ಮಕ್ಕಳ ಕುಶಲೋಪರಿ ವಿಚಾರಿಸುತ್ತಿರುವಾಗ, "ಮೊದಲು"ನಂತರ" "ಆಮೇಲೆ", "ಅದಕ್ಕಿಂತ ಮೊದಲು" ಇತ್ಯಾದಿ ಪದಗಳನ್ನು ಬಳಸಿ ಅರ್ಥೈಸಬೇಕು.


ಉದಾಹರಣೆ : ತಿಂಡಿ ತಿನ್ನುವ ಮೊದಲು ಏನು ಮಾಡಿದೆ? ತಿಂದ ನಂತರ ಏನು ಮಾಡಿದೆ?........ಹೀಗೆ ಸಂದರ್ಭೋಚಿತವಾಗಿ ಪದಗಳನ್ನು ಬಳಸಿ ಅರ್ಥೈಸಬೇಕು.


• ನಂತರ ಶಿಕ್ಷಕರು ಗಟ್ಟಿ ಧ್ವನಿಯಲ್ಲಿ ಧ್ವನಿಯ ಏರಿಳಿತದೊಂದಿಗೆ, ಮಕ್ಕಳಿಗೆ ಪರಿಚಿತವಿರುವ ಕಥೆಗಳನ್ನು ಹೇಳಬೇಕು. • ಮಕ್ಕಳು ಕಥೆಯನ್ನು ಆಲಿಸಿದ ನಂತರ ಕಥೆಗೆ ಸಂಬಂಧಿಸಿದಂತೆ. ಮೊದಲು ಏನಾಗಿತ್ತು? ಅದಕ್ಕಿಂತ ಮೊದಲುಏನಾಗಿತ್ತು? ಆದಾದ ನಂತರ ಏನಾಯಿತು? ಘಟನೆ ನಡೆಯದಿದ್ದರೆ ಏನಾಗಬಹುದಿತ್ತು? ಆಮೇಲೆ ಏನಾಯಿತು? ಹೀಗೆ.... ಸಂದರ್ಭೋಚಿತವಾಗಿ ಪದ/ವಾಕ್ಯಗಳನ್ನು ಬಳಸಿ ಅವಧಾನವನ್ನು ಕೇಂದ್ರೀಕರಿಸಿಕೊಂಡು ಆಲೋಚನೆಮಾಡುವ, ಸ್ಮರಣಶಕ್ತಿಯನ್ನು ವೃದ್ಧಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು.


ಉದಾಹರಣೆಗೆ : (ಕಥಾವಾಚನ) ಒಮ್ಮೆ ರಾಮಣ್ಣ ಎಂಬ ರೈತ ತನ್ನ ಗದ್ದೆಯಿಂದ ಭತ್ತದ ಮೂಟೆಗಳನ್ನು ತನ್ನ ಎತ್ತಿನ ಗಾಡಿಯಲ್ಲಿ ಮನೆಗೆ ತರುತ್ತಿದ್ದಾಗ ಜೋರಾಗಿ ಮಳೆ ಬಂದು ಗಾಡಿಯ ಚಕ್ರ ಕೆಸರಲ್ಲಿ ಸಿಕ್ಕಿ ಹಾಕಿಕೊಂಡಿತು.ಎಷ್ಟೆ ಶ್ರಮವಹಿಸಿದರೂ ಗಾಡಿ ಕೆಸರಿನಿಂದ ಆಚೆ ಬರಲಿಲ್ಲ. ನಂತರ ಅಕ್ಕಪಕ್ಕದಲ್ಲಿದ್ದ ಜನರ ಸಹಾಯದಿಂದ ಗಾಡಿಯಲ್ಲಿದ್ದ ಮೂಟೆಗಳನ್ನು ಇಳಿಸಿ. ಗಾಡಿಯನ್ನು ಎತ್ತುಗಳ ಹಾಗೂ ಜನರ ಸಹಾಯದಿಂದ ಕೆಸರಿನಿಂದ ಹೊರತಂದನು. ನಂತರ ಮೂಟೆಯನ್ನು ಗಾಡಿಯಲ್ಲಿ ತುಂಬಿಕೊಂಡು ಮನೆಯನ್ನು ತಲುಪಿದನು.


ಕೇಳಬಹುದಾದ ಪ್ರಶ್ನೆಗಳು


ರಾಮಣ್ಣ ಯಾರು? ಅವನು ಏನು ಬೆಳೆದಿದ್ದ? ಭತ್ತದ ಮೂಟೆಯನ್ನು ಮನೆಗೆ ತರುವಾಗ ಏನಾಯಿತು?


ಮಳೆ ಬಂದ ನಂತರ ಏನಾಯಿತು? ಮಳೆ ಬಾರದಿದ್ದಲ್ಲಿ ಏನಾಗುತ್ತಿತ್ತು?


ಗದ್ದೆಯ ಅಕ್ಕಪಕ್ಕದಲ್ಲಿ ಜನರು ಇಲ್ಲದಿದ್ದರೆ ಏನಾಗುತಿತ್ತು?


 *ಉದ್ದೇಶಿತ ಬರಹ*   

ಸಾಮರ್ಥ್ಯ: ಉದ್ದೇಶಿತ ಬರವಣಿಗೆ, ವೀಕ್ಷಣೆ, ಕಲ್ಪನೆ, ಸೃಜನಶೀಲ ಚಿಂತನೆ, ಪರಿಸರ ಪ್ರಜ್ಞೆ,


ಚಟುವಟಿಕೆ: ಹವಾಮಾನ ನಕ್ಷೆ (ಗುರಿ-2)


• ಉದ್ದೇಶಿತ ಬರವಣಿಗೆಯನ್ನು ರೂಢಿಸುವುದು.


ಉದ್ದೇಶಗಳು:


ವೀಕ್ಷಣಾ ಕೌಶಲವನ್ನು ಬೆಳೆಸುವುದು.


• ಸೃಜನಶೀಲ ಚಿಂತನೆಯನ್ನು ಉತ್ತೇಜಿಸುವುದು.


ಪರಿಸರ ಪ್ರಜ್ಞೆ ಮೂಡಿಸುವುದು.


ಅಗತ್ಯ ಸಾಮಗ್ರಿಗಳು : ಕಾಗದ/ ಹಾಳೆಗಳು, ಪೆನ್ಸಿಲ್



* ವಾರದ ದಿನಗಳ ಬಗ್ಗೆ ಮಕ್ಕಳೊಂದಿಗೆ ಚರ್ಚಿಸುವುದು.


ವಿಧಾನ :


ವಾರದ ದಿನಗಳ ಪಟ್ಟಿಯನ್ನು ತರಗತಿಯಲ್ಲಿ ಪ್ರದರ್ಶಿಸುವುದು.


ಹವಾಮಾನದ ಅಂಶಗಳಾದ ಮೋಡ, ಮಳೆ, ಬಿಸಿಲು, ಚಳಿ, ಬಿರುಗಾಳಿ ಇತ್ಯಾದಿ ಅಂಶಗಳನ್ನು ತರಗತಿಯಹವಾಮಾನ ನಕ್ಷೆಯ ಸಹಾಯದಿಂದ ಪರಿಚಯಿಸುವುದು.


ಗುಂಪು ಚಟುವಟಿಕೆಯ ಸಮಯದಲ್ಲಿ ಆ ದಿನದ ಹವಾಮಾನವನ್ನು ಗಮನಿಸಿ ಗುರುತಿಸಲು ತಿಳಿಸುವುದು. (40 ನೇ ದಿನಕ್ಕೆ ಮುಂದುವರೆದಿದೆ)


ಶಿಕ್ಷಕರು ಮಕ್ಕಳೆದುರು ಕಪ್ಪುಹಲಗೆಯಲ್ಲಿ ಬರೆಯುವುದು. ಬರವಣಿಗೆಯ ಸರಿಯಾದ ಕ್ರಮವನ್ನು ಮಕ್ಕಳು ನೋಡಲು ಅವಕಾಶ ಕಲ್ಪಿಸುವುದು.


ಮಕ್ಕಳ ಹೆಸರು, ಮಕ್ಕಳು ಬರೆದ ಚಿತ್ರಗಳ ಹೆಸರು ಮೊದಲಾದವುಗಳನ್ನು ಮಕ್ಕಳೆದುರೇ ಬರೆಯುವುದು. ಶಿಕ್ಷಕರು ತರಗತಿಯಲ್ಲಿ ಏನನ್ನೇ ಬರೆಯುವುದಾದರೂ ಮಕ್ಕಳ ಎದುರಿನಲ್ಲಿಯೇ ಬರೆಯುವುದು.


 ಅವಧಿ - 6(40ನಿ)

*ಹೊರಾಂಗಣ ಆಟಗಳು* 

ಚಟುವಟಿಕೆ : ಸಣ್ಣ ಟೈರುಗಳು / ಬ್ಯಾರೆಲ್ಗಳನ್ನು ತಳ್ಳಿರಿ (ಗುರಿ-1)


ಸಾಮರ್ಥ್ಯ: ಸ್ಕೂಲ ಸ್ನಾಯು ಚಲನ ಕೌಶಲ ಬೆಳವಣಿಗೆ

 

ಸಾಮಗ್ರಿ: ಟೈರುಗಳು / ಬ್ಯಾರೆಲ್ಗಳು


ವಿಧಾನ: . ಶಿಕ್ಷಕರು ಪ್ರತಿ ಮಗುವಿಗೆ ಸಣ್ಣ ಟೈರ್ ಅಥವಾ ಸಣ್ಣ ಬ್ಯಾರೆಲ್ ಅನ್ನು ತಳ್ಳಲು ಸೂಚಿಸುವುದು.


ಮಕ್ಕಳಿಗೆ ಟೈಯರ್ ಅಥ ಬ್ಯಾರೆಲ್ ಅನ್ನು ತಳ್ಳಬಹುದು ಅಥವಾ ಎಳೆಯಬಹುದು ಎಂದು ಸೂಚಿಸುವುದು.


ಅವಧಿ 7(40ನಿ)

 *ಕಥಾ ಸಮಯ* 

ಶೀರ್ಷಿಕೆ : ಮೈ ರೀಡಿಂಗ್ ಪಾರೈನರ್ ಸಾಮಗ್ರಿಗಳು : ಸಾಹಿತ್ಯ, ಚಿತ್ರಗಳು


ಉದ್ದೇಶಗಳು :


> ಆಲಿಸುವ ಸಾಮರ್ಥ್ಯ ಬೆಳೆಸುವುದು.


ವಿಧಾನ :


* ಪದ ಸಂಪತ್ತನ್ನು ಹೆಚ್ಚಿಸುವುದು. ಏಕಾಗ್ರತೆಯನ್ನು ಹೆಚ್ಚಿಸುವುದು.


> ಸಾಹಿತ್ಯದಲ್ಲಿನ ಚಿತ್ರಗಳನ್ನು ಮಕ್ಕಳಿಗೆ ಪ್ರದರ್ಶಿಸಿ ಕಥೆಯ ಪಾತ್ರಗಳನ್ನು/ವಸ್ತುಗಳನ್ನು ಹೆಸರಿಸಲು ಸರಳ ಪ್ರಶ್ನೆಗಳನ್ನು ಕೇಳುತ್ತಾ ಕಥೆಯನ್ನು ಪುನಃ ಹೇಳುವುದು.




> ಕಥೆಯ ವಾಕ್ಯಗಳನ್ನು ಓದುವಾಗ ಕಥೆಯ ನಡುವೆ ಬರುವ ಮಂಗ, ಪುಸ್ತಕ ಇತ್ಯಾದಿ ಚಿತ್ರಗಳನ್ನು ಮಕ್ಕಳುಹೆಸರಿಸುವಂತೆ ಪ್ರಶ್ನೆಗಳನ್ನು ಕೇಳುತ್ತಾ ಕಥೆಯನ್ನು ನಿರೂಪಿಸುವುದು.


(ಕಥೆಯನ್ನು ಆನಂದಿಸುವುದರ ಜೊತೆಗೆ ಆಲಿಸುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿ ಕೊಳ್ಳುವುದು)


ಅವಧಿ 8(20ನಿಮಿಷ)

 *ಮತ್ತೆ ಸಿಗೋಣ* 

• ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು ಒಮ್ಮೆ ಶೀಘ್ರವಾಗಿ ಪುನರಾವರ್ತಿಸಿ/ನೆನಪಿಸಿ


• ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಿ.


• ಮರುದಿನ ಮಕ್ಕಳು ಸಂತೋಷದಿಂದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ. ಬೀಳ್ಕೊಡಿ.


[ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ]


------------------------------


 *ವಂದನೆಗಳೊಂದಿಗೆ* ,


ರೇಣುಕಾರಾಧ್ಯ ಪಿ ಪಿ 

                        ಶಿಕ್ಷಕರು

ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು


ಅರಸೀಕೆರೆ, ಹಾಸನ


 *ಸಲಹೆ ಮತ್ತು ಮಾರ್ಗದರ್ಶನ* 


ಶ್ರೀಯುತ ಆರ್.ಡಿ.ರವೀಂದ್ರ


ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕೊಪ್ಪ

Sunday, 22 June 2025

ವಿದ್ಯಾ ಪ್ರವೇಶ ದಿನ 19

  https://nalikalirenukaradhyatlm.blogspot.com/


 *ಆಡಿಯೋ ಲಿಂಕ್* 

https://drive.google.com/file/d/1ltE_HKDHjapGH3jixC_vDk0wJFR3dPbC/view?usp=drivesdk

*ವಿದ್ಯಾಪ್ರವೇಶ ದಿನ-19* 


✒️🚁🎮🎨🎲🧮📏🔍


*ಅವಧಿ -1* (40ನಿ)

*ಶುಭಾಶಯ ವಿನಿಮಯ* 


(ಮಕ್ಕಳೊಂದಿಗೆ ಶಿಕ್ಷಕರ

 ಬೆಳಗಿನ ಕುಶಲೋಪರಿ)  

ಚಟುವಟಿಕೆ 1


Sun Moon Stars (ಮುಂದುವರಿದ ಚಟುವಟಿಕೆ)


ಸಾಮಗ್ರಿಗಳು: ನಕ್ಷತ್ರಗಳು, ಚಂದ್ರ ಮತ್ತು ಸೂರ್ಯನ ಚಿತ್ರಗಳು


ವಿಧಾನ: ದಿನ-32ರ ಸೂಚನೆಗಳನ್ನು ಅನುಸರಿಸಿ.


ಚಟುವಟಿಕೆ 2 ಹವಾಮಾನ ನಕ್ಷೆ ಮಾಡಿಸಿ.

 *ಮಾತು ಕತೆ* 


( ಶಿಕ್ಷಕರು - ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕ ಚಟುವಟಿಕೆ)


ಚಟುವಟಿಕೆ : ನನ್ನ ಜವಾಬ್ದಾರಿಗಳು (ಶಾಲಾ ಸಂಸತ್ತು) ಗುರಿ -1


ಸಾಮರ್ಥ್ಯ: ಸ್ಮರಣೆ, ಚಿಂತನೆ, ಸ್ವಯಂ ಶಿಸ್ತು, ಸಮಾಜ ಪರ ವರ್ತನೆ.


ಸಾಮಗ್ರಿ: ವಿದ್ಯಾರ್ಥಿಗಳ ಹೆಸರು ಮತ್ತು ಅವರ ಜವಾಬ್ದಾರಿಗಳ ಬರೆಯಲು ಚಾರ್ಟ್ , ಸ್ಕೆಚ್ ಪೆನ್.


ವಿಧಾನ: ವಿದ್ಯಾರ್ಥಿಗಳು ಪ್ರತಿದಿನ ಮಾಡುವಂತಹ ಸರಳ ಕಾರ್ಯ ಹಾಗು ಜವಾಬ್ದಾರಿಗಳ ಕುರಿತಾಗಿ ಒಂದು ಪಟ್ಟಿ ಮಾಡುವುದು.


ಉದಾ: ಗ್ರಂಥಾಲಯ ಮಂತ್ರಿ, ಆಹಾರ ಮಂತ್ರಿ, ಸ್ವಚ್ಛತಾ ಮಂತ್ರಿ, ಆಟಗಳ ಮಂತ್ರಿ, ಶೌಚಾಲಯ ಮಂತ್ರಿ, ಇತ್ಯಾದಿ. ಇಂತಹ ಜವಾಬ್ದಾರಿಗಳು ಹಾಗೂ ಅವುಗಳನ್ನು ನಿರ್ವಹಿಸುವ ಮಕ್ಕಳ ಹೆಸರುಗಳನ್ನು ಬರೆದ ಚಾರ್ಟ್ ಸಿದ್ಧಪಡಿಸುವುದು. ಪ್ರತಿ ಜವಾಬ್ದಾರಿಗಳಿಗೆ ಸಂಬಂಧಿಸಿದಂತೆ ಚಿತ್ರಗಳಿರುವ ಬ್ಯಾಡ್ಜ್ಗಳನ್ನು ತಯಾರಿಸಿ. ಅವುಗಳನ್ನು ಆಯಾ ಮಂತ್ರಿಗಳು ಧರಿಸಲು ತಿಳಿಸುವುದು. ತರಗತಿಯ ಪ್ರತಿ ಮಕ್ಕಳಿಗೂ ಅವಕಾಶ ಸಿಗುವಂತೆ ನೋಡಿಕೊಳ್ಳಿ. ಮಕ್ಕಳ ಸ್ವತಂತ್ರವಾಗಿ ತಮಗೆ ವಹಿಸಿದ ಕಾರ್ಯವನ್ನು ಮಾಡುತ್ತಿದ್ದಾರೆಯೇ ಎಂದು ಗಮನಿಸಿ. ಹೆಚ್ಚು ಹೆಚ್ಚು ಜವಾಬ್ದಾರಿಗಳನ್ನು ನಿರ್ವಹಿಸಲು ಪ್ರೋತ್ಸಾಹಿಸಿ.


ಅವಧಿ-2 (40ನಿ)

*ನನ್ನ ಸಮಯ* 

ಮಕ್ಕಳು ತಾವು ನಿರ್ವಹಿಸಲಿಚ್ಛಿಸಿದ ಕಲಿಕಾ ಮೂಲೆಗಳಿಗೆ ಸಾಗಿ ಚಟುವಟಿಕೆಗಳನ್ನು ನಿರ್ವಹಿಸುವುದು.ಶಿಕ್ಷಕರು


ಅನುಪಾಲನಾ ಸೂಚಿಯಂತೆ ಕಾರ್ಯ ನಿರ್ವಹಿಸುವುದು.



 ಅವಧಿ-3(40ನಿ)

*ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* (ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ)

ಸಾಮರ್ಥ್ಯ: ಹೊಂದಿಸುವುದು, ಪರಿಸರಜಾಗೃತಿ ಬಣ್ಣ, ಆಕಾರ, ಗಾತ್ರಗಳ ಪರಿಕಲ್ಪನೆ, ಪರಿಸರದ ಅರಿವು,


ಚಟುವಟಿಕೆ : ಮುಟ್ಟಿ ಎಣಿಸು (ಗುರಿ 3)


ಉದ್ದೇಶ:- ಮೂರ್ತ ವಸ್ತುಗಳನ್ನು ಸ್ಪರ್ಶಿಸಿ ಎಣಿಸುವುದು.ಅಗತ್ಯ


ಸಾಮಗ್ರಿಗಳು : ಸುತ್ತಲಿನ ವಿವಿಧ ವಸ್ತುಗಳು


ವಿಧಾನ : ಒಂದು ಸಾಲಿನಲ್ಲಿ 10 ವಸ್ತುಗಳನ್ನು ಇಡುವುದು. ಮಕ್ಕಳು ಪ್ರತಿ ವಸ್ತುವನ್ನು ಸ್ಪರ್ಶಿಸಿ ಎಣಿಸುವುದು. ನಂತರ ತಮ್ಮ ತರಗತಿಯ ಮಕ್ಕಳನ್ನು ಎಣಿಸುವುದು. ವಸ್ತು/ಮಕ್ಕಳನ್ನು ಎಣಿಸುವಾಗ ಪ್ರತಿ ಬಾರಿಯೂ ಚಪ್ಪಾಳೆತಟ್ಟಿ ಗಟ್ಟಿಯಾಗಿ


ಸಂಖ್ಯೆಯನ್ನು ಹೇಳುವುದು.


ಅ.ಹಾ:-IL-12 ಎಣಿಸಿ ಬರೆಯೋಣ


ಅವಧಿ -4  (40ನಿ)

*ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳ ಚಟುವಟಿಕೆ)

ಸಾಮರ್ಥ್ಯ: ಸಣ್ಣ ಸ್ನಾಯುಗಳ ಚಲನಾ ಕೌಶಲಗಳ ವಿಕಾಸ ಮತ್ತು ಸೃಜನಶೀಲತೆಯ ಅಭಿವೃದ್ಧಿ, ಚಟುವಟಿಕೆ: ಮಾಡಿನೋಡು.


ಉದ್ದೇಶಗಳು:


ಸಣ್ಣ ಸ್ನಾಯುಗಳ ಚಲನಾ ಕೌಶಲಗಳು ಅಭಿವೃದ್ಧಿಯಾಗುವುದು.


ಬೆರಳುಗಳ ಕುಶಲತೆ ಹೆಚ್ಚುವುದು ಮತ್ತು ಏಕಾಗ್ರತೆ ಬೆಳೆಯುವುದು.


ಸಾಮಗ್ರಿಗಳು: ಕತ್ತರಿ, ವರ್ಣಮಯ ಚಿತ್ರಗಳು, ಅಂಟು,


ವಿಧಾನ: ಮಕ್ಕಳನ್ನು ವೃತ್ತಾಕಾರವಾಗಿ ಕೂರಿಸುವುದು.ಹಳೆಯ ದಿನಪತ್ರಿಕೆಯಲ್ಲಿನ ಹೂ/ ಪ್ರಾಣಿ/ ಪಕ್ಷಿ/ಮನೆ ಇತ್ಯಾದಿಗಳ ಚಿತ್ರವನ್ನು ಕತ್ತರಿಸಿ ಅದನ್ನು ರಟ್ಟಿನ ಮೇಲೆ ಅಂಟಿಸಲು ಹೇಳುವುದು.ನಂತರ ಅದನ್ನು ಬೇರೆ ಬೇರೆ ಆಕಾರದ 6-7 ತುಂಡುಗಳಾಗಿ ಕತ್ತರಿಸುವುದು. [ಟ್ಯಾನ್ ಗ್ರಾಂ ಮಾದರಿಯಲ್ಲಿ ಕತ್ತರಿಸಿದ ತುಂಡುಗಳನ್ನು ಮತ್ತೆ ಮೊದಲಿನ ಚಿತ್ರ ಬರುವಂತೆ ಜೋಡಿಸಲು ಹೇಳುವುದು. ಇದರಿಂದ ಅಲ್ಪವೆಚ್ಚದ ಸಾಮಗ್ರಿಗಳನ್ನು ಬಳಸಿ ಮಗುವಿನ ಸೃಜನ ಶೀಲತೆಗೆ ಪ್ರೋತ್ಸಾಹ ನೀಡಿದಂತೆ ಆಗುವುದು.


ಅ.ಹಾ:-HW-8 ನನ್ನ ಕುಟುಂಬ


ಅವಧಿ -5(60ನಿ)


 *ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ* 


 *ಆಲಿಸುವುದು ಮತ್ತುಮಾತನಾಡುವುದು* 

ಸಾಮರ್ಥ್ಯ: ಧ್ವನಿ ವಿಜ್ಞಾನದ ಅರಿವು, ಪದ ಸಂಪತ್ತಿನ ಅಭಿವೃದ್ಧಿ, ಚಾಲನಾ ಕೌಶಲಗಳ ಅಭಿವೃದ್ಧಿ, ಚಟುವಟಿಕೆ: 15 ಪ್ರಾಸ ಪದಗಳನ್ನು ಆಲಿಸುವುದು (ಗುರಿ-02) (26ನೇ ದಿನದಿಂದ ಮುಂದುವರೆದಿದೆ)


ಉದ್ದೇಶಗಳು:


ಧ್ವನಿ ವಿಜ್ಞಾನದ ಅರಿವನ್ನು ಹೊಂದುವಂತೆ ಮಾಡುವುದು.


ಪ್ರಾಸಪದಗಳ ಮೂಲಕ ಪದಸಂಪತ್ತನ್ನು ಹೆಚ್ಚಿಸುವುದು.


ಸ್ಕೂಲ ಹಾಗೂ ಸೂಕ್ಷ್ಮ ಚಾಲನಾ ಕೌಶಲಗಳನ್ನು ಅಭಿವೃದ್ಧಿಪಡಿಸುವುದು.


ಅಗತ್ಯ ಸಾಮಗ್ರಿಗಳು:- ಇಲ್ಲ


ವಿಧಾನ:


ಮಕ್ಕಳಿಗೆ 26ನೇ ದಿನದಲ್ಲಿ ಹೇಳಿದ ಪ್ರಾಸ ಗೀತೆಯನ್ನೇ ಹೇಳುವುದು.


ಹಾಡು ಹೇಳುವಾಗ ಪ್ರಾಸ ಪದಗಳನ್ನು ಸ್ವಲ್ಪ ಒತ್ತಿ ಹೇಳುವುದು.


ಪ್ರಾಸ ಗೀತೆಗೆ ತಕ್ಕಂತೆ ಅಭಿನಯಿಸಲು ತಿಳಿಸುವುದು.


ಪ್ರಾಸಗೀತೆಯಲ್ಲಿಯ ಪ್ರಾಸ ಪದಗಳನ್ನು ಪರಿಚಯಿಸಿ ಅದಕ್ಕೆ ಮತ್ತೆ ಇನ್ನೊಂದು ಪ್ರಾಸ ಪದ ಸೇರಿಸುವುದು.


ಒತ್ತಿ ಹೇಳಿದ ಪದಗಳನ್ನು ಪ್ರತ್ಯೇಕವಾಗಿ ಹೇಳಿಸುವುದು.



*ಅರ್ಥಗ್ರಹಿಕೆಯೊಂದಿಗಿನ ಓದು* 

 ಸಾಮರ್ಥ್ಯ: ಸ್ವಯಂ ಅರಿವು, ಧನಾತ್ಮಕ ಸ್ವ-ಅರಿವಿನ ಅಭಿವೃದ್ಧಿ, ಆಲಿಸುವುದು ಹಾಗೂ ಮಾತನಾಡುವ ಕೌಶಲಅಭಿವೃದ್ಧಿ


ಚಟುವಟಿಕೆ : ನನ್ನ ವಿವರ (ಗುರಿ-1)


ಉದ್ದೇಶ: ತನಗೆ ಇಷ್ಟವಾದ ಮತ್ತು ಇಷ್ಟವಲ್ಲದ ಅಂಶಗಳನ್ನು ಅಭಿವ್ಯಕ್ತಿಗೊಳಿಸುವುದು.


ಅಗತ್ಯ ಸಾಮಗ್ರಿಗಳು: ಪೆನ್, ಪೆನ್ಸಿಲ್, ಕ್ರೇಯಾನ್ಸ್


ವಿಧಾನ: ಶಿಕ್ಷಕರು ಮೊದಲು ತನಗೆ ಇಷ್ಟವಾದ ಅಂಶಗಳು, ಇಷ್ಟವಾಗದ ಅಂಶಗಳನ್ನು ಮಕ್ಕಳ ಜೊತೆ ಹಂಚಿಕೊಳ್ಳಬೇಕು. ನಂತರ ಪ್ರತಿ ಮಗುವಿಗೆ ತನಗೆ ಇಷ್ಟವಾದ. ಇಷ್ಟವಾಗದ ಅಂಶಗಳ ಬಗ್ಗೆ ಯೋಚಿಸಿಮುಕ್ತವಾಗಿ ಮಾತನಾಡಲು ಅವಕಾಶ ನೀಡುವುದು.


ಯಾವುದೇ ಚಟುವಟಿಕೆಯಲ್ಲಿ ಬಾಗವಹಿಸುವುದರ ಜೊತೆ ಕೆಲವೊಂದು ಜವಾಬ್ದಾರಿ ತೆಗೆದುಕೊಳ್ಳುವಂತೆ ಪ್ರೇರೇಪಿಸುವುದು. ಬಿಳಿ ಹಾಳೆಯನ್ನು ನೀಡಿ ತನಗೆ ಇಷ್ಟವಾದ ತಿಂಡಿ. ಗೊಂಬೆ, ಪ್ರಾಣಿ, ಪಕ್ಷಿ, ವ್ಯಕ್ತಿ, ಹೂ ಇತ್ಯಾದಿಚಿತ್ರಗಳನ್ನು


ಬರೆದು ಬಣ್ಣ ತುಂಬಿ ಹೆಸರಿಸಲು ಹೇಳುವುದು


 *ಉದ್ದೇಶಿತ ಬರಹ*   

ಸಾಮರ್ಥ್ಯ : ಬರವಣಿಗೆ ಕೌಶಲಗಳ ಅಭ್ಯಾಸ, ಪದಸಂಪತ್ತಿನ ಅಭಿವೃದ್ಧಿ, ಕೈ ಕಣ್ಣು ಸಂಯೋಜನೆ, ಸೃಜನಶೀಲತೆ.


ಚಟುವಟಿಕೆ ಹೆಸರು : ಪುಸ್ತಕ ರಚನೆ (ಗುರಿ : 2)


ಉದ್ದೇಶಗಳು:


ಮಕ್ಕಳ ಹಸ್ತಪತ್ರಿಕೆಯನ್ನು ಸಿದ್ಧಪಡಿಸುವುದು. ಮಕ್ಕಳ ಇಷ್ಟದ ಚಿತ್ರಗಳನ್ನು ಸಂಗ್ರಹಿಸಿ ಪುಸ್ತಕ ತಯಾರಿಸುವುದು.


ಚಿತ್ರಗಳನ್ನು ಬಿಡಿಸುವ ಮತ್ತು ಸಂಗ್ರಹಿಸುವ ಹವ್ಯಾಸ ಬೆಳೆಸುವುದು.


ಅಗತ್ಯ ಸಾಮಗ್ರಿಗಳು: ಹಾಳೆಗಳು, ಬಣ್ಣಗಳು, ಚಾರ್ಟ್ ಪೇಪರ್


ವಿಧಾನ: ಶಿಕ್ಷಕರು. 2 ಎ4 ಅಳತೆಯ ಹಾಳೆಗಳನ್ನು ಮಡಚಿ ಪಿನ್ ಮಾಡುವ ಮೂಲಕ ಪ್ರತಿ ಮಗುವಿಗೂ ತನ್ನದೇ ಆದ ಪುಟ್ಟ ನೋಟ್‌ಪುಸ್ತಕವನ್ನು ಒದಗಿಸುವುದು. ಇದರಲ್ಲಿ ಮಕ್ಕಳು ಸೂಚಿತ ವಿಷಯದ ಬಗ್ಗೆ ಚಿತ್ರ ಬಿಡಿಸಲು ಅಥವಾ ಬರೆಯಲು ತಿಳಿಸುವುದು.


ಸಲಹಾತ್ಮಕ ವಿಷಯ: ನನ್ನ ಆಟಿಕೆಗಳು


ಆ.ಹಾ: E.C-8 ನನ್ನ ಚಿತ್ರ ನನ್ನ ಬಣ್ಣ


ಶಿಕ್ಷಕರು ಮಕ್ಕಳೆದುರು ಕಪ್ಪುಹಲಗೆಯಲ್ಲಿ ಬರೆಯುವುದು. ಬರವಣಿಗೆಯ ಸರಿಯಾದ ಕ್ರಮವನ್ನು ಮಕ್ಕಳು ನೋಡಲು ಅವಕಾಶ ಕಲ್ಪಿಸುವುದು.


ಮಕ್ಕಳ ಹೆಸರು, ಮಕ್ಕಳು ಬರೆದ ಚಿತ್ರಗಳ ಹೆಸರು ಮೊದಲಾದವುಗಳನ್ನು ಮಕ್ಕಳೆದುರೇ ಬರೆಯುವುದು. ಶಿಕ್ಷಕರು ತರಗತಿಯಲ್ಲಿ ವಿನನ್ನೆ ಬರೆಯುವುದಾದರೂ ಮಕ್ಕಳ ಎದುರಿನಲ್ಲಿಯೇ ಬರೆಯುವುದು.



 ಅವಧಿ - 6(40ನಿ)

*ಹೊರಾಂಗಣ ಆಟಗಳು* 


ಚಟುವಟಿಕೆ : ಕೈಂಬಿಂಗ್ (ಹತ್ತುವುದು) (ಗುರಿ-1)


ಸಾಮರ್ಥ್ಯ: ಸ್ಕೂಲ ಸ್ನಾಯು ಚಲನ ಕೌಶಲ ಬೆಳವಣಿಗೆ


ಬೇಕಾಗುವ ಸಾಮಗ್ರಿ: ಹಗ್ಗ ಏಣಿ ಅಥವಾ ಮೆಟ್ಟಿಲುಗಳು


ವಿಧಾನ: ಮೆಟ್ಟಿಲುಗಳಿರುವ ಯಾವುದಾದರು ಪ್ರದೇಶದಲ್ಲಿ ಮಕ್ಕಳು ಮೆಟ್ಟಿಲುಗಳನ್ನು ಹತ್ತಲು ಹಾಗು 

ಹಾಗು ಇಳಿಯಲು ಸೂಚಿಸುವುದು.


ಅವಧಿ - 7(40ನಿ)

*ಕಥಾ ಸಮಯ* 

ವಿಧಾನ :


> ಮೊದಲ ದಿನದ ಉದ್ದೇಶದಂತೆ ಕಥಾ ಸಮಯವು ಮುಂದುವರೆಯುತ್ತದೆ.


> ಶಿಕ್ಷಕರು ಕಥೆಯನ್ನು ನಿರೂಪಿಸುವುದರ ಜೊತೆಗೆ ಮಕ್ಕಳ ನೆರವನ್ನು ಪಡೆದುಕೊಳ್ಳು ವುದರ ಮೂಲಕಕಥೆಯನ್ನು ಪೂರ್ಣ ಗೊಳಿಸುವುದು.


ಉದಾ : ಮುಂದೆನಾಯಿತು? ಎಲ್ಲಿಂದ ಪುಸ್ತಕ ಬಂತು? ಇತ್ಯಾದಿ


ಕಥೆಯನ್ನು ಹೇಳಿದ ನಂತರ ಕನ್ನಡದಲ್ಲಿ ಸರಳ ಪ್ರಶ್ನೆಗಳನ್ನು ಕೇಳಿ.


(ಕಥೆಯನ್ನು ಆನಂದಿಸುವುದರ ಜೊತೆಗೆ ಆಲಿಸುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿ ಕೊಳ್ಳುವುದು)


ಅವಧಿ -8(20ನಿ)

*ಮತ್ತೆ ಸಿಗೋಣ* 


ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು ಒಮ್ಮೆ ಶೀಘ್ರವಾಗಿ ಪುನರಾವರ್ತಿಸಿ/ನೆನಪಿಸಿ


ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ


ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಿ, ಮರುದಿನ ಮಕ್ಕಳು ಸಂತೋಷದಿಂದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ, ಬೀಳ್ಕೊಡಿ




[ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ]


------------------------------


 *ವಂದನೆಗಳೊಂದಿಗೆ* ,


ರೇಣುಕಾರಾಧ್ಯ ಪಿ ಪಿ 

                        ಶಿಕ್ಷಕರು

ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು


ಅರಸೀಕೆರೆ, ಹಾಸನ


 *ಸಲಹೆ ಮತ್ತು ಮಾರ್ಗದರ್ಶನ* 


ಶ್ರೀಯುತ ಆರ್.ಡಿ.ರವೀಂದ್ರ


ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕೊಪ್ಪ